ನಟ ಅಜಯ್ ದೇವಗನ್ ಅವರು ತಿರಸ್ಕರಿಸಿದ ಹಲವು ಚಿತ್ರಗಳು ಬ್ಲಾಕ್ಬಸ್ಟರ್ ಆಗಿದ್ದು, ಹಲವಾರು ಮಂದಿ ನಟರಿಗೆ ಬ್ರೇಕ್ ಸಿಕ್ಕಿದೆ. ಇಂದು ಅವರ ಹುಟ್ಟುಹಬ್ಬದ ನಿಮಿತ್ತ ಈ ಸ್ಟೋರಿ.
ಇಂದು ನಟ ಅಜಯ್ ದೇವಗನ್ ಅವರ 54ನೇ ಹುಟ್ಟುಹಬ್ಬ. ಅಜಯ್ ದೇವಗನ್ (Ajay Devagan) ಬಾಲಿವುಡ್ ಗೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಚಿತ್ರಗಳನ್ನು ತಿರಸ್ಕರಿಸಿದ್ದಾರೆ ಕೂಡ. ಇವರು ತಿರಸ್ಕರಿಸಿದ ಕಾರಣದಿಂದಲೇ ಎಷ್ಟೋ ನಟರು ಇಂದು ಸೂಪರ್ಸ್ಟಾರ್ ಆಗಿದ್ದಾರೆ, ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಹೌದು. ಇದನ್ನು ಕೇಳಲು ವಿಚಿತ್ರ ಎನಿಸಬಹುದು. ಆದರೆ ಇದು ಸತ್ಯ. ಅಜಯ್ ದೇವಗನ್ ಅವರ ಚಿತ್ರ ದೃಶ್ಯಂ 2 ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆ ಮಾಡಿದೆ. ಅಜಯ್ ದೇವಗನ್ ಅವರ ಈ ಚಿತ್ರ 2022 ರಲ್ಲಿ ಬಿಡುಗಡೆಯಾಗಿತ್ತು. ಇಷ್ಟೇ ಅಲ್ಲದೇ ಅಜಯ್ ಅವರು ನಟಿಸಿರುವ ಕೆಲವು ಚಿತ್ರಗಳು ಸೂಪರ್ಹಿಟ್ ಆಗಿವೆ ಎನ್ನುವುದೂ ನಿಜವೇ. ಇದರ ಹೊರತಾಗಿಯೂ ನೋಡುವುದಾದರೆ, ಅಜಯ್ ದೇವಗನ್ ಅವರ ಈ ಚಿತ್ರಗಳಿಂದ ಶಾರುಖ್ ಖಾನ್ ಸೂಪರ್ ಸ್ಟಾರ್ ಆದರು. ಇವರು ತಿರಸ್ಕರಿಸಿದ ಚಿತ್ರಗಳ ಪಟ್ಟಿಯಲ್ಲಿ 'ಕುಚ್ ಕುಚ್ ಹೋತಾ ಹೈ' ನಿಂದ 'ಕರಣ್ ಅರ್ಜುನ್' ವರೆಗಿನ ಹೆಸರುಗಳಿವೆ. ಹಾಗಾದರೆ ಅಜಯ್ ದೇವಗನ್ ಅವರ ತಿರಸ್ಕರಿಸಿದ ಚಿತ್ರಗಳ ಪಟ್ಟಿಯನ್ನು ನೋಡೋಣ.
ಕರಣ್ ಅರ್ಜುನ್ (Karan Arjun), ಕುಚ್ ಕುಚ್ ಹೋತಾ ಹೈ: ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಿಗೆ ಹೊಸ ಐಡೆಂಟಿಟಿ ನೀಡಿದ ಕರಣ್ ಅರ್ಜುನ್ ಚಿತ್ರ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಅವರನ್ನು ನಟಿಸಲು ತಯಾರಕರು ಬಯಸಿದ್ದರು. ಕ್ರಿಯೇಟಿವ್ ಸಮಸ್ಯೆಯಿಂದಾಗಿ ಅಜಯ್ ಈ ಚಿತ್ರವನ್ನು ತಿರಸ್ಕರಿಸಿದ್ದಾರೆ. ಇನ್ನು ಕುಚ್ ಕುಚ್ ಹೋತಾ ಹೈ (Kuch Kuch Hota Hai). ಶಾರುಖ್ ಖಾನ್ ಅಭಿನಯದ ಈ ಚಿತ್ರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಶಾರುಖ್ ಖಾನ್ ಪಾತ್ರವನ್ನು ಅಜಯ್ ದೇವಗನ್ ಅವರಿಗೆ ನೀಡಲಾಯಿತು. ಆದರೆ ಅವರು ಈ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಿದರು.
