ರಣಬೀರ್​ ವಿರುದ್ಧ ಮಾತನಾಡಿ ಪೇಚಿನಲ್ಲಿ ಆಲಿಯಾ: ಗಂಡ ಒಳ್ಳೆಯವನೆಂದು ತೋರಿಸಲು ಸರ್ಕಸ್​!

By Suvarna News  |  First Published Aug 17, 2023, 3:58 PM IST

ಪತಿ ರಣಬೀರ್​ ಕಪೂರ್​ ವಿರುದ್ಧ  ಮಾತನಾಡಿ ಈಗ ಪೇಚಿಗೆ ಸಿಲುಕಿರುವ ನಟಿ ಆಲಿಯಾ ಭಟ್​, ಅದನ್ನು ಸರಿ ಮಾಡಲು ಗಂಡನನ್ನು ಹಿಗ್ಗಾಮುಗ್ಗಾ ಹೊಗಳಿದ್ದಾರೆ. 
 


ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್​ ಕ್ಯೂಟ್​ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt). ಅದರಲ್ಲಿಯೂ ಸದ್ಯ ಹಿಂದಿ ಚಿತ್ರರಂಗದ ಯಶಸ್ವಿ ನಟಿಯ ಬಗ್ಗೆ ಹೇಳಿದರೆ ಅದರಲ್ಲಿ ಆಲಿಯಾ ಭಟ್ ಹೆಸರು ಸೇರುವುದು ಖಚಿತ. ಒಂದೆಡೆ ಇಂಡಸ್ಟ್ರಿಯ ಹಲವು ದೊಡ್ಡ ನಟರು ಹಿಟ್ ಚಿತ್ರದ ಹುಡುಕಾಟದಲ್ಲಿ ಬ್ಯುಸಿಯಾಗಿದ್ದರೆ, ಆಲಿಯಾ ಒಂದಿಲ್ಲೊಂದು ಹಿಟ್ ನೀಡುತ್ತಿದ್ದಾರೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಟಿಯ ಮತ್ತೊಂದು ಯಶಸ್ವಿ ಚಿತ್ರವಾಗಿದೆ. ಈ ಹಿಂದೆ ಆಲಿಯಾ ಅಭಿನಯದ 'ಗಂಗೂಬಾಯಿ ಕಥಿವಾಡಿ' ಮತ್ತು 'ಬ್ರಹ್ಮಾಸ್ತ್ರ' ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿದ್ದವು. ಇವರ ಒಟ್ಟೂ 8 ಚಿತ್ರಗಳು 100 ಕೋಟಿ ಕ್ಲಬ್​ಗೆ ಸೇರಿವೆ. ಸದ್ಯ ಇವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಕತ್​ ಸುದ್ದಿ ಮಾಡುತ್ತಿದೆ. ಅದೇ ಇನ್ನೊಂದೆಡೆ, 2022ರ  ಏಪ್ರಿಲ್​ 14ರಂದು ಆಲಿಯಾ ಮತ್ತು ರಣಬೀರ್​ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಸಿರಿದ್ದು, ಈಗ ಅಮ್ಮ ಕೂಡ ಹೌದು. ಇವರದ್ದು ಬಾಲಿವುಡ್​ನ ಕ್ಯೂಟ್​ ಜೋಡಿ ಎನ್ನಲಾಗುತ್ತದೆ. 

