ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ದೂರವಾಗಿದ್ದಾರೆ ಎನ್ನುವ ಸುದ್ದಿ ಇದೆ. ಈ ಮಧ್ಯೆ ಲಂಡನ್‌ನಿಂದ ಬಂದ ಐಶ್ ವಿಡಿಯೋ ವೈರಲ್ ಆಗಿದ್ದು, ಆರಾಧ್ಯ ನೋಡಿದ ನೆಟ್ಟಿಗರು ಮಾನಸಿಕ ಸ್ಥಿತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಅಮ್ಮನ ಮಗಳು ಎಂದೇ ಐಶ್ವರ್ಯ ರೈ ಬಚ್ಚನ್ ಮಗಳು ಆರಾಧ್ಯ ಬಿಂಬಿಸಲ್ಪಟ್ಟಿದ್ದಾಳೆ (Mom's Kid Aradhya Bachchan). ಸ್ಟಾರ್ ಕಿಡ್ ಆರಾಧ್ಯ ಹುಟ್ಟಿದಾಗಿನಿಂದ ಆಕೆ ಮೇಲೆ ನೆಟ್ಟಿಗರ ಕಣ್ಣಿದೆ. ಐಶ್ ಜೊತೆ ಸದಾ ಕಾಣಿಸಿಕೊಳ್ಳುವ ಆರಾಧ್ಯ, ದೊಡ್ಡವಳಾದ್ರೂ ಚಿಕ್ಕವಳಂತೆ ವರ್ತಿಸ್ತಾಳೆ ಎನ್ನುವ ಆರೋಪವಿದೆ. ಆರಂಭದಿಂದಲೂ ಐಶ್ವರ್ಯ, ಆರಾಧ್ಯ ಕೈ ಹಿಡಿದು ನಡೆಸುತ್ತಿದ್ದು, ಇದೇ ವಿಷ್ಯ ಅನೇಕ ಬಾರಿ ಟ್ರೋಲ್ ಆಗ್ತಿದೆ.
ಆರಾಧ್ಯ (Aaradhya) ಚಿಕ್ಕವಳಿರುವಾಗ ಮಾತ್ರವಲ್ಲ ದೊಡ್ಡವಳಾದ್ಮೇಲೂ ಐಶ್ವರ್ಯ (Aishwarya) ರೈ ಆರಾಧ್ಯ ಕೈ ಬಿಡೋದಿಲ್ಲ. ಎಲ್ಲಿ ಹೋದ್ರೂ ಮಗಳ ಕೈ ಹಿಡಿದು ನಡೆಯುತ್ತಾರೆ. ಇದನ್ನು ನೋಡಿದ ನೆಟ್ಟಿಗರು ಈಗ ಆರಾಧ್ಯ ಅಬ್ನಾರ್ಮಲ್ (Abnormal) ಅಂತ ಕಮೆಂಟ್ ಮಾಡೋಕೆ ಶುರು ಮಾಡಿದ್ದಾರೆ.
ಆಲಿಯಾ ಮಗಳಿಗೆ 16 ವರ್ಷವಾಗ್ತಿದ್ದಂತೆ ಈ ಸಿನಿಮಾ ತೋರಿಸ್ತಾರಂತೆ ಅಜ್ಜ ಮಹೇಶ್ ಭಟ್
ಐಶ್ವರ್ಯ ರೈ ಮಗಳು ಆರಾಧ್ಯ ಬಚ್ಚನ್‌ಗೆ ಈಗ 13 ವರ್ಷ. ನವೆಂಬರ್ 16, 2011ರಲ್ಲಿ ಜನಿಸಿದ ಆರಾಧ್ಯ ಬಚ್ಚನ್ ಅಮ್ಮನ ಮುದ್ದಿನ ಮಗಳು. ಅಪರೂಪಕ್ಕೊಮ್ಮೆ ಅಪ್ಪ ಅಭಿಷೇಕ್ ಜೊತೆ ಕಾಣಿಸಿಕೊಳ್ಳುತ್ತಳಾದರೂ ಅಮ್ಮನ ಜೊತೆ ರಜೆ ಮೇಲೆ ಹೋಗ್ತಿರುತ್ತಾಳೆ. ಸದ್ಯ ಲಂಡನ್ ಪ್ರವಾಸದಲ್ಲಿರುವ ಐಶ್ವರ್ಯಾ ರೈ ಬಚ್ಚನ್ ಹಾಗೂ ಆರಾಧ್ಯ ಆಗಸ್ಟ್ ಒಂದರಂದು ಮುಂಬೈಗೆ ವಾಪಸ್ಸಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಆರಾಧ್ಯ ವಿಡಿಯೋ ನೆಟ್ಟಿಗರ ಟ್ರೋಲ್‌ಗೆ ಕಾರಣವಾಗಿದೆ. ಆರಾಧ್ಯ ಮುಖ ಹಾಗೂ ನಡೆಯುವ ಸ್ಟೈಲ್ ನೋಡಿ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರ್ ಹತ್ತುವವರೆಗೂ ಐಶ್ ಮಗಳ ಮೇಲೆ ತೆಗೆದುಕೊಂಡ ಅತಿಯಾದ ಕೇರ್ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.
