Neetu Shetty: 'ಮದುವೆ ವಿಡಿಯೋ' ಶೇರ್​ ಮಾಡಿ ಅಭಿಮಾನಿಗಳ ತಬ್ಬಿಬ್ಬು ಮಾಡಿದ ನಟಿ

By Suvarna News  |  First Published Apr 2, 2023, 5:31 PM IST

ಏಪ್ರಿಲ್​ 1ರಂದು ನಟಿ ನೀತು ಶೆಟ್ಟಿ ತಮ್ಮ ಮದುವೆಯ ವಿಡಿಯೋ ಎನ್ನುವ ಮೂಲಕ ಲಿಂಕ್​ ಒಂದನ್ನು ಶೇರ್​ ಮಾಡಿ ಅಭಿಮಾನಿಗಳನ್ನು ತಬ್ಬಿಬ್ಬು ಮಾಡಿದ್ದಾರೆ. 
 


ಈಗ ಸಿನಿರಂಗದಲ್ಲಿ ಮದುವೆ (Marriage) ಸುದ್ದಿಗಳದ್ದೇ ಕಾರುಬಾರು, ಅದೇ ಇನ್ನೊಂದೆಡೆ ಮದುವೆಯಾಗುತ್ತಿದ್ದಂತೆಯೇ ಮಕ್ಕಳ ಕಿಲಕಿಲವೂ ಸದ್ದು ಮಾಡುತ್ತಿದೆ. ಇದಾಗಲೇ  ರಾಹುಲ್ -ಅಥಿಯಾ, ಸಿದ್-ಕಿಯಾರಾ ಬಳಿಕ ಈಗ ಪರಿಣಿತಿಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆ ಗುಸುಗುಸು ಜೋರಾಗಿದೆ. ಅದೇ ಇನ್ನೊಂದೆಡೆ ತೆಲುಗು ನಟ ಜೋಡಿಗಳಾದ  ಧನುಷ್ ಹಾಗೂ  ಮೀನಾ ಮದುವೆಯ ಸುದ್ದಿಯೂ ಸದ್ದು ಮಾಡುತ್ತಿದೆ. ಇವೆಲ್ಲವುಗಳ ನಡುವೆಯೇ ಸ್ಯಾಂಡಲ್​ವುಡ್​ ನಟಿ ಗಾಳಿಪಟ ಖ್ಯಾತಿಯ ನೀತು ಶೆಟ್ಟಿ ನಿನ್ನೆ ‘ಮದುವೆ ವಿಡಿಯೋ’ ಹಂಚಿಕೊಂಡು ಫ್ಯಾನ್ಸ್​ಗಳನ್ನು ತಬ್ಬಿಬ್ಬುಗೊಳಿಸಿದ್ದಾರೆ. 'ಬಣ್ಣದ ಜಗತ್ತಿನಲ್ಲಿ ನಟಿಮಣಿಯರಿಗೆ ಬಾಡಿಶೇಮಿಂಗ್ ಎನ್ನುವ ದೊಡ್ಡ ಕಾಟವಿದೆ. ನೀನು ದಪ್ಪಗಿದ್ದೀಯಾ, ನಟಿಯಾಗೋಕೆ ಫಿಟ್ ಇಲ್ಲ ಎಂದು ನನಗೆ ಹೇಳಿದ್ದರು. ನಟಿಯರಿಗೆ ದೇಹದ ಬಗ್ಗೆ ಕಿರಿಕಿರಿಯಾಗುವ ಕಮೆಂಟ್‌ ಬರುತ್ತಲೇ ಇರುತ್ತದೆ' ಎನ್ನುತ್ತಾ ತಮಗಾದ ಬಾಡಿ ಶೇಮಿಂಗ್ ಬಗ್ಗೆ ಕೆಲ ತಿಂಗಳ ಹಿಂದೆ ಹಂಚಿಕೊಂಡು ಸುದ್ದಿಯಾಗಿದ್ದ ನಟಿ ನೀತು ಶೆಟ್ಟಿ ಈಗ ಮದುವೆಯ ವಿಡಿಯೋದಿಂದ ಜಾಲತಾಣದಲ್ಲಿ (Social Media) ಸುದ್ದಿಯಾಗುತ್ತಿದ್ದಾರೆ.   
 