ಆದರೆ ನಿನ್ನೆಯಷ್ಟೇ  ಆಲಿಯಾ ಭಟ್​ ತಮ್ಮ ಲಿಪ್​ಸ್ಟಿಕ್​ ಕುರಿತು ನೀಡಿರುವ ಹೇಳಿಕೆಯಿಂದಾಗಿ ಪತಿ ರಣಬೀರ್​ ಕಪೂರ್​ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಇಷ್ಟೆಲ್ಲಾ ಸಕ್ಸಸ್​ ಆಗಿರುವಾಗ ಇನ್ನೂ ಪತಿಯ ಮಾತನ್ನು ಕೇಳುತ್ತಿರುವ ಬಗ್ಗೆ ಆಲಿಯಾ ಭಟ್​ ಮೇಲೆ ಮುನಿಸನ್ನೂ ತೋರಿಸುತ್ತಿದ್ದಾರೆ. ಅಷ್ಟಕ್ಕೂ ಏನಪ್ಪಾ ಇದು ಲಿಪ್​ಸ್ಟಿಕ್​ ಕಥೆ ಎಂದರೆ, ಆಲಿಯಾ ಭಟ್​ ಒಂದು ವಿಡಿಯೋ ಮಾಡಿ ಅದರಲ್ಲಿ ಲಿಪ್​ಸ್ಟಿಕ್​ ಕುರಿತು ಹೇಳಿಕೊಂಡಿದ್ದಾರೆ.  ವೋಗ್ ಇಂಡಿಯಾದ ವಿಡಿಯೋ ಒಂದರಲ್ಲಿ ಆಲಿಯಾ ಭಟ್ ಲಿಪ್​ಸ್ಟಿಕ್ ಬಗ್ಗೆ ಮಾತನಾಡಿದ್ದಾರೆ. ತಮಗೆ  ಲಿಪ್​ಸ್ಟಿಕ್ ಎಂದರೆ ಹೆಚ್ಚು ಇಷ್ಟ ಎಂದಿರುವ ನಟಿ, ತಾವು ಅದನ್ನು ಹೇಗೆ ಹಚ್ಚುವುದು ಎಂಬುದನ್ನು ವಿವರಿಸಿದ್ದಾರೆ. ಆದರೆ ಕೊನೆಯಲ್ಲಿ ಅದನ್ನು ಒರೆಸಿಬಿಡುತ್ತೇನೆ. ಲಿಪ್​ಸ್ಟಿಕ್​ ಹಚ್ಚಿದರೂ ಅದು ಕಾಣದಂತೆ ಒರೆಸಿ ಲೈಟ್​ ಆಗಿ ಇರಿಸಿಕೊಳ್ಳುತ್ತೇನೆ ಎಂದಿದ್ದಾರೆ. ಇದಕ್ಕೆ ಕಾರಣ ನೀಡಿದ್ದ ಅವರು,  ನನ್ನ ಗಂಡ ರಣಬೀರ್​ ಕಪೂರ್​ಗೆ (Ranbir Kapoor) ಲಿಪ್​​ಸ್ಟಿಕ್​ ಹಚ್ಚುವುದು ಇಷ್ಟವಿಲ್ಲ. ನಾನು ಇದನ್ನು ಹಚ್ಚಿದರೆ ಅವರೇ ಒರೆಸಿಬಿಡುತ್ತಾರೆ. ಏಕೆಂದರೆ ನನ್ನ ನ್ಯಾಚುರಲ್​ ತುಟಿಯ ಬಣ್ಣ ಅವರಿಗೆ ಇಷ್ಟ.  ರಣಬೀರ್ ಕಪೂರ್ ನನ್ನ ಗಂಡನಾಗುವ ಮೊದಲು, ಅವರು ಬಾಯ್​ಫ್ರೆಂಡ್ ಕೂಡ ಆಗಿದ್ದರೂ. ಆಗಿನಿಂದಲೂ ಅವರಿಗೆ ಲಿಪ್​ಸ್ಟಿಕ್​ ಎಂದರೆ ಆಗುವುದಿಲ್ಲ.  ಲಿಪ್​ಸ್ಟಿಕ್ ಹಚ್ಚಿದರೆ ಅದನ್ನು ಒರೆಸು ಒರೆಸು ಎಂದು ಪದೇ ಪದೇ ಹೇಳುತ್ತಾರೆ.  

Tap to resize

Latest Videos

ರಣಬೀರ್ ಕಪೂರ್‌ಗೆ ಲಿಪ್‌ಸ್ಟಿಕ್ ಆಗೋಲ್ವಂತೆ, ನಟಿಯನ್ಯಾಕೆ ಮದ್ವೆಯಾದ ಕೇಳ್ತಿದ್ದಾರೆ ಫ್ಯಾನ್ಸ್!

