ಮಾಂಸಾಹಾರಿಗಳಿಗೆ ಹೀಗೆಲ್ಲಾ ಹೇಳೋದಾ ಅದಾ ಶರ್ಮಾ? ದಿ ಕೇರಳ ಸ್ಟೋರಿ ನಟಿ ವಿರುದ್ಧ ಭಾರಿ ಆಕ್ರೋಶ

By Suchethana D  |  First Published Aug 22, 2024, 10:09 PM IST

ಮಾಂಸಾಹಾರಿಗಳ ವಿರುದ್ಧ ಕಿಡಿ ಕಾರೋ ಭರದಲ್ಲಿ ಬಾಲಿವುಡ್​ ನಟಿ ಅದಾ ಶರ್ಮಾ ಏನೆಲ್ಲಾ ಹೇಳಿದ್ದಾರೆ ನೋಡಿ. ಸೋಷಿಯಲ್​ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ 
 


ದಿ ಕೇರಳ ಸ್ಟೋರಿ ಚಿತ್ರದ ಮೂಲಕ ರಾತ್ರೋರಾತ್ರಿ ಸೂಪರ್​ಸ್ಟಾರ್​ ಆದ ನಟಿ ಅದಾ ಶರ್ಮಾ. ನಟಿ  ಯಾವಾಗಲೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು PETA ಇಂಡಿಯಾದ ಹೊಸ ಜಾಹೀರಾತು ಪ್ರಚಾರದಲ್ಲಿ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳ ನಡುವೆ ನಡೆಯುತ್ತಿರುವ ಚರ್ಚೆಯಲ್ಲಿ ಮಾತನಾಡಿದ್ದು, ಮಾಂಸಹಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಅಷ್ಟಕ್ಕೂ ನಟಿ ಅದಾ ಶರ್ಮಾ ಬಾಲ್ಯದಿಂದಲೂ ಸಸ್ಯಾಹಾರಿ. ಮಾಂಸಾಹಾರ ಸೇವನೆಯಿಂದ ದೂರವಿರಿ ಎಂದು ಅಭಿಮಾನಿಗಳಿಗೆ ಅವರು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ.  ಹೋಮೋ ಸೇಪಿಯನ್ಸ್‌ನ ಕಾಲದಿಂದ ದ್ವಿಪಾದಿಗಳ ಕಾಲದವರೆಗೆ ಜನರು ಬೇಟೆಯಾಡುತ್ತಿದ್ದಾರೆ, ಆದ್ದರಿಂದ ಅವರು ಮೊದಲಿನಿಂದಲೂ ಮಾಂಸಾಹಾರಿಗಳು ಎನ್ನುವ ಮಾತು ಹೇಳಿರುವ ನಟಿ,   ಇದು ಸಂಪೂರ್ಣವಾಗಿ ಸರಿ ಎಂದು ನಾನು ಭಾವಿಸುತ್ತೇನೆ. ಮಾಂಸಾಹಾರಿಗಳು ಕಾರಿನಲ್ಲಿ ಕುಳಿತುಕೊಳ್ಳಲು ಯೋಗ್ಯರಲ್ಲ, ಅವರು  ಗುಹಾನಿವಾಸಿಗಳಂತೆ ಬದುಕಬೇಕು. ಆದ್ದರಿಂದ ಅವರು ಗುಹೆಯಲ್ಲಿ ವಾಸಿಸಬೇಕು ಎಂದಿದ್ದಾರೆ!

ನಾನು ಹೇಳುತ್ತೇನೆ ಕೇಳಿ. ನೀವು ನಿಮ್ಮ ಕಾರಿನಲ್ಲಿ ಕುಳಿತುಕೊಳ್ಳಬೇಡಿ, ನೀವು ಗುಹೆಯಲ್ಲಿಯೇ ಇದ್ದು ನಿಮ್ಮ ಸ್ವಂತ ಪ್ರಾಣಿಗಳನ್ನು ಕೊಂದು ತಿನ್ನಿರಿ. ಅವರೇ ನಿಜವಾದ ಮಾಂಸಾಹಾರಿಗಳು. ಹಿಂದೆ ಬೇಟೆಯಾಡಿ ತಿನ್ನುತ್ತಿದ್ದರು. ನೀವೂ ಹಾಗೆಯೇ ಮಾಡಿ. ನಿಮ್ಮ ಸ್ವಂತ ಶಿಲಾಯುಗದ ಆಯುಧಗಳು ಮರದ ಕೆಳಗೆ ನೀವು ಸಿಂಹ ಅಥವಾ ಕರಡಿಯನ್ನು ಕಂಡುಕೊಂಡರೆ, ಆ ಸಮಯದಲ್ಲಿ ನೀವು ತಿನ್ನುವ ಯಾವುದೇ ಪ್ರಾಣಿಯನ್ನು ನೀವು ಕಚ್ಚಾ ಅಥವಾ ಹುರಿದು ತಿನ್ನಬಹುದು. ಮಾಂಸಾಹಾರಿಗಳು ಗುಹೆ ಸಂಸ್ಕೃತಿಯನ್ನು ಅನುಸರಿಸಲು ಬಯಸಿದರೆ, ಅವರು ತಮ್ಮ ಎಸಿ ಕಾರುಗಳಲ್ಲಿ ಕುಳಿತು ತಮ್ಮ ಆಹಾರವನ್ನು ಆನಂದಿಸಲು ಸಾಧ್ಯವಿಲ್ಲ ಎಂದಿದ್ದಾರೆ!

