ಕ್ಯಾನ್ಸರ್‌: ತಲೆ ಬೋಳಿಸಿದ ಹೀನಾ ಖಾನ್, ಕರುಣೆ ತೋರಿಸೋ ಬದಲು ಪಬ್ಲಿಸಿಟಿ ಸ್ಟಂಟೆಂದ ನೆಟ್ಟಿಗರು, ನಟಿ ನೋವು ಅರ್ಥವಾಗೋಲ್ವಾ?

By Roopa Hegde  |  First Published Aug 2, 2024, 2:26 PM IST

ನಟಿ ಹೀನಾ ಖಾನ್ ಮನಸ್ಸನ್ನು ಗಟ್ಟಿ ಮಾಡ್ಕೊಂಡು, ಕಣ್ಣಲ್ಲಿ ನೀರು ಹಾಕ್ತಾ ತಲೆ ಬೋಳಿಸಿಕೊಂಡಿದ್ದಾರೆ. ಕ್ಯಾನ್ಸರ್ ಪೀಡಿತ ನಟಿಗೆ ಈ ನಿರ್ಧಾರ ಅನಿವಾರ್ಯವಂತೆ. ಆದ್ರೆ ನೆಟ್ಟಿಗರ್ಯಾಕೋ ಹೀನಾ ಖಾನ್ ವರ್ತನೆಯನ್ನು ಖಂಡಿಸಿದ್ದಾರೆ.
 


ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೇ ಫೇಮಸ್ ನಟಿ ಹೀನಾ ಖಾನ್ ತಮ್ಮ ತಲೆ ಬೋಳಿಸಿದ್ದಾರೆ. ಮನಸ್ಸನ್ನು ಗಟ್ಟಿ ಮಾಡ್ಕೊಂಡ ಹೀನಾ ಖಾನ್, ತಲೆಗೆ ಟ್ರಿಮ್ಮರ್ ಹಾಕಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ ಹೀನಾ ಈ ವಿಡಿಯೋಕ್ಕೆ ಅನೇಕರು ನೆಗೆಟಿವ್ ಕಮೆಂಟ್ ಮಾಡಿದ್ದಾರೆ. 

ಸ್ತನ ಕ್ಯಾನ್ಸರ್ (Breast cancer) ಚಿಕಿತ್ಸೆಗೆ ಒಳಗಾಗಿರುವ ನಟಿ ಹೀನಾ ಖಾನ್ (Hina Khan) ತಮ್ಮ ಚಿಕಿತ್ಸೆ ಸೇರಿದಂತೆ ಅನೇಕ ವಿಷ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿರುತ್ತಾರೆ. ಕಿಮೋಥೆರಪಿ (Chemotherapy) ವೇಳೆ ಅವರಿಗೆ ಕೂದಲು ಉದುರಲು ಶುರುವಾಗಿತ್ತು. ಹಾಗಾಗಿ ಹೀನಾ ಖಾನ್ ಬಾಯ್ ಹೇರ್ ಕಟ್ ಮಾಡಿಕೊಂಡಿದ್ರು. ಆದ್ರೆ ಈ ಕಟ್ ಕೂಡ ಅವರನ್ನು ಟೆನ್ಷನ್ ಗೊಳಪಡಿಸಿತ್ತು. ಇಡೀ ದಿನ ಅಲ್ಲಲ್ಲಿ ಕೂದಲು ಉದುರೋದನ್ನು ನೋಡಲು ಅವರಿಗೆ ಸಾಧ್ಯವಾಗ್ತಿರಲಿಲ್ಲ. ಈ ಸಮಯದಲ್ಲಿ ಮಾನಸಿಕ ನೆಮ್ಮದಿ ಮುಖ್ಯ ಎಂಬುದನ್ನು ಅರಿತ ಹೀನಾ ಖಾನ್ ತಮ್ಮ ಕೂದಲನ್ನು ಸಂಪೂರ್ಣ ತೆಗೆದಿದ್ದಾರೆ. 

Tap to resize

Latest Videos

ಮನೆ ಊಟ ಕೇಳಿದ ನಟನಿಗೆ ಕೋರ್ಟ್ ಖಡಕ್ ಉತ್ತರ: ಮತ್ತೆ ದರ್ಶನ್‌ಗೆ ಜೈಲೂಟವೇ ಫಿಕ್ಸ್!

ಬೆಡ್ ಸೇರಿದಂತೆ ಮನೆಯ ಅಲ್ಲಲ್ಲಿ ಉದುರಿದ ಕೂದಲು ಕಾಣಿಸುತ್ತೆ. ಇದು ನನ್ನ ಧೈರ್ಯವನ್ನು ಹಾಳು ಮಾಡ್ತಿದೆ. ಹಾಗಾಗಿ ಕೂದಲನ್ನು ಸಂಪೂರ್ಣ ತೆಗೆಯುತ್ತಿದ್ದೇನೆ ಎಂದು ಹೀನಾ ಖಾನ್ ಹೇಳಿದ್ದಾರೆ. ಟ್ರಿಮ್ಮರ್ ತೆಗೆದುಕೊಂಡು ಹೀನಾ ಖಾನ್, ಕೂದಲನ್ನು ಟ್ರಿಮ್ ಮಾಡಿದ್ದಾರೆ. ಸಂಪೂರ್ಣ ಬಾಲ್ಡ್ ಆಗಿರುವ ಹೀನಾ ಖಾನ್ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉದುರಿರುವ ಕೂದಲನ್ನು ತೋರಿಸಿರುವ ಹೀನಾ ಖಾನ್ ನಂತ್ರ ಟ್ರಿಮ್ಮರ್ ತೆಗೆದುಕೊಂಡು ಟ್ರಿಮ್ ಮಾಡಿದ್ದಾರೆ. ಬೋಳು ತಲೆಯನ್ನು ತೋರಿಸಿರುವ ಹೀನಾ ಖಾನ್, ಅಗತ್ಯವಿದ್ದಾಗ ವಿಗ್ ಧರಿಸುತ್ತೇನೆ ಎಂದಿದ್ದಾರೆ. 