ವೈರಲ್ ವಿಡಿಯೋದಲ್ಲಿ ಆರಾಧ್ಯ ನೋಡಿದ ಜನರು ಈಕೆ ನಾರ್ಮಲ್ ಆಗಿದ್ದಾಳಾ ಎಂದು ಪ್ರಶ್ನೆ ಮಾಡ್ತಿದ್ದಾರೆ. ಆರಾಧ್ಯ ನಾರ್ಮಲ್ ಹುಡುಗಿಯರಂತೆ ವರ್ತಿಸುತ್ತಿಲ್ಲ. ಕ್ಯಾಮೆರಾ ನೋಡ್ತಿದ್ದಂತೆ ಮುಜುಗರಕ್ಕೊಳಗಾಗಿದ್ದು, ಅವಳ ವರ್ತನೆ ಸ್ವಲ್ಪ ಭಿನ್ನವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಆರಾಧ್ಯ ಮಾನಸಿಕ ಸ್ಥಿತಿ ಸರಿಯಾಗಿದ್ಯಾ ಎಂದು ನೇರ ಪ್ರಶ್ನೆಗಳು ಕೇಳಿ ಬಂದಿವೆ.
ಆರಾಧ್ಯ ಯಾಕೆ ಕ್ಯಾಮೆರಾ ಮುಂದೆ ಬಂದಾಗ ಆತ್ಮವಿಶ್ವಾಸ ಕಳೆದುಕೊಳ್ತಾಳೆ ಅಂತ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ರೆ ಇನ್ನೊಬ್ಬರು, ತುಂಬಾ ಪ್ರಾಬಲ್ಯ ಹೊಂದಿರುವ ತಾಯಿ ಐಶ್ವರ್ಯ ಆದ್ರೆ, ಅವರ ಮಗಳು ಆರಾಧ್ಯನಲ್ಲಿ ಆತ್ಮವಿಶ್ವಾಸ ಕಾಣ್ತಿಲ್ಲ. ಎಷ್ಟೇ ಹಣವಿದ್ರೂ ಏನು ಪ್ರಯೋಜನ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಮಕ್ಕಳನ್ನು ಸಪೋರ್ಟ್ ಮಾಡ್ತಾ ಅವರನ್ನು ತಲೆ ಮೇಲೆ ಕುಳಿಸಿಕೊಳ್ಳೋದು ಏಕೆ, ಹೀಗೆ ಮಾಡಿದ್ರೆ ಮಕ್ಕಳು ಸಾರ್ವಜನಿಕವಾಗಿ ಬೆರೆಯೋದನ್ನು ಹೇಗೆ ಕಲಿತಾರೆ ಎಂದು ಇನ್ನೊಬ್ಬ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ. ಇನ್ನು ಆರಾಧ್ಯ ಡ್ರೆಸ್ ಬಗ್ಗೆಯೂ ಅನೇಕರು ಕಮೆಂಟ್ ಮಾಡಿದ್ದಾರೆ. ಸಾಮಾನ್ಯ ಮಕ್ಕಳಿಗೆ ಮಾಡುವಂತೆ ಯಾಕೆ ಆರಾಧ್ಯ ಡ್ರೆಸ್ ಮಾಡ್ತಿಲ್ಲ ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ.
ಆರಾಧ್ಯ ಪರ ಬ್ಯಾಟ್ ಬೀಸಿದ ನೆಟ್ಟಿಗರ ಸಂಖ್ಯೆ ಕೂಡ ಸಾಕಷ್ಟಿದೆ. ಆರಾಧ್ಯ ಇನ್ನು ಚಿಕ್ಕವಳು. ಕ್ಯಾಮರಾ ನೋಡ್ತಿದ್ದಂತೆ ನರ್ವಸ್ ಆಗೋದು ಸಾಮಾನ್ಯ. ಅದಕ್ಕೆ ನೆಗೆಟಿವ್ ಕಮೆಂಟ್ ನೀಡುವ ಅಗತ್ಯವಿಲ್ಲ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಹೊಸ ಅವತಾರದಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ… So cool ಎಂದ ಸಂಗೀತಾ ಶೃಂಗೇರಿ
ಈ ಮಧ್ಯೆ ಐಶ್ವರ್ಯ ರೈ ಬಗ್ಗೆಯೂ ಕೆಲ ಕಮೆಂಟ್ ಬಂದಿದೆ. ಐಶ್ ಕೈಗೆ ಗಾಯವಾದಂತಿದೆ. ಆದ್ರೆ ಅದ್ರ ಬಗ್ಗೆ ಪಾಪರಾಜಿಗಳು ಏಕೆ ಪ್ರಶ್ನೆ ಮಾಡಿಲ್ಲ ಎಂಬ ಅನುಮಾನವನ್ನು ಬಳಕೆದಾರರು ವ್ಯಕ್ತಪಡಿಸಿದ್ದಾರೆ. ಐಶ್ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಸಂಬಂಧ ಸರಿಯಿಲ್ಲ ಎನ್ನುವ ಸುದ್ದಿ ಇದ್ದು, ಐಶ್ ಮುಖದಲ್ಲಿ ಈ ಟೆನ್ಷನ್ ಎದ್ದು ಕಾಣ್ತಿದೆ ಎಂದ ನೆಟ್ಟಿಗರು, ಜಯಾ ಬಚ್ಚನ್ ವಿರುದ್ಧವೂ ಹರಿಹಾಯ್ದಿದ್ದಾರೆ.