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ನೀತು ಶೆಟ್ಟಿ (Neetu Shetty) ನಿನ್ನೆ ಅಂದರೆ ಏಪ್ರಿಲ್ 1 ರಂದು ಫೇಸ್​ಬುಕ್​ನಲ್ಲಿ ತಮ್ಮ ಮದುವೆಯ ವಿಡಿಯೋ ಎನ್ನುವ ಒಕ್ಕಣಿಗೆ ಕೊಟ್ಟು ಒಂದು ಲಿಂಕ್​ ಶೇರ್​ ಮಾಡಿದ್ದಾರೆ. ಇದನ್ನು ನೋಡಿದ ಈಕೆಯ  ಫೇಸ್‌ಬುಕ್‌ ಫಾಲೋವರ್ಸ್‌ ತಬ್ಬಿಬ್ಬಾಗಿದ್ದಾರೆ. ಇತ್ತೀಚೆಗಷ್ಟೇ ನಟಿ ಸ್ವರಾ ಭಾಸ್ಕರ್​ ಹೀಗೆ ಸರ್​ಪ್ರೈಸ್​ ಕೊಟ್ಟಿದ್ದನ್ನು ನೆನಪಿಸಿಕೊಂಡಿರುವ ನೆಟ್ಟಿಗರು, ಈ ಸಾಲಿಗೆ ನಟಿ ನೀತು ಕೂಡ ಸೇರಿಕೊಂಡು ಬಿಟ್ರಾ ಎಂದೆಲ್ಲಾ ಈ ಮೆಸೇಜ್​ ನೋಡಿ ಅಂದುಕೊಂಡಿದ್ದಾರೆ. ಸಾಲದು ಎಂಬುದಕ್ಕೆ ನಟಿ ನೀತು, ‘ನನ್ನ ಮದುವೆಯ ವಿಡಿಯೋ ನಿಮ್ಮೆಲ್ಲರಿಗಾಗಿ.. ಹರಿಸಿ’ ಎಂದು ಬರೆದುಕೊಂಡು ವಿಡಿಯೋ ಲಿಂಕ್​ ಒಂದನ್ನು ಶೇರ್​ ಮಾಡಿದ್ದರು.

ಕ್ರಿಕೆಟಿಗ ಶಿಖರ್​ ಧವನ್​ ಸಂಸಾರದಲ್ಲಿ Red Falg! ಸಂಬಂಧ ಉಳಿಸಿಕೊಳ್ಳುವಲ್ಲಿ ಫೇಲ್ ಆಗಿದ್ದೆಲ್ಲಿ?

Tap to resize

Latest Videos

ದಿಢೀರನೆ ಮದುವೆ ಸುದ್ದಿ ತಿಳಿಸಿ ಶಾಕ್ ಕೊಟ್ಟುಬಿಟ್ಟರಲ್ಲ ಎಂದು ಆಕೆ ಕೊಟ್ಟ ಯೂಟ್ಯೂಬ್​ ಲಿಂಕ್ ಓಪನ್ ಮಾಡಿದವರು ನಿಜಕ್ಕೂ ಫೂಲ್ ಆಗಿ, ಮತ್ತೊಮ್ಮೆ ಶಾಕ್​ ಆಗಿದ್ದಾರೆ. ಏಪ್ರಿಲ್​ ಒಂದರಂದು ನಟಿ ಅಭಿಮಾನಿಗಳಿಗೆ ಹೀಗೆ ಶಾಕ್​ ಕೊಟ್ಟಿದ್ದಾರೆ.  ಅಷ್ಟಕ್ಕೂ ಆ ಯೂಟ್ಯೂಬ್ ಲಿಂಕ್‌ನಲ್ಲಿರುವುದು ‘ಏಪ್ರಿಲ್ ಫೂಲ್​ (April fool) ಬನಾಯಾ’ ಹಾಡು. 1964ರಲ್ಲಿ ಬಿಡುಗಡೆಯಾದ ಏಪ್ರಿಲ್​ ಫೂಲ್​ ಬಾಲಿವುಡ್​ ಚಿತ್ರದಲ್ಲಿ ಮೊಹಮ್ಮದ್​ ರಫಿ ಅವರು ಹಾಡಿದ ‘ಏಪ್ರಿಲ್ ಫೂಲ್​ ಬನಾಯಾ’ ಹಾಡಿನ ಲಿಂಕ್​ ಅವರು ಶೇರ್​ ಮಾಡಿದ್ದು, ಫ್ಯಾನ್ಸ್​ ಕಣ್​ ಕಣ್​ ಬಿಟ್ಟಿದ್ದಾರೆ. ನಟ ಅಕ್ಷಯ್​ ಕುಮಾರ್​ ಕೂಡ ಇದೇ ಯೂಟ್ಯೂಬ್​ ಲಿಂಕ್​ ಶೇರ್​ ಮಾಡಿ ಏಪ್ರಿಲ್​ ಒಂದರನ್ನು ಅಭಿಮಾನಿಗಳನ್ನು ಫೂಲ್​  ಮಾಡಿದ್ದರು. ಅದೇ ರೀತಿ ನೀತು ಶೆಟ್ಟಿ ಕೂಡ ಮಾಡಿದ್ದಾರೆ. 

