ಮದುಮಗಳ ಲಂಗದೊಳಗೆ ನುಗ್ಗಿದ ಸ್ನೇಹಿತರು; ಸತ್ಯ ತಿಳಿಯಲು ಫೋಟೋ ನೋಡಿ!

By Suvarna News  |  First Published Dec 6, 2020, 12:12 PM IST

ವಿವಾಹ ಪೂರ್ವ ಶಾಸ್ತ್ರಗಳಲ್ಲಿ ಭಾಗಿಯಾಗಿರುವ ನಾಗಬಾಬು ಪುತ್ರಿ ನಿಹಾರಿಕಾ ಶೇರ್ ಮಾಡಿಕೊಂಡ ಡಿಫರೆಂಟ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್....
 


ಟಾಲಿವುಡ್‌ ಮೆಗಾ ಸ್ಟಾರ್ ಚಿರಂಜೀವಿ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ನಾಗಬಾಬು ಪುತ್ರಿ ನಿಹಾರಿಕಾ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಪೂರ್ವ ಶಾಸ್ತ್ರ ಕಾರ್ಯಕ್ರಮಗಳು ಶುರುವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಮದುವೆ ಕೌಂಟ್‌ಡೌನ್ ಶುರು ಮಾಡಿರುವ ನಿಹಾರಿಕಾ ಸ್ನೇಹಿತರ ಜೊತೆ ಶೇರ್ ಮಾಡಿರುವ ಫೋಟೋಗಳು ವೈರಲ್ ಆಗುತ್ತಿದೆ.

Tap to resize

Latest Videos

undefined

ನಿಹಾರಿಕಾ ತಮ್ಮ ಎಂಗೇಜ್‌ಮೆಂಟ್‌ಗೆ ಇಬ್ಬರು ಸ್ನೇಹಿತರ ಸಹಾಯದಿಂದ ರೆಡಿಯಾಗಿದ್ದರು. ತಮ್ಮ ಲೆಹೆಂಗಾ ಎತ್ತಿ ಹಿಡಿದುಕೊಂಡ ನಿಹಾರಿಕಾ ಲಂಗದೊಳಗೆ ಇಬ್ಬರು ಸ್ನೇಹಿತರು ನುಗ್ಗಿ ಏನೋ ಮಾಡುತ್ತಿದ್ದರು. ಯಾಕೀ ಹುಡುಗಿಯರು ಹೀಗೆ ಮಾಡುತ್ತಿದ್ದಾರೆ ಎಂಬ ಕುತೂಹಲದಲ್ಲಿರುವವರಿಗೆ ನಿಹಾರಿಕಾ ಪೋಸ್ಟ್‌ ಮೂಲಕ ಉತ್ತರ ನೀಡಿದ್ದಾರೆ.

 

'ಓಕೆ. ಇದರ ಬಗ್ಗೆ ನಾನು ವಿವರಿಸುತ್ತೇನೆ. ನನ್ನ ಸ್ನೇಹಿತರಿಬ್ಬರು ನನ್ನ ಹೀಲ್ಸ್‌ ಚಪ್ಪಲಿ ಸರಿ ಮಾಡುತ್ತಿದ್ದರು. ಇವರಿಬ್ಬರು ಇಲ್ಲದಿದ್ದರೆ, ಹೀಗೆಲ್ಲಾ ನನ್ನ ನೋಡಿಕೊಳ್ಳದಿದ್ದರೆ ಮತ್ಯಾರು ನೋಡಿಕೊಳ್ಳಬೇಕು ನನಗೆ ಗೊತ್ತಿಲ್ಲ. ಲವ್‌ ಯು' ಎಂದು ನಿಹಾರಿಕಾ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. 

ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ ನಿಶ್ಚಿತಾರ್ಥ; ಸಂಭ್ರಮ ಹೇಗಿತ್ತು ನೋಡಿ! 

ಕೆಲವರು ಈ ಫೋಟೋ ಅದ್ಭುತವಾಗಿದೆ ಎಂದು ಹೊಗಳಿದರೆ ಇನ್ನು ಕೆಲವರು ಈ ಫೋಟೋ ನೋಡಿ 'ಈ ಹುಡುಗಿಯರು ಯಾಕೆ ಲಂಗದೊಳಗೆ ನುಗ್ಗುತ್ತಾರೆ' ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ನಿಹಾರಿಕಾ ಡೆಸ್ಟಿನೇಷನ್ ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

click me!