ಆಲ್ಪಾ ಕಾಯಿಲೆಯಿಂದ ಬಳಲುತ್ತಿರುವ ಶಿಲ್ಪಾ ಶೆಟ್ಟಿ. ಮಗಳು ಪ್ರೀ-ಮೆಚ್ಯೂರ್ ಎಂದು ಐಸಿಯುನಲ್ಲಿ ಇಟ್ಟಿದ್ದರಂತೆ..
ಬಾಲಿವುಡ್ ಪರ್ಫೆಕ್ಟ್ ಮಾಮ್ ಫಿಟ್ ನಟಿ ಶಿಲ್ಪಾ ಶೆಟ್ಟಿ ಆಗಾಗ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡು ಮನಸ್ಸಿನ ಬಾರ ಇಳಿಸಿಕೊಳ್ಳುತ್ತಾರೆ. 2009ರಲ್ಲಿ ಉದ್ಯಮಿ ರಾಜ್ ಕುಂದ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಪರ್ಸನಲ್ ಲೈಫ್‌ನಲ್ಲಿ ಸಖತ್ ಬ್ಯುಸಿಯಾಗಿ ಬಿಟ್ಟರು. ಅಲ್ಲದೆ ಈ ಜೋಡಿ 2012ರಲ್ಲಿ ಮುದಾದ ಮಗ ವಿಹಾನ್ ಬರ ಮಾಡಿಕೊಂಡರು. ಮಗ 7 ವರ್ಷಕ್ಕೆ ಕಾಲಿಡುತ್ತಿದ್ದರಂತೆ ಎರಡನೇ ಮಗುವನ್ನು ಸೆರೋಗೆಸಿ ಮೂಲಕ ಬರ ಮಾಡಿಕೊಳ್ಳಲು ನಿರ್ಧರಿಸುತ್ತಾರೆ. ಇದಕ್ಕೆ ಕಾರಣ ಏನೆಂದು ರಿವೀಲ್ ಮಾಡಿದ್ದಾರೆ.
'ನನ್ನ ಮಗ ಹುಟ್ಟಿದ ಮೇಲೆ ಸಾಕಷ್ಟು ಬಾರಿ ಎರಡನೇ ಮಗು ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡಿದೆ ಆದರೆ ನಾನು ಆಟೋ tomium ಕಾಯಿಲೆ Apla ಯಿಂದ ಬಳಲುತ್ತಿದ್ದೆ. ಇದರಿಂದ ಎರಡು ಮೂರು ಸಲ ಗರ್ಭಪಾತವಾಗಿದೆ. ನಾನು ಸಹೋದರಿಯರ ಜೊತೆ ಹುಟ್ಟಿ ಬೆಳೆದಿರುವುದು ಹೀಗಾಗಿ ನನ್ನ ಮಗ ಒಬ್ಬಂಟಿಯಾಗಿ ಬೆಳೆಯುವುದು ಬೇಡ ಎಂದು ನಿರ್ಧರಿಸಿ ನಾನು ಸರೋಗೆಸಿಗೆ ಮುಂದಾದೆ. ಮೂರು ಸಲ ಪ್ರಯತ್ನ ಪಟ್ಟೆವು ಆಮೇಲೆ ನಾನು ಓಕೆ ಆಗಲ್ಲ ಬಿಡಿ ಎಂದು ಸುಮ್ಮನಾಗಿದ್ದೆ ಆಮೇಲೆ ಲಕ್ ನಮ್ಮ ಕೈ ಹಿಡಿಯಿತ್ತು. ಸಹೋದರ ಅಥವಾ ಸಹೋದರಿಯರಿದ್ದರೆ ಜೀವನ ಅದ್ಭುತವಾಗಿರುತ್ತದೆ ಬೆಕ್ಕು ನಾಯಿಗಳ ರೀತಿ ಜಗಳ ಮಾಡುತ್ತೀವಿ ಅದರೆ ಕೊನೆಯಲ್ಲಿ ನಮ್ಮ ಜೊತೆ ಅವರಿದ್ದರೆ ಏನೋ ಧೈರ್ಯ ಬರುತ್ತದೆ. ವಿಹಾನ್ 8 ವರ್ಷದ ಮಗು ಆಗಿರುವ ಪುಟ್ಟ ಮಗು ಹುಟ್ಟಿದಾಗ ಮ್ಯಾನೇಜ್ ಮಾಡಲು ಕಷ್ಟವಾಗುತ್ತದೆ ಎಂದು ಬೇಡ ಎನ್ನುವಾಗ ನಮ್ಮ ಹೆಣ್ಣು ಮಗಳು ಆಗಮಿಸಿದಳು. ಕಳೆದ ಮೂರು ವರ್ಷಗಳಿಂದ ಶಿರಡಿ ಸಾಯಿ ಬಾಬ ಮಂದಿರಕ್ಕೆ ಭೇಡಿ ನೀಡುತ್ತಿದ್ದೀವಿ ಆಗ ನನ್ನ ಮಗ ವಿಹಾನ್ ದೇವರ ಮುಂದೆ ನಿಂತು ದೇವರೆ ನನಗೆ ಪುಟ್ಟ ತಂಗಿಯನ್ನು ಬೇಕು ಎಂದು ಪ್ರಾರ್ಥನೆ ಮಾಡುತ್ತಿದ್ದ' ಎಂದು ಶಿಲ್ಪಾ ಪಿಂಕ್‌ವಿಲ್ಲ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಚಿರತೆ ಔಟ್ಫಿಟ್ನಲ್ಲಿ ಶಿಲ್ಪಾ ಶೆಟ್ಟಿ: ಮುಖ ಮುಚ್ಕೊಂಡ್ ಬಂದ ಪತಿ; ಟ್ರೋಲಿಗರು ಬಿಡ್ತಾರಾ?