ಈಗ ನೀತು ಶೆಟ್ಟಿ ಅವರನ್ನು ಕೆಲವು ಫ್ಯಾನ್ಸ್​ ಕಾಲೆಳೆದಿದ್ದಾರೆ. ಇನ್ನು ಕೆಲವರು ಮದುವೆಯಾದವರು ಫೂಲ್​ಗಳೇ ಬಿಡಿ ಎಂದು ಕಮೆಂಟ್​ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವರು, ಮದುವೆಯಾದವರು ಏಪ್ರಿಲ್​  ಮಾತ್ರವಲ್ಲ... ಜನವರಿ ಟು ಡಿಸೆಂಬರ್​ ಮೂರ್ಖರೇ ಎಂದಿದ್ದಾರೆ. ಇನ್ನು ಹಲವರಂತೂ ಏನ್​ ಮೇಡಂ ಇಷ್ಟು ಗಾಬರಿ ಪಡಿಸಿಬಿಟ್ರಿ. ನಿಜಕ್ಕೂ ನಿಮ್ಮಮದುವೆ ಅಂದುಕೊಂಡ್ವಿ ಅಂದಿದ್ದಾರೆ. ಇನ್ನು ಕೆಲವರು ತಮ್ಮನ್ನು ಮದುವೆಗೆ ಕರೆದಿರುವುದಕ್ಕೆ ಥ್ಯಾಂಕ್ಸ್​ ಅಂದಿದ್ದಾರೆ. ಹ್ಯಾಪ್ಪಿ ಮ್ಯಾರೀಡ್​ ಲೈಫ್​ ಎಂದೂ ಬರೆದವರು ಇದ್ದಾರೆ.  

Siddharth Anand: ಬೇಷರಂ ರಂಗ್​ಗೆ ಕೇಸರಿ ಬಿಕಿನಿ ಆಯ್ಕೆ ಮಾಡಿದ್ದೇಕೆ? ಕೊನೆಗೂ ಮೌನ ಮುರಿದ ನಿರ್ದೇಶಕ

ಅಂದಹಾಗೆ 1988ರಲ್ಲಿ ಹುಟ್ಟಿರುವ ನಟಿ ನೀತು ಶೆಟ್ಟಿ ಅವರಿಗೆ, ಈಗ 34 ವರ್ಷ ವಯಸ್ಸು. ಕನ್ನಡ ಸಿನಿ ರಸಿಕರ ಮನಸ್ಸಿನಲ್ಲಿ ತನ್ನ ವಿಭಿನ್ನ ಪಾತ್ರಗಳ ಮೂಲಕ ಶಾಶ್ವತವಾಗಿ ನೆಲೆಸಿರುವ ನಟಿ ನೀತು, ಕನ್ನಡ ಹೊರತುಪಡಿಸಿದರೆ ಈಕೆ  ತುಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಮಿಂಚಿದ್ದಾರೆ.  2006ರಲ್ಲಿ ಬಿಡುಗಡೆಗೊಂಡಿದ್ದ ಫೋಟೊಗ್ರಫರ್ ಎಂಬ ಮಲಯಾಳಂ ಚಿತ್ರದಲ್ಲಿ ನಟಿ ನೀತು ಮೋಹನ್ ಲಾಲ್ ಎದುರು ನಾಯಕಿಯಾಗಿ ನಟಿಸಿದ್ದರು. ಹೀಗೆ ದೊಡ್ಡ ಸ್ಟಾರ್ ನಟರ ಚಿತ್ರ ಹಾಗೂ ಕನ್ನಡದ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ನಟಿ ನೀತುಗೆ ಫೇಮ್ ತಂದುಕೊಟ್ಟದ್ದು ಯೋಗರಾಜ್ ಭಟ್ ನಿರ್ದೇಶನದ ಎವರ್‌ಗ್ರೀನ್ ಚಿತ್ರ ಗಾಳಿಪಟ (Galipata). ಇದಲ್ಲದೇ, ‘ಜೋಕ್ ಫಾಲ್ಸ್’, ‘ಬೇರು’, ‘ಫೋಟೋಗ್ರಾಫರ್’, ‘ಕೋಟಿ ಚೆನ್ನಯ್ಯ’, ‘ಗಾಳಿಪಟ’, ‘ಕೃಷ್ಣ ನೀ ಲೇಟ್ ಆಗಿ ಬಾರೋ’ ಮುಂತಾದ ಸಿನಿಮಾಗಳಲ್ಲಿ  ಅಭಿನಯಿಸಿದ್ದಾರೆ. ರಮೇಶ್ ಅರವಿಂದ್, ವಿ.ರವಿಚಂದ್ರನ್, ಮೋಹನ್ ಲಾಲ್, ಕಿಶೋರ್, ಗಣೇಶ್, ಜಗ್ಗೇಶ್, ದೊಡ್ಡಣ್ಣ, ಅನಂತ್ ನಾಗ್, ದಿಗಂತ್ ಜೊತೆಗೆ ನಟಿ ನೀತು ಶೆಟ್ಟಿ ತೆರೆಹಂಚಿಕೊಂಡಿದ್ದಾರೆ.


click me!