ನಟಿ ಮಾಧುರಿ ದೀಕ್ಷಿತ್ ಬಗ್ಗೆ ಅವಹೇಳನಕಾರಿ ಹೇಳಿಕೆ; ನೆಟ್‌ಫ್ಲಿಕ್ಸ್‌ಗೆ ನೋಟಿಸ್

By Shruthi Krishna  |  First Published Mar 28, 2023, 4:45 PM IST

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೇ ನೆಟ್‌ಫ್ಲಿಕ್ಸ್‌ಗೆ ನೋಟಿಸ್ ನೀಡಲಾಗಿದೆ. 


ಅಮೆರಿಕಾದ  'ದಿ ಬಿಗ್ ಬ್ಯಾಂಗ್ ಥಿಯರಿ' ಶೋನಲ್ಲಿ ಬಾಲಿವುಡ್ ಸ್ಟಾರ್ ನಟಿ ಮಾಧುರಿ ದೀಕ್ಷಿತ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ  ನೆಟ್​ಫ್ಲಿಕ್ಸ್​ಗೆ ನೋಟಿಸ್ ನೀಡಲಾಗಿದೆ.  ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುವ ಈ ಶೋನಲ್ಲಿ ಬಾಲಿವುಡ್ ನಟಿಗೆ ಅವಮಾನ ಮಾಡಿದ ಕಾರಣ ಎಪಿಸೋಡ್ ಡಿಲೀಟ್ ಮಾಡುವಂತೆ  ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್ ನೆಟ್​ಫ್ಲಿಕ್ಸ್​ಗೆ ನೋಟಿಸ್ ನೀಡಿದ್ದಾರೆ. 

ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್, ಸೀಸನ್ 2ರ ಮೊದಲ ಸಂಚಿಕೆ ತೆಗೆದುಹಾಕಬೇಕು ಎಂದು  ನೆಟ್​ಫ್ಲಿಕ್ಸ್​ಗೆ ಹೇಳಿದ್ದಾರೆ. ‘ಬಿಗ್ ಬ್ಯಾಂಗ್ ಥಿಯರಿ’ ಅಮೆರಿಕದ ಸಿಚ್ಯುವೇಷನಲ್ ಕಾಮಿಡಿ ಶೋನ 12 ಸೀಸನ್ ಪ್ರಸಾರ ಕಂಡಿದೆ. ನೆಟ್​ಫ್ಲಿಕ್ಸ್ ಇದನ್ನು ಬಿತ್ತರ ಮಾಡಿತ್ತು. ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಶೋನಲ್ಲಿ ಬರುವ ಎರಡು ಪಾತ್ರಗಳು ಐಶ್ವರ್ಯಾ ರೈ ಹಾಗೂ ಮಾಧುರಿ ದೀಕ್ಷಿತ್ ಅವರನ್ನು ಹೋಲಿಕೆ ಮಾಡುತ್ತವೆ. ಜೊತೆಗೆ ಮಾಧುರಿ ದೀಕ್ಷಿತ್ ಬಗ್ಗೆ ಕೆಟ್ಟ ಪದಗಳ ಬಳಕೆ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿ ಲೀಗಲ್ ನೋಟಿಸ್ ಕಳುಹಿಸಲಾಗಿದೆ.

Tap to resize

Latest Videos

‘ಈ ರೀತಿ ಶಬ್ದಗಳ ಬಳಕೆ ಮಹಿಳೆಗೆ ಅಗೌರವ ನೀಡುವುದು ಮಾತ್ರವಲ್ಲದೇ ಮಾನಹಾನಿಕರವೂ ಹೌದು. ಈ ಎಪಿಸೋಡ್​ನ ತೆಗೆದುಹಾಕದಿದ್ದರೆ ಲೀಗಲ್ ಆ್ಯಕ್ಷನ್ ಎದುರಿಸಬೇಕಾಗುತ್ತದೆ. ಮಹಿಳೆಯರ ಬಗೆಗಿನ ತಾರತಮ್ಯವನ್ನು ಈ ಶೋ ಪ್ರಚೋದಿಸುವಂತಿದೆ’ ಎಂದು ಮಿಥುನ್ ಕುಮಾರ್ ಹೇಳಿದ್ದಾರೆ.

ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್

‘ಬಿಗ್ ಬ್ಯಾಂಗ್ ಥಿಯರಿ’ 2007ರಲ್ಲಿ ಪ್ರಸಾರ ಆರಂಭಿಸಿತು. 2019ರಲ್ಲಿ ಇದು ಕೊನೆ ಆಗಿದೆ. 12 ಸೀಸನ್​ಗಳನ್ನು ಇದು ಪೂರೈಸಿದೆ. ಇದರ 12 ಸೀಸನ್​ಗಳು ನೆಟ್​ಫ್ಲಿಕ್ಸ್​ನಲ್ಲಿ ಲಭ್ಯವಿದೆ. ಈ ವಿವಾದದ ಬಗ್ಗೆ ನೆಟ್​ಫ್ಲಿಕ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂಬೈನ ನೆಟ್‌ಫ್ಲಿಕ್ಸ್ ಕಚೇರಿಗೆ ನೋಟಿಸ್ ಕಳುಹಿಸಲಾಗಿದೆ.

Recently, I came across an episode of the show Big Bang Theory on Netflix where Kunal Nayyar's character uses an offensive and derogatory term to refer to the legendary Bollywood actress . As a fan of Madhuri Dixit since childhood, I was deeply disturbed by the… pic.twitter.com/pvRCKd5Ne4

— Mithun Vijay Kumar (@MVJonline)

ಮದುವೆ ನಂತರದ ನೋವಿನ ದಿನಗಳ ನೆನೆದು ಕಣ್ಣೀರಾದ ನಟಿ Madhuri Dixit

1984ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಮಾಧುರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮಾಧುರಿ ನಟನೆ, ಡಾನ್ಸ್‌ಗೆ ಫಿದಾ ಆಗದ ಅಭಿಮಾನಿಗಳಿಲ್ಲ. ಮಾಧುರಿ ಸದ್ಯ ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಕೊನೆಯದಾಗಿ ಮಾಧುರಿ ಕಳಂಕ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಸಂಜಯ್ ದತ್ ಜೊತೆ ಅನೇಕ ವರ್ಷಗಳ ಬಳಿಕ ತೆರೆಹಂಚಿಕೊಂಡಿದ್ದರು. ಬಳಿಕ ಮಜಾ ಮಾನಲ್ಲಿ ಮಿಂಚಿದ್ದರು. ಸಿನಿಮಾಗಿಂತ ಹೆಚ್ಚಾಗಿ ಮಾಧುರಿ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

click me!