
ನಟಿ ದಿಯಾ ಮಿರ್ಝಾ ಮಿಸ್ ಏಷ್ಯಾ ಪೆಸಿಫಿಕ್ ಟೈಟಲ್ ಗೆದ್ದಿದ್ದರ ಬಗ್ಗೆ ಮಾತನಾಡಿದ್ದಾರೆ. ಸಣ್ಣ ವಿಡಿಯೋ ಪೋಸ್ಟ್ ಮಾಡಿದ ನಟಿ, ಆಕೆಯ ತಂದೆ ಬರೆದ ರಾಬರ್ಟ್ ಫ್ರಾಸ್ಟ್ ಅವರ ಸಾಲುಗಳು ಆಕೆಗೆ ಸದಾ ಸ್ಫೂರ್ಥಿ ಎಂದಿದ್ದಾರೆ.
ನಟಿ ಮಾಡೆಲಿಂಗ್ ಮಾಡುವಾಗ 16 ವರ್ಷದಾಕೆ ಎಂದು ಸಂಯೋಜಕರಿಂದ ಗುರುತಿಸಲ್ಪಟ್ಟಿದ್ದರು. ನಂತರ ಅವಳು ಮಾಡೆಲಿಂಗ್ ಕೆಲಸ ಆರಂಭಿಸಿದರು. ಹೈದರಾಬಾದ್‌ನಿಂದ ಬೆಂಗಳೂರಿಗೆ ರಾತ್ರಿಯ ಬಸ್‌ನಲ್ಲಿ ಪ್ರಯಾಣಿಸಲು ಪ್ರಾರಂಭಿಸುತ್ತಿದ್ದರು.
ಮುತ್ತಿನ ಹಾರ ಧರಿಸಿದ ರಣವೀರ್: ದೀಪಿಕಾಳ ಸರ ತೆಗ್ಯಪ್ಪಾ ಎಂದ ನೆಟ್ಟಿಗರು
ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಸಂಪರ್ಕಿಸಿದ ನಂತರವೂ ದಿಯಾ ಹಿಂಜರಿಯುತ್ತಿದ್ದರು. ಅಂತಹ ಸ್ಪರ್ಧೆಗಳು ನಡೆಯುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ ಎಂದೂ ಭಾಗವಹಿಸಿರಲಿಲ್ಲ. ಅಲ್ಲಿ ಮಿಸ್ ಇಂಡಿಯಾ ಆಗಲು ಬಯಸುವ ಹುಡುಗಿಯರು ಇದ್ದರು ಆದರೆ ನಾನು ಅವರಲ್ಲಿ ಒಬ್ಬಳಾಗಿರಲಿಲ್ಲ ಎಂದಿದ್ದಾರೆ.
ನಾನು ಮನೆಗೆ ಹೋಗಿ ನನ್ನ ಅಮ್ಮನಿಗೆ ನಾನು ಸ್ಪರ್ಧಿಸಲು ಬಯಸುತ್ತೇನೆ ಎಂದಾಗ ಆಕೆ ನನಗೆ ಹುಚ್ಚು ಎಂಬಂತಿದ್ದಳು. ನನ್ನ ತಂದೆ ನನಗೆ ಭಾಗವಹಿಸಲು ಅನುಮತಿ ನೀಡುವಂತೆ ಮನವರಿಕೆ ಮಾಡಿದರು. ಅವರ ಪ್ರಕಾರ ಈ ಸ್ಪರ್ಧೆ ಹೊಸದನ್ನು ಕಲಿಯಲು ನನಗೆ ಸಿಗುವ ಒಂದು ಅವಕಾಶವಾಗಿತ್ತು ಎಂದಿದ್ದಾರೆ. ನಾನು ಗೆಲ್ಲಬೇಕೆಂದು ಬಯಸಿರಲಿಲ್ಲ. ಲಾರಾ ದತ್ತಾ ಗೆಲ್ಲುತ್ತಾರೆಂದು ನಮಗೆಲ್ಲರಿಗೂ ಗೊತ್ತಿತ್ತು. ಆಕೆ ಎಲ್ಲರ ಫೇವರೇಟ್ ಮತ್ತು ಅವರಿಗೆ ಹೆಚ್ಚಿನ ಅನುಭವ ಇತ್ತು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.