'ಆರಂಭದಲ್ಲಿ ನನ್ನ ಮಗನಿಗೆ ಸೆರೋಗೆಸಿ ಅರ್ಥ ಮಾಡಿಸುವುದು ಕಷ್ಟವಾಗಿತ್ತು. ಮೊದಲು ನಾನು ಗರ್ಭಿಣಿ ನನ್ನ ಹೊಟ್ಟೆಯಲ್ಲಿ ಮಗು ಇದೆ ಎಂದು ಸುಳ್ಳು ಹೇಳಿದೆ. ಆಮೇಲೆ ಕಥೆ ಕಟ್ಟಿ ನನ್ನ ರೀತಿಯಲ್ಲಿ ಅರ್ಥ ಮಾಡಿಸಿದೆ. ಮಗು ಹುಟ್ಟುವ ದಿನ ಬೆಳಗ್ಗೆ 4 ಗಂಟೆ ಸಮಯದಲ್ಲಿ ವಿಹಾನ್ ಆಸ್ಪತ್ರೆಗೆ ಬರುವುದಾಗಿ ಹಠ ಮಾಡಿದ. ಸಮಿಶಾ ಪ್ರೀ ಮೆಚ್ಯೂರ್ ಆಗಿದ್ದ ಕಾರಣ ಆಕೆಯನ್ನು ಐಸಿಯುನಲ್ಲಿ ಇಟ್ಟಿದ್ದರು ಹೀಗಾಗಿ ಮೊದಲ ಸಲ ಹುಟ್ಟಲಿಲ್ಲ. ಮೊದಲ ಸಲ ತಂಗಿಯನ್ನು ಮಡಿಲಿನಲ್ಲಿ ಮಲಗಿಸಿದಾಗ ತುಂಬಾ ಖುಷಿ ಪಟ್ಟ' ಎಂದು ಶಿಲ್ಪಾ ಹೇಳಿದ್ದಾರೆ.
'ಖಂಡಿತಾ ನಾನು ಮೊದಲ ಮಗು ಆದಮೇಲೆ ತುಂಬಾ ಬಾಡಿ ಶೇಮಿಂಗ್ ಎದುರಿಸಿರುವೆ. ವಿಹಾನ್ ಹುಟ್ಟಿ 5 ತಿಂಗಳ ನಂತರ ನಾನು ಮೊದಲ ಸಲ ಹೊರಗಡೆ ಹೋಗಿದ್ದೆ ಆಗ ಒಂದು ಗುಂಪಿನ ಮಹಿಳೆಯರು ಪಾರ್ಟಿ ಮಾಡುತ್ತಿದ್ದರು ಆಗ ಅವರು ದೇವರೇ ಶಿಲ್ಪಾ ಶೆಟ್ಟಿ ಇನ್ನೂ ದಪ್ಪ ಇದ್ದಾಳೆ ಒಂದು ಚೂರು ಸಣ್ಣಗಾಗಿಲ್ಲ ಖಂಡಿತಾ ಆಕೆ ಮತ್ತೆ ತೆರೆ ಮೇಲೆ ಬರುವುದಿಲ್ಲ ಎಂದು ಮಾತನಾಡುತ್ತಿದ್ದರು ನನಗೆ ಸ್ಪಷ್ಟವಾಗಿ ಕೇಳಿಸಿದೆ' ಎಂದಿದ್ದಾರೆ ಶಿಲ್ಪಾ.