ನೆಟ್‌ಫ್ಲಿಕ್ಸ್‌‌ನಲ್ಲಿ ಬರ್ತಿದೆ ಹೊಸ ರಿಯಾಲಿಟಿ ಶೋ; ಗೆದ್ದವರಿಗೆ ಸಿಕ್ತಿದೆ ಬರೋಬ್ಬರಿ 35 ಕೋಟಿ ರೂಪಾಯಿ

By Suvarna NewsFirst Published Jun 15, 2022, 5:15 PM IST
Highlights

ಸ್ಕ್ವಿಡ್ ಗೇಮ್; ದಿ ಚಾಲೆಂಜ್ ಹೆಸರಿನಲ್ಲಿ ಸೀರಿಸ್ ಮಾದರಿಯಲ್ಲೇ ರಿಯಾಲಿಟಿ ಶೋ (Squid Game Reality Show) ನಡೆಸುತ್ತಿದೆ ನೆಟ್‌ಫ್ಲಿಕ್ಸ್. ಈ ಬಗ್ಗೆ ಸ್ವತಃ ನೆಟ್‌ಫ್ಲಿಕ್ಸ್ ಘೋಷಣೆ ಮಾಡಿದೆ. ಈ ಶೋನಲ್ಲಿ ಭಾಗಿಯಾಗುವ ಸ್ಪರ್ಧಿಗಳಿಗೆ ಕಾಸ್ಟಿಂಗ್ ಕಾಲ್ ಮಾಡಿ ಪ್ರೋಮ್ ರಿಲೀಸ್ ಮಾಡಿದೆ ನೆಟ್‌ಫ್ಲಿಕ್ಸ್. ಈ ಪ್ರೋಮೋ ನೋಡಿ ವೀಕ್ಷಕರು ದಂಗ್ ಆಗಿದ್ದಾರೆ. ಈ ಗೇಮ್ ಶೋನಲ್ಲಿ ಗೆದ್ದವರಿಗೆ ಸಿಗುವ ಬಹುಮಾನ ಮೊತ್ತ ಕೇಳಿದ್ರೆ ನಿಜಕ್ಕೂ ತಲೆತಿರುಗುತ್ತದೆ. 

ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್ (Netflix) ಹೊಸ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ.  ನೆಟ್‌ಫ್ಲಿಕ್ಸ್‌ನ ಅತ್ಯಂತ ಜನಪ್ರಿಯ ಸೀರಿಸ್ ಸ್ಕ್ವಿಡ್ ಗೇಮ್; ದಿ ಚಾಲೆಂಜ್ (Squid Game) ಅನ್ನು ನೋಡಿರುತ್ತೀರಾ. ಕೊರಿಯನ್ ಸೀರಿಸ್ ಇದಾಗಿದ್ದು ಇದರಲ್ಲಿ  ಸ್ಪರ್ಧಿಗಳ ನಡುವಿನ ಗೇಮ್ ಶೋ ಸೀರಿಸ್ ಇದಾಗಿತ್ತು. ಈ ಸೀರಿಸ್‌ನಲ್ಲಿ ಸ್ಪರ್ಧಿಗಳು ಗೆಲ್ಲಲೂ ಏನು ಬೇಕಾದರೂ ಮಾಡಬಲು ಸಿದ್ಧರಿರುತ್ತಾರೆ.  ಇನ್ನೊಬ್ಬರನ್ನು ಸಾಯಿಸಲು ರೆಡಿ ಇರುತ್ತಾರೆ. ಕೊನೆಯಲ್ಲಿ ಉಳಿದವರಿಗೆ ದೊಡ್ಡ ಮೊತ್ತದ ಬಹುಮಾನ ಸಿಗುತ್ತದೆ. 2021ರಲ್ಲಿ ರಿಲೀಸ್ ಆಗಿದ್ದ  ಈ ಸೀರಿಸ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿತ್ತು. ಇದೀಗ ಸ್ಕ್ವಿಡ್ ಗೇಮ್: ದಿ ಚಾಲೆಂಜ್ ಮತ್ತೊಂದು ಸೀರಿಸ್ ಬರ್ತಾ ಇದೆ. ಈಗಾಗಲೇ ಒಟಿಟಿ ಬಹಿರಂಗ ಪಡಿಸಿದೆ. ಈ ನಡುವೆ ವೀಕ್ಷಕರಿಗೆ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ ಪಡಿಸಿದೆ ನೆಟ್‌ಫ್ಲಿಕ್ಸ್.  

ಸ್ಕ್ವಿಡ್ ಗೇಮ್; ದಿ ಚಾಲೆಂಜ್ ಹೆಸರಿನಲ್ಲಿ ಸೀರಿಸ್ ಮಾದರಿಯಲ್ಲೇ ರಿಯಾಲಿಟಿ ಶೋ (Squid Game Reality Show) ನಡೆಸುತ್ತಿದೆ ನೆಟ್‌ಫ್ಲಿಕ್ಸ್. ಈ ಬಗ್ಗೆ ಸ್ವತಃ ನೆಟ್‌ಫ್ಲಿಕ್ಸ್ ಘೋಷಣೆ ಮಾಡಿದೆ. ಈ ಶೋನಲ್ಲಿ ಭಾಗಿಯಾಗುವ ಸ್ಪರ್ಧಿಗಳಿಗೆ ಕಾಸ್ಟಿಂಗ್ ಕಾಲ್ ಮಾಡಿ ಪ್ರೋಮ್ ರಿಲೀಸ್ ಮಾಡಿದೆ ನೆಟ್‌ಫ್ಲಿಕ್ಸ್. ಈ ಪ್ರೋಮೋ ನೋಡಿ ವೀಕ್ಷಕರು ದಂಗ್ ಆಗಿದ್ದಾರೆ. ಈ ಗೇಮ್ ಶೋನಲ್ಲಿ ಗೆದ್ದವರಿಗೆ ಸಿಗುವ ಬಹುಮಾನ ಮೊತ್ತ ಕೇಳಿದ್ರೆ ನಿಜಕ್ಕೂ ತಲೆತಿರುಗುತ್ತದೆ. ಹೌದು, ಬರೋಬ್ಬರಿ 35.56 ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ನೆಟ್‌ಫ್ಲಿಕ್ಸ್ ಅನೌನ್ಸ್ ಮಾಡಿದೆ. ಇದು ಟಿವಿ ಇತಿಹಾಸದಲ್ಲೇ ಭಾರಿ ದೊಡ್ಡ ಮೊತ್ತದ ಬಹುಮಾನವಾಗಿದೆ. 
 