Siddharth Anand: ಬೇಷರಂ ರಂಗ್ಗೆ ಕೇಸರಿ ಬಿಕಿನಿ ಆಯ್ಕೆ ಮಾಡಿದ್ದೇಕೆ? ಕೊನೆಗೂ ಮೌನ ಮುರಿದ ನಿರ್ದೇಶಕ
ಪದ್ಮಾವತ್ (Padmaavat), ಡರ್: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ವರದಿಗಳ ಪ್ರಕಾರ, ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರಕ್ಕಾಗಿ ಅಜಯ್ ದೇವಗನ್ ಅವರೊಂದಿಗೆ ಮಾತನಾಡಿದ್ದರು. ಆದರೆ ಅಜಯ್ ದೇವಗನ್ ಈ ಚಿತ್ರದ ಭಾಗವಾಗಲು ನಿರಾಕರಿಸಿದರು. ಇನ್ನು ಡರ್ (Darr) ಚಿತ್ರ. ಈ ಚಿತ್ರದಲ್ಲಿ ಅಜಯ್ ದೇವಗನ್‌ಗೆ ವಿಲನ್ ಪಾತ್ರವನ್ನು ಆಫರ್ ಮಾಡಲಾಗಿತ್ತು. ಆದರೆ ಅವರು ಈ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಾರೆ.
ಬಾಜಿರಾವ್ ಮಸ್ತಾನಿ (Bajirao Mastani): ಅಜಯ್ ದೇವಗನ್ ಅವರ ತಿರಸ್ಕರಿಸಿದ ಚಿತ್ರಗಳ ಪಟ್ಟಿಯಲ್ಲಿ 'ಬಾಜಿರಾವ್ ಮಸ್ತಾನಿ' ಹೆಸರೂ ಸೇರಿದೆ. ಸಂದರ್ಶನವೊಂದರಲ್ಲಿ ಈ ಚಿತ್ರವನ್ನು ತಿರಸ್ಕರಿಸಿರುವ ಬಗ್ಗೆ ಅಜಯ್ ಬಹಿರಂಗಪಡಿಸಿದ್ದರು.
Adnan Sami: ವೈದ್ಯರು ಸಾವಿನ ಡೇಟ್ ಫಿಕ್ಸ್ ಮಾಡಿದ್ದರು! ಆ ದಿನ ನೆನೆದ ಗಾಯಕ
ಇನ್ನು ಅಜಯ್ ದೇವಗನ್ (Ajay Devagan) ನಟಿಸಿರುವ ಭೋಲಾ (Bholaa) ಹಿಂದಿ ಸಿನಿಮಾ ಮೊನ್ನೆ ಅಂದರೆ ಮಾರ್ಚ್ 30ರಂದು ಬಿಡುಗಡೆ ಆಗಿದೆ. ರೀಮೇಕ್ ಕಿಂಗ್ (Remake King) ಎಂದೇ ಕರೆಯಲಾಗುವ ಅಜಯ್ ದೇವಗನ್ರ ಈ ಭೋಲಾ ಸಿನಿಮಾವು ತಮಿಳಿನ ಕೈದಿ ಸಿನಿಮಾದ ರೀಮೇಕ್ ಆಗಿದೆ. ಸಿನಿಮಾವನ್ನು ಸ್ವತಃ ಅಜಯ್ ದೇವಗನ್ ನಿರ್ದೇಶನ ಮಾಡಿದ್ದಾರೆ. ರೀಮೇಕ್ ಸಿನಿಮಾ ಆಗಿದ್ದರೂ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ಎಮೋಷನ್ ಇದೆ. ವಿಶಲ್ ಹೊಡೆಸಿಕೊಳ್ಳುವ ದೃಶ್ಯಗಳಿವೆ. ಅದ್ಭುತ ಡೈಲಾಗ್ಸ್ಗಳಿವೆ. ಅತ್ಯದ್ಭುತವಾದ ಆಕ್ಷನ್ ದೃಶ್ಯಗಳಿವೆ. 3ಡಿ ಅನುಭವವಂತೂ ಅದ್ಭುತವಾಗಿದೆ ಎನ್ನುತ್ತಿದ್ದಾರೆ ಫ್ಯಾನ್ಸ್