ಜಸ್ಟಿಸ್ ಹೇಮಾ ಸಮಿತಿಯ ಬಗ್ಗೆ ಮಾತನಾಡಿದ ಪಾರ್ವತಿ ಮೆನನ್. ಮಲಯಾಳಂ ನಟಿಯರ ಸ್ಥಿತಿ ಗತಿಗಳ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ವರದಿ ಸಲ್ಲಿಸಲಾಗಿದೆ.....
2018ರಲ್ಲಿ ಮಲಯಾಳಂ ಖ್ಯಾತ ನಟಿಯ ಮೇಲೆ ಅತ್ಯಾಚಾರ ಯತ್ನ ಮಾಡಲಾಗಿತ್ತು ಈ ಸಮಯದಲ್ಲಿ ಮಹಿಳೆಯರಿಗೆಂದು ಜಸ್ಟಿಸ್ ಹೇಮಾ ಸಮಿತಿಯನ್ನು ಸ್ಥಾಪಿಸಲಾಗಿತ್ತು. ಚಿತ್ರರಂಗದಲ್ಲಿ ಯಾವುದೇ ರೀತಿಯ ಕಷ್ಟ ಎದುರಿಸಿದ್ದರೂ ಇಲ್ಲಿ ದೂರು ನೀಡಿದ್ದರೆ ಪರಿಹಾರಿ ನೀಡಲಾಗುತ್ತಿತ್ತು. ಈ ಸಮ್ಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಹೇಮಾ, ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟಿ ಶಾರದಾ ಮತ್ತು ಇನ್ನಿತ್ತರು ಇದ್ದಾರೆ. ಕೆಲವು ದಿನಗಳ ಹಿಂದೆ ಮಲಯಾಳಂ ನಟಿಯರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ವರದಿ ಮಾಡಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಲಾಗಿತ್ತು. ಈ ರಿಪೋರ್ಟ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದರ ಬಗ್ಗೆ ಪಾರ್ವತಿ ಪ್ರತಿಕ್ರಿಯೆ ನೀಡಿದ್ದಾರೆ.
'ನಮ್ಮ ಸಮಿತಿಯಲ್ಲಿ ಸಾಧನೆ ಮಾಡಿರುವ ಖುಷಿ ಮತ್ತು ದುಃಖ ಎರಡೂ ಇದೆ. ಏಕೆಂದರೆ 2018ರಲ್ಲಿ ನಡೆದ ಘಟನೆ 2019ರಲ್ಲಿ ಬೆಳಕಿಗೆ ಬಂದಿದೆ, ವರದಿಯಾಗಲು ಸುಮಾರು ಒಂದು ವರ್ಷ ತೆಗೆದುಕೊಂಡಿದೆ. ಇಷ್ಟು ವರ್ಷಗಳಲ್ಲಿ ನಾವು ಬೇಡಿದೀವಿ ಹಾಗೂ ಜಗಳ ಮಾಡಿದ್ದೀವಿ. ಅಲ್ಲದೆ ಸಾರ್ವಜನಿಕರು ಮತ್ತು ಮಾಧ್ಯಮಗಳು ನಮ್ಮೊಟ್ಟಿಗೆ ನಿಂತು ಜಗಳ ಮಾಡಬೇಕಿತ್ತು ಯಾಕೆ ನೀವು ನಮ್ಮಿಂದ ಮುಚ್ಚಿಸುತ್ತಿದ್ದೀರಾ? ಯಾಕೆ ನೀವು ಯಾವುದನ್ನೂ ಬಹಿರಂಗ ಪಡಿಸುತ್ತಿಲ್ಲ'ಎಂದು ಪಾರ್ವತಿ ಮೆನನ್ ಮಾತನಾಡಿದ್ದಾರೆ.