ಇನ್ಮುಂದೆ ನೆಟ್‌ಫ್ಲಿಕ್ಸ್‌ನಲ್ಲೂ ಜಾಹೀರಾತು? ವರ್ಷದ ಅಂತ್ಯದ ವೇಳೆಗೆ ಹೊಸ ಯೋಜನೆ ಲಾಂಚ್?

ಸ್ಕ್ವಿಡ್ ಗೇಮ್ ರಿಯಾಲಿಟಿ ಶೋನಲ್ಲಿ ಒಟ್ಟು 456 ಸ್ಪರ್ಧಿಗಳು ಇರಲಿದ್ದಾರೆ. ಸದ್ಯ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ನೆಟ್‌ಫ್ಲಿಕ್ಸ್ ಬಹಿರಂಗ ಪಡಿಸಿದೆ. ಇದರಲ್ಲಿ 10 ಎಪಿಸೋಡ್ ಸೀರಿಸ್‌ನಿಂದ ಸ್ಫೂರ್ತಿ ಪಡೆದ  ‌ಗೇಮ್ ಇರಲಿದೆಯಂತೆ. ಉಳಿದಂತೆ ಹೊಸ ಹೊಸ ಗೇಮ್‌‌ಗಳು ಸೇರಿಸುತ್ತೇವೆ ಎಂದು ನೆಟ್‌‌ಫ್ಲಿಕ್ಸ್ ಹೇಳಿದೆ. ಅಮೆರಿಕಾ ಮೂಲದ ಯೂಟ್ಯೂಬ್‌ ಕ್ರಿಯೇಟರ್ ಒಬ್ಬರಾದ ಬೀಸ್ಟ್ ಎನ್ನುವವರ ಪ್ಲಾನ್ ಇದಾಗಿದೆ. ಸೀರಿಸ್ ನೋಡಿ ಇಂಪ್ರೆಸ್ ಆಗಿದ್ದ ಬೀಸ್ಟ್ ಅವರು ರಿಯಾಲಿಟಿ ಶೋ ಮಾಡುವ ನಿರ್ಧಾರ ಮಾಡಿದ್ದಾರೆ. 

ಈ ರಿಯಾಲಿಟಿ ಶೋ ಅನ್ನು ಯುಕೆ ಯಲ್ಲಿ ನೆಡಸಲು ಆಯೋಜಕರು ಪ್ಲಾನ್ ಮಾಡಿದ್ದಾರೆ. ಸದ್ಯ ಕೇವಲ ಇಂಗ್ಲಿಷ್ ಮಾತನಾಡುವವರನ್ನು ಮಾತ್ರ ಆಯ್ಕೆ ಮಾಡಲಾಗುತ್ತಿದೆ. ಈ ಶೋನಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವುದೀಗ ಕುತೂಹಲ ಮೂಡಿಸಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಬಹುಮಾನ ಕೊಡಲಿದ್ದಾರೆ ಎಂದರೆ ಗೇಮ್ ಹೇಗಿರಲಿದೆ, ಎಷ್ಟು ಕಷ್ಟಕರವಾಗಲಿದೆ ಎಂದು ಊಹಿಸಲು ಅಸಾಧ್ಯವಾಗಿದೆ.  

ಮದುವೆ ವಿಡಿಯೋನಾ ಓಟಿಟಿಗೆ ಸೇಲ್‌ ಮಾಡಿಬಿಟ್ರಾ ನಯನತಾರಾ?

 ಸ್ಕ್ವಿಡ್ ಗೇಮ್ ಸೀರಿಸ್ ನೆಟ್‌ಫ್ಲಿಕ್ಸ್‌ನ ಆಲ್ ಟೈಂ ಜನಪ್ರಿಯ ಶೋ ಆಗಿದೆ. 28 ಗಂಟೆಯಲ್ಲಿ ಅತೀ ಹೆಚ್ಚು ಅಂದರೆ 1.65 ಬಿಲಿಯನ್ ವೀಕ್ಷಣೆ ಪಡೆದಿದೆ ಎಂದು ಸ್ವತಃ ನೆಟ್‌ಫ್ಲಿಕ್ಸ್ ಘೋಷಣೆ ಮಾಡಿದೆ.  ಇದೀಗ ರಿಯಾಲಿಟಿ ಶೋಗೆ ಹೇಗೆ ಪ್ರತಿಕ್ರಿಯೆ ಸಿಗಲಿದೆ ಎಂದು ಕಾದುನೋಡಬೇಕು.  

       

click me!