
ಸಲ್ಮಾನ್ ಖಾನ್ ಅವರ ತಂದೆ, ಹಿರಿಯ ಚಿತ್ರಕಥೆಗಾರ ಸಲೀಮ್ ಖಾನ್ ಅವರ ಸಂದರ್ಶನದಲ್ಲಿ, "ರಾಧೆ" ಗ್ರೇಟ್ ಸಿನಿಮಾ ಏನಲ್ಲ, ಆದರೆ ಕಮರ್ಷಿಯಲ್ ಸಿನೆಮಾದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಹೂಡಿದ ಹಣವನ್ನು ಪಡೆಯಬೇಕು ಎಂಬ ಅಗತ್ಯ ಇದೆ ಎಂದು ಹೇಳಿದ್ದಾರೆ.
ಕಲಾವಿದರಿಂದ ಹಿಡಿದು ನಿರ್ಮಾಪಕರು, ವಿತರಕರು, ಪ್ರದರ್ಶಕರು ಪ್ರತಿಯೊಬ್ಬ ಪಾಲುದಾರರಿಗೆ ಹಣ ಸಿಗಬೇಕು. ಈ ಆಧಾರದ ಮೇಲೆ ಸಲ್ಮಾನ್ ಪ್ರದರ್ಶನ ನೀಡಿದ್ದಾರೆ. ಈ ಚಿತ್ರದ ಮಧ್ಯಸ್ಥಗಾರರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದ್ದಾರೆ.
ರಾಧೆಗೆ ಪೈರಸಿ ಕಾಟ: ಸಿನಿಮಾ ಕದ್ದು ಲಿಂಕ್ ಫಾರ್ವರ್ಡ್ ಮಾಡಿದ್ರೆ ವಾಟ್ಸಾಪ್ ಬ್ಲಾಕ್...
ರಾಧೆ ಸಿನಿಮಾ ರಿಲೀಸ್‌ಗೂ ಮುಂಚೆಯೇ ಸಿಕ್ಕಾಪಟ್ಟೆ ವಿರೋಧ ಎದುರಿಸಿತ್ತು. ಹಾಡು ಫೇಮಸ್ ಆದರೂ ಸುಶಾಂತ್ ಅಭಿಮಾನಿಗಳು ಸಿನಿಮಾವನ್ನು ವಿರೋಧಿಸಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದರು.
ಇಷ್ಟೂ ಸಾಲದು ಎಂಬಂತೆ ಬಹುತೇಕ ಟಾಪ್ ಸಿನಿಮಾಗಳಂತೆ ರಾಧೆಗೂ ಪೈರಸಿ ಕಾಟ ತಪ್ಪಿಲ್ಲ. ಈ ಬಗ್ಗೆ ಸಲ್ಮಾನ್ ಖಾನ್ ಎಚ್ಚರಿಸಿ ಕೋರ್ಟ್ ಮೆಟ್ಟಿಲೇರಿದ್ದರು. ದೆಹಲಿ ಹೈಕೋರ್ಟ್ ಈ ಬಗ್ಗೆ ಖಡಕ್ ವಾರ್ನಿಂಗ್ ನೀಡಿದ್ದು, ಪೈರಸಿ ಸಿನಿಮಾ ಫಾರ್ವರ್ಡ್ ಮಾಡುವವರ, ನೋಡುವವರ ವಾಟ್ಸಾಪ್ ಖಾತೆ ಡಿಲೀಟ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.