'ನನ್ನ ಮಗ ನನ್ನ ಉತ್ತರಾಧಿಕಾರಿಯಲ್ಲ' ಎಂದು ಅಮಿತಾಭ್​ ಪೋಸ್ಟ್​: ನಟನ ಫ್ಯಾಮಿಲಿಯಲ್ಲಿ ಇದೇನಾಯ್ತು?

'ನನ್ನ ಮಗ ನನ್ನ ಉತ್ತರಾಧಿಕಾರಿಯಲ್ಲ, ಉತ್ತರಾಧಿಕಾರಿಯಾಗುವವನು ನನ್ನ ಮಗನಲ್ಲ' ಎಂದು ಬರೆದುಕೊಳ್ಲುವ ವಮೂಲಕ ಅಮಿತಾಭ್​ ಸಂಚಲನ ಸೃಷ್ಟಿಸಿದ್ದಾರೆ. ನಟನ ಫ್ಯಾಮಿಲಿಯಲ್ಲಿ ಇದೇನಾಯ್ತು?
 

My son will not be my successor Amitabh Bachchan tweet about Abhishek  leaves fans confused suc

 ಬಿಗ್​-ಬಿ ಅಮಿತಾಭ್​ ಬಚ್ಚನ್ ಅವರು ತಮ್ಮ ಒಂದು ಟ್ವೀಟ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಅವರು ಎಕ್ಸ್ ಖಾತೆಯಲ್ಲಿ  ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು, 'ನನ್ನ ಮಗ ಕೇವಲ ಪುತ್ರನಾಗಗಿರುವುದರಿಂದ ಆತ ನನ್ನ ಉತ್ತರಾಧಿಕಾರಿಗಳಾಗುವುದಿಲ್ಲ, ನನ್ನ ಉತ್ತರಾಧಿಕಾರಿಯಾಗುವವನು ನನ್ನ ಮಗನಾಗಿರುತ್ತಾನೆ. ಇದು  ಪೂಜ್ಯ ಬಾಬೂಜಿಯವರ ಮಾತುಗಳು. ಮತ್ತು ಅಭಿಷೇಕ್ ಆ ಪಾತ್ರವನ್ನು ನಿರ್ವಹಿಸುತ್ತಿದ್ದಾನೆ ಎಂದು ಬರೆದಿದ್ದಾರೆ.  ಈ ಟ್ವೀಟ್ ಬಳಕೆದಾರರನ್ನು ಗೊಂದಲಕ್ಕೀಡು ಮಾಡಿದೆ.

ಅಷ್ಟಕ್ಕೂ, ಅಮಿತಾಭ್​ ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ನಡುವಿನ ಬಾಂಧವ್ಯ ತುಂಬಾ ಗಾಢವಾದದ್ದು. ಬಿಗ್ ಬಿ ತಮ್ಮ ಮಗನನ್ನು ಬೆಂಬಲಿಸುವ ಮತ್ತು ಹೊಗಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಇತ್ತೀಚೆಗೆ ಅಭಿಷೇಕ್ ಅವರನ್ನು ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ಸನ್ಮಾನಿಸಲಾಯಿತು. ಇಲ್ಲಿ ಅವರ ಚಲನಚಿತ್ರಗಳ ಹಾಡುಗಳನ್ನು ಹಾಡಲಾಯಿತು ಮತ್ತು ನಟನ ಕೆಲಸವನ್ನು ಶ್ಲಾಘಿಸಲಾಗಿತ್ತು.  . ಇದಕ್ಕೆ ಅಮಿತಾಭ್ ತಮ್ಮ ಮಗನನ್ನು ಮನಸಾರೆ ಅಭಿನಂದಿಸಿ ಅವರ ಮೇಲೆ ಪ್ರೀತಿಯ ಧಾರೆಯನ್ನೇ ಹರಿಸಿದ್ದರು. ಆದರೆ,  ಈಗ ಬಿಗ್ ಬಿ ತಮ್ಮ ಒಂದು ಟ್ವೀಟ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

Latest Videos

ಶಾರುಖ್​ರನ್ನು ಹಿಂದಿಕ್ಕಿ 82ನೇ ವಯಸ್ಸಲ್ಲಿ ಟಾಪ್​-1 ಸ್ಥಾನಕ್ಕೇರಿದ ಅಮಿತಾಭ್​: ಕುತೂಹಲದ ಮಾಹಿತಿ ಇಲ್ಲಿದೆ...

