ವೇದಿಕೆ ಮೇಲೆಯೇ ಸೆರಗು ಬಿಚ್ಚಿದ ಮುಂಗಾರು ಮಳೆ ಚೆಲುವೆ ನೇಹಾ: ಫ್ಯಾನ್ಸ್​ ಗರಂ

By Suvarna News  |  First Published Aug 17, 2023, 4:15 PM IST

ಚಿತ್ರವೊಂದರ ಪ್ರಮೋಷನ್​ ವೇಳೆ ನಟಿ ನೇಹಾ ಶೆಟ್ಟಿ ಸೀರೆಯ ಸೆರಗನ್ನು ವೇದಿಕೆಯ ಮೇಲೆ ಬಿಚ್ಚಿದ್ದು, ಸಕತ್​ ಟ್ರೋಲ್​ ಆಗ್ತಿದೆ. 
 


 ಕಾಲಿವುಡ್​ ನಟ ವಿಜಯ್​ ದೇವರಕೊಂಡ (Vijay Deverakonda) ಅವರು ಈಗ‘ಖುಷಿ’ ಸಿನಿಮಾದಲ್ಲಿ ಬಿಜಿ ಆಗಿರುವ ನಡುವೆಯೇ ಮೊನ್ನೆ ಅವರು ಮಾಡಿದ ಡ್ಯಾನ್ಸ್​ ಒಂದು ಸಕತ್​ ಟ್ರೋಲ್​ಗೆ ಒಳಗಾಗಿತ್ತು. ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆಯೇ, ಖುಷಿ ಚಿತ್ರದ ನಾಯಕಿ  ಸಮಂತಾ ಅವರ ಜೊತೆಗಿನ ರೊಮ್ಯಾಂಟಿಕ್ ಆಗಿ ವೇದಿಕೆ ಮೇಲೆ ಡ್ಯಾನ್ಸ್​ ಮಾಡಿದ್ದು, ಸಕತ್​ ಟ್ರೋಲ್​ಗೆ ಒಳಗಾಗಿತ್ತು.  ಅದಕ್ಕೆ ಕಾರಣ, ಆಗಸ್ಟ್​ 15ರ ಸ್ವಾಂತಂತ್ರ್ಯ ದಿನ (Indepence day)  ಖುಷಿ ಚಿತ್ರತಂಡ ಹೈದರಾಬಾದ್​ನ ಎಚ್​ಐಸಿಸಿ ಹಾಲ್​ನಲ್ಲಿ  ಸಂಗೀತ ಸಂಜೆ ಆಯೋಜಿಸಿತ್ತು. ಈ ಸಂಗೀತ ಸಂಜೆಯಲ್ಲಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅವರು ಹಾಡೊಂದಕ್ಕೆ ನರ್ತಿಸಿದ್ದರು. ಈ ಸಂದರ್ಭದಲ್ಲಿ  ವಿಜಯ್​ ದೇವರಕೊಂಡ ಅವರು ತಮ್ಮ ಶರ್ಟ್​ ಅನ್ನು ತೆಗೆದು ಕೇವಲ ಬನಿಯನ್​ನಲ್ಲಿ  ಸಮಂತಾರನ್ನು ಎತ್ತುಕೊಂಡು ಗರಗರನೆ ತಿರುಗಿದರು. ನಂತರ ಇವರಿಬ್ಬರ ರೊಮ್ಯಾನ್ಸ್​ ಮುಂದುವರೆಯಿತು. ಇದು ಅತ್ಯಂತ ಕೆಟ್ಟ ರೀತಿಯ ಪ್ರಮೋಷನ್​ ಎನ್ನುವುದು ಜನರ ವಾದ.

ಈಗ ಅದರ ನಡುವೆಯೇ, ಈಗ  ಕನ್ನಡತಿ, ಮುಂಗಾರು ಮಳೆ-2 ಚಿತ್ರದ ನಟಿ ನೇಹಾ ಶೆಟ್ಟಿ (Neha Shetty) ವೇದಿಕೆ ಮೇಲೆಯೇ ಸೆರಗು ಬಿಚ್ಚಿ ನರ್ತಿಸಿದ್ದು ಇದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಸಿನಿಮಾದ ಪ್ರಮೋಷನ್​ ಹೆಸರಿನಲ್ಲಿ ಈ ರೀತಿಯಲ್ಲಿ ಮಾನ ಮರ್ಯಾದೆ ಬಿಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ನಟ ವಿಶ್ವಾಕ್​ ಸೇನ್​ ಮತ್ತು ನೇಹಾ ಶೆಟ್ಟಿ ಗ್ಯಾಂಗ್ಸ್​ ಆಫ್​ ಗೋದಾವರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಇಂಥದ್ದೊಂದು ದೃಶ್ಯ ಗಮನ ಸೆಳೆದಿದೆ. 

Tap to resize

Latest Videos

undefined

ವೇದಿಕೆಯಲ್ಲೇ ಸಮಂತಾ, ದೇವರಕೊಂಡ ರೊಮ್ಯಾನ್ಸ್: ಸಾಕಪ್ಪಾ ಸಾಕು ಎಂದ ಫ್ಯಾನ್ಸ್​!