ಬಿಗ್ ಬಾಸ್ ಕಾರ್ತಿಕ್ ತಂಗಿ ಮಗನ ಫೋಟೋ ವೈರಲ್; ಮೇಕಪ್ ಹಾಕದಿದ್ದರೂ ಎಷ್ಟು ಲಕ್ಷಣ ಎಂದ ನೆಟ್ಟಿಗರು!
'ಇಲ್ಲಿ ಕೆಲವೊಂದು ವಿಚಾರಗಳನ್ನು ಸೆನ್ಸೇಷನ್ ಮಾಡಬೇಕಿದೆ. ಜಸ್ಟಿಸ್ ಹೇಮಾ ಸಮಿತಿಯಲ್ಲಿ ಸಿಗುವ ವರದಿಗಳು ಸಂಪೂರ್ಣವಾಗಿ ಚಿತ್ರರಂಗದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳ ಅಧ್ಯಯನವಾಗಿದೆ. ಈ ಸಮಿತಿ ಯಾಕೆ ರೂಪುಗೊಂಡಿತ್ತು ಮತ್ತು ವರರಿಯನ್ನು ಏಕೆ ರಚಿಸಲಾಗಿದೆ ಎಂದು ನಮಗೆ ಸಹಾಯ ಮಾಡುತ್ತದೆ. ಅಲ್ಲದೆ ಇದರಿಂದ ನಾವು ಕೆಲಸ ಮಾಡುವ ಜಾಗದಲ್ಲಿ ಒಳ್ಳೆಯ ವಾತಾವರಣ ಮತ್ತು ಸಂಸ್ಕೃತಿಯನ್ನು ರಚಿಸಲು ಸಹಾಯ ಮಾಡುತ್ತದೆ..ಯಾರೂ ಕಾನೂನಿಗೆ ವಿರುದ್ಧವಾಗಿ ಹೋಗುವುದಿಲ್ಲ. ಹೇಮಾ ಸಮಿತಿಯಲ್ಲಿ ಒಮ್ಮೊಮ್ಮೆ ವಿಚಾರಗಳನ್ನು ಸೆನ್ಸೇಷನ್ ಮಾಡಲು ಯೋಚಿಸುತ್ತಾರೆ. ಇಲ್ಲ ಇಲ್ಲ ನಾವು ನಮ್ಮ ಮನಸ್ಸು ಮತ್ತು ಗಮನವನ್ನು ಘಟನೆ ಕಡೆ ಹರಿಸಬೇಕು ಆಗ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬುದು ಸಮಿತಿಯ ಪ್ರತಿಯೊಬ್ಬರಿಗೂ ಇರಬೇಕು' ಎಂದು ಪಾರ್ವತಿ ಹೇಳಿದ್ದಾರೆ.
ಮದುವೆಯಾದ ಮನೆಯನ್ನು 25 ಕೋಟಿಗೆ ಮಾರಾಟಕ್ಕಿಟ್ಟ ಸೋನಾಕ್ಷಿ; ಧರ್ಮ ಸಮಸ್ಯೆಯಲ್ಲಿ ಸಿಲುಕಿಕೊಂಡ್ರಾ ಎಂದ ನೆಟ್ಟಿಗರು!
'ಮಲಯಾಳಂ ಇಂಡಸ್ಟ್ರಿ ಒಳಗೆ ತುಂಬಾ ಕೊಳೆತು ಹೋಗಿದೆ ಎಂದು ವರದಿಯಲ್ಲಿ ಇದೆ. ನಾವು ಒಳಗಿನಿಂದ ಚೆನ್ನಾಗಿಯೇ ಇದ್ದೇವೆ. ಹೀಗಾಗಿಯೇ ನಾವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದೇವೆ. ಯಾವುದಾರೂ ಜಾಗದಿಂದ ಯಾವುದೇ ವಿಚಾರವೂ ಕೇಳುತ್ತಿಲ್ಲ ಎಂದರೆ ಆಗ ನೀವು ಚಿಂತಿಸಬೇಕು' ಎಂದಿದ್ದಾರೆ.