 ಗಂಡನ ಮೇಲಿನ ಪ್ರೀತಿಯಿಂದಲೇ ಆಲಿಯಾ ಹೇಳಿದ್ದರು. ಆದರೆ ರಣಬೀರ್​ ಕಪೂರ್​ ಪತ್ನಿಯ ಮೇಲೆ ದೌರ್ಜನ್ಯ (Herrasement)ತೋರುತ್ತಿರುವುದಾಗಿ ಆಕೆಯ ಫ್ಯಾನ್ಸ್​ ರಣಬೀರ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದೀಗ ನೀವಂದುಕೊಂಡ ಹಾಗಲ್ಲ ತಮ್ಮ ಪತಿ, ಆತ ತುಂಬಾ ಒಳ್ಳೆಯವ ಎಂದಿರುವ ನಟಿ ಆಲಿಯಾ, ಇದನ್ನು ಹೇಳಲು ಈಗ ಹರಸಾಹಸ ಪಡುತ್ತಿದ್ದಾರೆ. ತಮ್ಮ  ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿರುವ ಆಲಿಯಾ, ತಮ್ಮ ಮತ್ತು ಪತಿ  ರಣಬೀರ್ ಅವರ ಕ್ಯೂಟ್​ ಚಿತ್ರವನ್ನು ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಫೋಟೋ ಅನ್ನು ಸೆರೆ ಹಿಡಿದಿರುವುದು ಪತಿ ರಣಬೀರ್​ ಎನ್ನುವ ಮೂಲಕ ಅವರನ್ನು ಹೊಗಳುವ ಪ್ರಯತ್ನ ಮಾಡಿದ್ದಾರೆ. ರಣಬೀರ್​ ಅವರ  ಛಾಯಾಗ್ರಹಣ ಕೌಶಲವನ್ನು ಹೊಗಳುತ್ತಾ, ಆತ ಅಚ್ಚುಮೆಚ್ಚಿನ ಫೋಟೋಗ್ರಾಫರ್  ಎಂದು ಹೇಳಿದ್ದಾರೆ.
 
ಇನ್‌ಸ್ಟಾಗ್ರಾಮ್ ಈವೆಂಟ್​ನಲ್ಲಿ (Instagram) ಆಲಿಯಾ ಮತ್ತು ರಣಬೀರ್ ಅವರ ಪ್ರೀತಿಯ ಕ್ಷಣಗಳ ಫೋಟೋಗಳನ್ನು ಶೇರ್​ ಮಾಡಲಾಗಿದೆ. ಆಲಿಯಾ ಪತಿಯನ್ನು ಹೊಗಳುವಲ್ಲಿ ನಿರತರಾಗಿದ್ದಾರೆ. ಗಂಡನನ್ನು ಇಂದ್ರ, ಚಂದ್ರ ಎಂದೆಲ್ಲಾ ಹೊಗಳಿದಿದ್ದಾರೆ. ಆತನಿಲ್ಲದೇ ತನ್ನ ಬದುಕು ಅಪೂರ್ಣ ಎಂದೆಲ್ಲಾ ಶ್ಲಾಘಿಸುತ್ತಿದ್ದಾರೆ. ಜೊತೆಗೆ, ಜನರು ಟೀಕಿಸುತ್ತಿರುವುದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನೀನು ಎಂಥ ಮನುಷ್ಯ ಎಂದು ನನಗೆ ಗೊತ್ತು, ನಿನ್ನ ಒಳ್ಳೆಯತನವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನೆಗೆಟಿವ್​ ಕಮೆಂಟ್​ಗಳು ಬಂದರೆ ಜೀವನದಲ್ಲಿ ಮುಂದೆ ಬರಲು ಸಹಕಾರಿಯಾಗುತ್ತದೆ  ಎಂದೆಲ್ಲಾ ಆಲಿಯಾ ಹೇಳಿದ್ದಾರೆ. ಇದಕ್ಕೆ ಸಕತ್​ ಕಮೆಂಟ್​ಗಳು ಬರುತ್ತಿದ್ದು, ಇಷ್ಟೆಲ್ಲಾ ಸರ್ಕಸ್​ ಬೇಕಾ ಅಂತಿದ್ದಾರೆ. ಮಾತು ಆಡಿದ ಮೇಲೆ ಮುಗಿಯಿತು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. 

ಗರ್ಭಿಣಿಯಾಗಿದ್ದ ಸುದ್ದಿಯನ್ನು ಪತಿಗಿಂತಲೂ ಮೊದ್ಲು ಆ ಸ್ಟಾರ್​ಗೆ ತಿಳಿಸಿದ್ರಂತೆ ಆಲಿಯಾ!

click me!