ಈ ಚಿತ್ರದ ಹಾಡಿನ ರಿಲೀಸ್​ ವೇಳೆ ವಿಶ್ವಾಕ್​ ಸೇನ್​ ಮತ್ತು ನೇಹಾ ಶೆಟ್ಟಿ ವೇದಿಕೆ ಮೇಲೆ ನರ್ತಿಸಿದ್ದಾರೆ.  ಸುತ್ತಮ್ಲ ಸುಸಿ ಹಾಡು ಇದಾಗಿದ್ದು, ಇದರ ಬಿಡುಗಡೆಯಾಗಿದೆ.  ಈ ಹಾಡಿಗೆ ಯುವನ್​ ಶಂಕರ್​ ರಾಜಾ ಮ್ಯೂಸಿಕ್​ ನೀಡಿದ್ದಾರೆ.  ಇದರಲ್ಲಿ  ಹುಕ್​ ಸ್ಟೆಪ್ಸ್​ಇದ್ದು, ಈ ಜೋಡಿ  ವೇದಿಕೆ ಮೇಲೆಯೇ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ  ನೇಹಾ ತಮ್ಮ ಸೀರೆಯ ಸೆರಗನ್ನು ಬಿಚ್ಚಿದ್ದಾರೆ. ಇದರ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೇಹಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  

ಅಸಲಿಗೆ ಇಂಥ ಗಿಮಿಕ್​ಗಳು ಸಿನಿಮಾ ಪ್ರಮೋಷನ್​ನಲ್ಲಿ (Promotion) ಅಗತ್ಯ ಎಂದು ಒಂದು ವರ್ಗ ವಾದಿಸುತ್ತಿದೆ. ಏಕೆಂದರೆ ಕಾಂಪಿಟೀಷನ್​ ಸಕತ್​ ಇದೆ.  ಇತ್ತೀಚೆಗೆ ಎಲ್ಲ ಸಿನಿಮಾಗಳು ಎಲ್ಲ ಭಾಷೆಗಳಲ್ಲಿ ಡಬ್ ಆಗುತ್ತಿರುವುದಿಂದ ಪ್ರೇಕ್ಷಕರನ್ನು ಸೆರೆ ಹಿಡಿಯಲು ಇಂಥದ್ದೆಲ್ಲಾ ಮಾಡುವ ಅನಿವಾರ್ಯತೆ ಇದೆ.  ಹೀಗಾಗಿ ಜನರನ್ನು ಸೆಳೆಯಲು ಚಿತ್ರತಂಡಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ, ಕೆಲವೊಮ್ಮೆ ಇಂತಹ ಪ್ರಯತ್ನ ಮಾಡಲೇಬೇಕಾದ ಅನಿವಾರ್ಯತೆ ಇದ್ದು, ಕೆಲವೊಮ್ಮೆ ಇವು ಟ್ರೋಲ್​​ಗೆ ಒಳಗಾಗುವುದು ಇದೆ. ಆದರೆ ಇಂದಿನ ಚಿತ್ರತಂಡಕ್ಕೆ ಚೆನ್ನಾಗಿ ಗೊತ್ತು, ಒಂದು ಚಿತ್ರ ಅಥವಾ ಹಾಡು ಹೆಚ್ಚು ಟ್ರೋಲ್​ ಆಯಿತೆಂದರೆ, ಅದನ್ನು ನೋಡಲು ಇನ್ನಷ್ಟು ಜನ ಮುಂದೆ ಬರುತ್ತಾರೆ. ಟ್ರೋಲ್​  ಆದಷ್ಟೂ ಯಶಸ್ಸು ಸಿಗುವುದು ಎನ್ನುವುದನ್ನು ಅರಿತೇ ಕೆಲವೊಮ್ಮೆ ಹೀಗೆಲ್ಲಾ ವರ್ತಿಸುತ್ತಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಇಂದಿನ ನಟಿಯರಿಗೆ ಅಂಗಾಂಗ ಪ್ರದರ್ಶನ ದೊಡ್ಡ ವಿಷಯವೇ ಅಲ್ಲ, ಪೈಪೋಟಿಗೆ ಬಿದ್ದವರಂತೆ ಅಂಗಗಳನ್ನುಪ್ರದರ್ಶನ ಮಾಡುತ್ತಾರೆ. ಜೊತೆಗೆ ನಾಯಕನ ಜೊತೆ ಎಗ್ಗಿಲ್ಲದೇ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂಥದ್ದರಲ್ಲಿ ವೇದಿಕೆ ಮೇಲೆ ನಟಿ ಸೆರಗು ಬಿಚ್ಚಿದ್ದು ದೊಡ್ಡ ವಿಷಯವಲ್ಲ ಎನ್ನುವ ಸಮರ್ಥನೆಯೂ ಬರುತ್ತಿದೆ. 

RRPK: ಶಬನಾ ಅಜ್ಮಿ- ಧರ್ಮೇಂದ್ರ ಸುದೀರ್ಘ ಚುಂಬನ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಏನು?

click me!