Tap to resize

Latest Videos

undefined

ಸುಶಾಂತ್ ಸಿಂಗ್​ ನಿಗೂಢವಾಗಿ ಸತ್ತ 'ಭೂತ ಬಂಗ್ಲೆ'ಯಲ್ಲೇ ನೆಲೆಸಿರೋ ನಟಿ ಅದಾ ಶರ್ಮಾ ಅನುಭವ ಕೇಳಿ...

ಇಷ್ಟಕ್ಕೇ ಸುಮ್ಮನಾಗದ ನಟಿ, ಗುಹೆಯ ಬದಲು ಇಲ್ಲಿ ವಾಸಿಸುವುದು ಸರಿಯಲ್ಲ.  ಇಲ್ಲಿಯಾದರೆ ನಿಮಗೆ ನಾನ್ ವೆಜ್ ತಿನ್ನಬೇಕೆಂದರೆ ಯಾರೋ ಅಡುಗೆ ಮಾಡುತ್ತಿದ್ದಾರೆ, ಯಾರೋ ಹಿಡಿಯುತ್ತಿದ್ದಾರೆ, ಯಾರೋ ಹೊಡೆಯುತ್ತಿದ್ದಾರೆ, ಯಾರೋ ರಕ್ತವನ್ನು ಸ್ವಚ್ಛಗೊಳಿಸುತ್ತಿದ್ದಾರೆ, ಯಾರೋ ಪ್ಲೇಟ್‌ನಲ್ಲಿ ಬಡಿಸುತ್ತಿದ್ದಾರೆ. ಅದು ನಿಮಗೆ ಸರಿ ಬರುವುದಿಲ್ಲ. ನೀವು ಶಿಲಾಯುಗದಂತೆ ಬದುಕಲು ಬಯಸುತ್ತೀರಿ, ನೀವು ಗುಹೆಯಲ್ಲಿ ವಾಸಿಸಬೇಕು, ನೀವು ಚಾಕು ಮತ್ತು ಫೋರ್ಕ್‌ಗಳೊಂದಿಗೆ ಎಸಿ ರೆಸ್ಟೋರೆಂಟ್‌ನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 

ಇದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಮಾಂಸಹಾರಿಗಳು ನಟಿಯ ವಿರುದ್ಧ ಹರಿಹಾಯುತ್ತಿದ್ದಾರೆ. ಸಸ್ಯಾಹಾರಿಗಳಾದರೆ ಕಾಡಿಗೆ ಹೋಗಿ, ನೀವೇ ಸದ್ಯ ಕಿತ್ತು ತಿನ್ನಿ. ನೀವು ನಾಡಿನಲ್ಲಿ ಉಳಿಯಲು ಯೋಗ್ಯರಲ್ಲ ಎಂದೆಲ್ಲಾ ನಟಿ ವಿರುದ್ಧ ಗರಂ ಆಗುತ್ತಿದ್ದಾರೆ. ಇನ್ನು ನಟಿಯ ಮುಂಬರುವ ಚಿತ್ರದ ಕುರಿತು ಹೇಳುವುದಾದರೆ,  ಅದಾ ಶರ್ಮಾ 'ದಿ ಗೋಮ್​ ಆಫ್​ ಗಿರ್​ಗಿಟ್​ ಚಿತ್ರದಲ್ಲಿ ಗಾಯತ್ರಿ ಭಾರ್ಗವ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆಟವು ಬ್ಲೂ ವೇಲ್ ಅಪ್ಲಿಕೇಶನ್ ಅನ್ನು ಆಧರಿಸಿದೆ.  

ಕಲ್ಕಿಯಲ್ಲಿ ಗರ್ಭಿಣಿ ರೋಲ್‌ ಮಾಡಿದ್ದ ದೀಪಿಕಾ ಅದೇ ನಕಲಿ ಹೊಟ್ಟೆ ತೋರಿಸ್ತಿದ್ದಾರಾ? ವೈದ್ಯೆ ಹೇಳಿರೋದು ನಿಜವಾಯ್ತಾ?

click me!