ಈ ಪ್ರಯಾಣದ ಅತ್ಯಂತ ಕಷ್ಟದ ಸಮಯವನ್ನು ಸಾಮಾನ್ಯಗೊಳಿಸಲು ಇದು ಪ್ರಯತ್ನವಾಗಿದೆ. ಮಹಿಳೆಯರೇ ನೆನಪಿಡಿ..ನಮ್ಮ ಶಕ್ತಿ ನಮ್ಮ ತಾಳ್ಮೆ ಮತ್ತು ಶಾಂತಿ. ನಾವು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಹೀನಾ ಖಾನ್ ಶೀರ್ಷಿಕೆ ಹಾಕಿದ್ದಾರೆ. ಈ ಸಂಪೂರ್ಣ ಚಿಕಿತ್ಸೆ ಸಮಯದಲ್ಲಿ ಮಾನಸಿಕವಾಗಿ ಬಲವಾಗಿರುವುದು ಬಹಳ ಮುಖ್ಯ ಎಂದು ಹೀನಾ ಖಾನ್ ಹೇಳಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಸಮಯದಲ್ಲಿ ಕೂದಲು ಪೂರ್ತಿ ಉದುರುತ್ತದೆ ಮತ್ತು  ಕೂದಲು ಅಲ್ಲಿ ಇಲ್ಲಿ ಬೀಳುವುದನ್ನು ನೋಡಿದೆ. ಇದು ದೃತಿಗೆಡುವಂತೆ ಮಾಡುತ್ತದೆಂದು ಹೀನಾ ಖಾನ್ ಬರೆದಿದ್ದಾರೆ.

ಹೀನಾ ಖಾನ್ ಪೋಸ್ಟಿಗೆ ನೆಟ್ಟಿಗರ ಅಸಮಾಧಾನ: ಫಿಲ್ಮಿಜ್ಞಾನ್ ಇನ್ಸ್ಟಾಗ್ರಾಮ್ ನಲ್ಲಿ ಹೀನಾ ಖಾನ್ ಈ ಪೋಸ್ಟ್ ವೈರಲ್ ಆಗಿದೆ. ಆದ್ರೆ ಹೀನಾ ಖಾನ್ ವಿಡಿಯೋ ನೋಡಿದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ವಿಷ್ಯವನ್ನು ಇಲ್ಲಿ ಹಂಚಿಕೊಳ್ಳುವ ಅಗತ್ಯವಿಲ್ಲ. ಕ್ಯಾನ್ಸರ್ ನಿಮಗೆ ನೋವು ನೀಡ್ತಿದೆ ಅನ್ನೋದು ನಿಜ. ಆದ್ರೆ ಇವನ್ನೆಲ್ಲ ತೋರಿಸಿ, ಟಿಆರ್‌ಪಿ ಗಿಟ್ಟಿಸಿಕೊಳ್ಳಬೇಕಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೀನಾ ಖಾನ್ ಹೆಚ್ಚು ಶೋಆಫ್ ಮಾಡ್ತಿದ್ದಾರೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ನೀವು ತುಂಬಾ ಸ್ಟ್ರಾಂಗ್, ಆದ್ರೆ ಎಲ್ಲವನ್ನೂ ರೀಲ್ ಆಗಿ ಯಾಕೆ ಕನ್ವರ್ಟ್ ಮಾಡ್ತಿದ್ದೀರಿ ಎಂದು ಅನೇಕ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ. ಅತಿ ಶೀಘ್ರದಲ್ಲಿ ಗುಣಮುಖರಾಗಿ ಎಂದು ಅನೇಕ ಅಭಿಮಾನಿಗಳು ಹಾರೈಸಿದ್ದಾರೆ.

ಕೀರ್ತಿ ಸುರೇಶ್ ಕೆನ್ನೆ ಕಚ್ಚಿದ ಸ್ಟಾರ್ ಹೀರೋ ಮಗ; ರಹಸ್ಯ ಬಿಚ್ಚಿಟ್ಟ ನಟಿ

ಹೀನಾ ಖಾನ್ ಪೋಸ್ಟ್ ಗೆ ಅನೇಕ ಸೆಲೆಬ್ರಿಟಿಗಳು ಕಮೆಂಟ್ ಮಾಡಿದ್ದಾರೆ. ಪ್ರೀತಿ ಹಾಗೂ ಧೈರ್ಯ ನೀಡುವ ಪ್ರಯತ್ನವನ್ನು ಮಾಡಿದ್ದಾರೆ. 36 ವರ್ಷದ ಹೀನಾ ಖಾನ್, ಕೆಲ ದಿನಗಳ ಹಿಂದೆ ತಮಗೆ ಸ್ತನ ಕ್ಯಾನ್ಸರ್ ಕಾಡ್ತಿದೆ ಎಂಬುದನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಆ ನಂತ್ರ ಕೂದಲು ಕತ್ತರಿಸುವ ವಿಡಿಯೋ ಹಂಚಿಕೊಂಡಿದ್ದರು. ನೋವು ಸಹಿಸಲಾಗ್ತಿಲ್ಲ ಅಂತ ಅಲ್ಲಾ ಮೊರೆ ಹೋಗಿದ್ದ ಹೀನಾ, ಟ್ರಿಮ್ ಮಾಡುವಾಗ್ಲೂ ಕಣ್ಣೀರಿಟ್ಟಿದ್ದಾರೆ. 

click me!