  
ತಮ್ಮ ವೃತ್ತಿಜೀವನದ ಆರಂಭದಿಂದಲೂ, ಅಭಿಷೇಕ್ ಬಚ್ಚನ್ ಅವರು ತಮ್ಮ ತಂದೆ ಅಮಿತಾಭ್​ ಬಚ್ಚನ್ ಅವರೊಂದಿಗೆ ಹೋಲಿಕೆ ಮಾಡುವುದರಿಂದ ಹಿಡಿದು ಕುಟುಂಬದ ಪರಂಪರೆಯವರೆಗೆ ಹಲವಾರು ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಜನವರಿ 2025 ರಲ್ಲಿ ನಡೆದ ಸಂದರ್ಶನವೊಂದರಲ್ಲಿ, ನಟ, 'ಇದು ಎಂದಿಗೂ ಸುಲಭವಲ್ಲ' ಎಂದು ಹೇಳಿದ್ದರು. ಆದರೆ 25 ವರ್ಷಗಳ ಕಾಲ ಅದೇ ಪ್ರಶ್ನೆಯನ್ನು ಎದುರಿಸಿದ ನಂತರ, ನಾನು ರೋಗನಿರೋಧಕನಾಗಿದ್ದೇನೆ. ನೀವು ನನ್ನನ್ನು ನನ್ನ ತಂದೆಗೆ ಹೋಲಿಸುತ್ತಿದ್ದರೆ, ನೀವು ನನ್ನನ್ನು ಅತ್ಯುತ್ತಮ ವ್ಯಕ್ತಿಗೆ ಹೋಲಿಸುತ್ತಿದ್ದೀರಿ. ನೀವು ನನ್ನನ್ನು ಅತ್ಯುತ್ತಮರೊಂದಿಗೆ ಹೋಲಿಸುತ್ತಿದ್ದರೆ, ಈ ಶ್ರೇಷ್ಠ ಹೆಸರುಗಳಲ್ಲಿ ನಾನು ಎಲ್ಲೋ ಎಣಿಸಲು ಅರ್ಹನೆಂದು ನಾನು ನಂಬುತ್ತೇನೆ. ನನ್ನ ಹೆತ್ತವರು ನನ್ನ ಹೆತ್ತವರು. ನನ್ನ ಕುಟುಂಬ ನನ್ನ ಕುಟುಂಬ. ನನ್ನ ಹೆಂಡತಿ ನನ್ನ ಹೆಂಡತಿಯೇ. ಅವರ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದಿದ್ದರು. 

ಇನ್ನು ಅಭಿಷೇಕ್​ ಅವರ ಮುಂಬರುವ ಯೋಜನೆಗಳ ಬಗ್ಗೆ ಹೇಳುವುದಾದರೆ, ಅವರು ಪ್ರಸ್ತುತ 'ಬಿ ಹ್ಯಾಪಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರೆಮೋ ಡಿ'ಸೋಜಾ ಅವರ ಈ ಚಿತ್ರದಲ್ಲಿ, ಅವರು ಇನಾಯತ್ ವರ್ಮಾ ಮತ್ತು ನೋರಾ ಫತೇಹಿ ಅವರೊಂದಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಿದ್ದು, ನಂಬರ್ 1 ಸ್ಥಾನದಲ್ಲಿದೆ.

ಎಲ್ಲರ ಹಾಗೆ ನಾನೂ ಹೆಂಡ್ತಿಗೆ ಭಯ ಪಡ್ತೇನೆ ಎಂದ ಅಮಿತಾಭ್, ಮಿಡ್​ನೈಟ್​ ಗುಟ್ಟು ಹೇಳಿಯೇ ಬಿಟ್ರು!

T 5323 - मेरे बेटे, बेटे होने से मेरे उत्तराधिकारी नहीं होंगे, जो मेरे उत्तराधिकारी होंगे वो मेरे बेटे होंगे 🙏🙏
पूज्य बाबूजी के शब्द 🙏🙏
और ABHISHEK उसे निभा रहे हैं
👇🏽 नीचे भी पढ़िए, एक नयी शुरुआत

— Amitabh Bachchan (@SrBachchan)
vuukle one pixel image
click me!