
ಭಾರತ ಮತ್ತು ದಕ್ಷಿಣ ಏಷ್ಯಾದ ಬಹುತೇಕ ಭಾಗಗಳಲ್ಲಿ ಸಾಮಾನ್ಯ ಸ್ಟ್ರೀಟ್ ಫುಡ್‌ಗಳಲ್ಲಿ ಪಾನಿಪುರಿ, ಗೋಲ್ಗಪ್ಪ ಎಲ್ಲರೂ ಸಮಾನವಾಗಿ ಇಷ್ಟ ಪಡುವ ಚಾಟ್ಸ್. ರಸ್ತೆಬದಿಯಲ್ಲಿರುವ ಬಡವನೊಬ್ಬನ ಪಾನಿ ಅಂಗಡಿ ಎಂಥವರನ್ನೂ ತನ್ನತ್ತ ಸೆಳೆಯೋ ಸಾಮರ್ಥ್ಯ ಹೊಂದಿದೆ. ಎಂಥವರೇ ಆದರೂ ಅಲ್ಲಿಗೆ ಹೋಗದಂತೆ ತಮ್ಮನ್ನು ತಾವು ತಡೆಯೋದೇ ಕಷ್ಟ.
ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಕೂಡ ಇತ್ತೀಚೆಗೆ ತಮ್ಮ ಹೊಸ ಗೀತೆ 'ಖಾದ್ ತೈನು ಮೆನು ದಸ್ಸ' ಚಿತ್ರದ ಸೆಟ್‌ನಲ್ಲಿ ಪತಿ, ಗಾಯಕ ರೋಹನ್‌ಪ್ರೀತ್ ಸಿಂಗ್ ಅವರೊಂದಿಗೆ ಬಾಯಲ್ಲಿ ನೀರೂರಿಸುವ ಗೋಲ್ಗಪ್ಪ ಸವಿಯುತ್ತಿದ್ದರು. ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ನೇಹಾ ರೋಹನ್‌ಪ್ರೀತ್ ಜೊತೆ ಗೋಲ್ಗಪ್ಪ ಆಸ್ವಾದಿಸೋದನ್ನು ಕಾಣಬಹುದು. ಹಾಗೂ ಸೂಪರ್ ಆಗಿದೆ ಎಂದುಎಂದು ಪತಿಗೆ ಹೇಳುವುದನ್ನು ನಾವು ನೋಡಬಹುದು.
ರಿಯಾಲಿಟಿ ಶೋ ಸ್ಪರ್ಧಿಯಾಗಿ 'ಕೆಟ್ಟ' ಪರ್ಫಾಮೆನ್ಸ್ ಕೊಟ್ಟಾಕೆ ಈಗ ಬಾಲಿವುಡ್ ಟಾಪ್ ಸಿಂಗರ್
ಲಘು ಆಹಾರದ ಉತ್ತಮ ಭಾಗವೆಂದರೆ ಮಸಾಲೆಯುಕ್ತ ಪಾನಿ, ಸಣ್ಣ, ದುಂಡಗಿನ ಗರಿಗರಿಯಾದ ಪೂರಿ. ಕಡಲೆ, ಆಲೂಗಡ್ಡೆ ಮತ್ತು ಮಸಾಲೆ ಪದಾರ್ಥಗಳಿಂದ ಕೂಡಿದೆ ಇದು. ಈ ಗೋಲ್ಗಪ್ಪ ಪಾಕವಿಧಾನವು ಮೂಲತಃ ವಾರಣಾಸಿಯದ್ದು. ಆದರೆ ಇದನ್ನು ಈಗ ಭಾರತದ ವಿವಿಧ ಭಾಗಗಳಲ್ಲಿ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ.
ಮಹಾರಾಷ್ಟ್ರದಲ್ಲಿ ಇದನ್ನು ಪಾನಿ ಎಂದು ಕರೆದರೆ, ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಇದನ್ನು ಗೋಲ್‌ಗಪ್ಪ ಎಂದು ಕರೆಯಲಾಗುತ್ತದೆ. ಇದನ್ನು ಪಶ್ಚಿಮ ಬಂಗಾಳದಲ್ಲಿ ಪುಚ್ಕಾ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಗುಪ್ಚಪ್ ಎಂದೂ ಕರೆಯುತ್ತಾರೆ.
ಬಾಯಲ್ಲಿ ನೀರು ತರಿಸೋ ಆಲೂ ಚಾಟ್ಸ್ ರೆಸಿಪಿ
ಮನೆಯಲ್ಲಿಯೂ ಖಾದ್ಯವನ್ನು ಸುಲಭವಾಗಿ ತಯಾರಿಸಬಹುದು. ಅಟ್ಟಾ ಅಥವಾ ಸುಜಿಯಿಂದ ತಯಾರಿಸಲ್ಪಟ್ಟ ಪೂರಿ, ಬೇಯಿಸಿದ ಮತ್ತು ಹಿಸುಕಿದ ಆಲೂಗಡ್ಡೆ ಮತ್ತು ಕಡಲೆಹಿಟ್ಟಿನಿಂದ ಪೂರಿ ತುಂಬಿಸಲಾಗುತ್ತದೆ, ಆದರೆ ಸಿಹಿ ಮತ್ತು ಮಸಾಲೆಯುಕ್ತ ಚಟ್ನಿಗಳನ್ನು ಸೇರಿಸುವುದರಿಂದ ಅದು ಸಮೃದ್ಧವಾಗುತ್ತದೆ. ಸೂಜಿಯಿಂದ ಮಾಡಿದ ಪೂರಿಗಳು ಸ್ವಲ್ಪ ಹಗುರವಾಗಿರುತ್ತವೆ ಮತ್ತು ಕ್ರಂಚಿಯರ್ ಆಗಿರುತ್ತವೆ. ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.