ಬ್ಯಾಕ್ ಟು ಬ್ಯಾಕ್ ಸೋಲಿನ ಬಳಿಕ ಸ್ಟಾರ್ ನಾಯಕಿ ಜೊತೆ ನಾಗ ಚೈತನ್ಯ ರೊಮ್ಯಾನ್ಸ್

By Shruthi KrishnaFirst Published Jun 23, 2023, 2:39 PM IST
Highlights

ಬ್ಯಾಕ್ ಟು ಬ್ಯಾಕ್ ಸೋಲಿನ ಬಳಿಕ ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಟಾಲಿವುಡ್ ಖ್ಯಾತ ನಟ,  ನಟಿ ಸಮಂತಾ ಅವರ ಮಾಜಿ ಪತಿ ನಾಗ ಚೈತನ್ಯ ಸರಣಿ ಸೋಸಲಿನ ಸುಳಿಯಲ್ಲಿದ್ದಾರೆ. ನಾಗ್ ಚೈತನ್ಯ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಂಡಿವೆ. ಲವ್ ಸ್ಟೋರಿ ಬಳಿಕ ಚೈ ನಟನೆಯ ಯಾವ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಇತ್ತೀಚೆಗಷ್ಟೆ ತೆರೆಗೆ ಬಂದ ಕಸ್ಟಡಿ ಸಿನಿಮಾ ಕೂಡ ಹೀನಾಯ ಸೋಲು ಕಂಡಿದೆ. ಇದೀಗ ನಾಗ ಚೈತನ್ಯ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದು ಸ್ಟಾರ್ ನಾಯಕಿ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ವೈರಲ್ ಆಗಿದೆ. ಹೌದು,  ನಾಗ ಚೈತನ್ಯ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

ಪ್ರೇಮಂ ಖ್ಯಾತಿಯ ನಿರ್ದೇಶಕ ಚಂದೂ ಮೊಂಡೆಟಿ ಅವರ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಲಿದ್ದಾರೆ ಎನ್ನಲಾಗಿದೆ. ಪ್ರೇಮಂ ಸಿನಿಮಾದಲ್ಲಿ ನಾಗ್ ಮತ್ತು ಚಂದೂ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಪ್ರೇಮಂ ಮಲಯಾಳಂನ ಸೂಪರ್ ಹಿಟ್ ಪ್ರೇಮಂ ಸಿನಿಮಾದ ರಿಮೇಕ್ ಆಗಿದೆ. ತೆಲುಗಿನಲ್ಲೂ ಪ್ರೇಮಂ ಉತ್ತಮ ಗಳಿಕೆ ಮಾಡಿತ್ತು. ಇದೀಗ ಹೊಸ ಸಿನಿಮಾಗೆ ಇಬ್ಬರೂ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. 

ಅಂದಹಾಗೆ ಇನ್ನೂ ಹೆಸರಿಡದ ಚಿತ್ರಕ್ಕೆ ನಾಯಕಿ ಫಿಕ್ಸ್ ಎನ್ನುವ ಸುದ್ದಿ ವೈರಲ್ ಆಗಿದೆ. ಅದು ಮತ್ಯಾರು ಅಲ್ಲ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್. ಹೌದು ಕೀರ್ತಿ ಸುರೇಶ್ ಜೊತೆ ನಾಗ ಚೈತನ್ಯ ನಟಿಸುತಿದ್ದಾರೆ ಎನ್ನುವ ಸುದ್ದಿ ಗುಲ್ಲಾಗಿದೆ. ನಾಗ ಚೈತನ್ಯ ಮುಂದಿನ ಸಿನಿಮಾಗೆ ಕೀರ್ತಿ ನಾಯಕಿಯಾಗಿ ಫಿಕ್ಸ್ ಆಗಿದ್ದಾರಂತೆ. ಕೀರ್ತಿ ಮತ್ತು ನಾಗ ಚೈತನ್ಯ ಫ್ರೆಶ್ ಪೇರ್. ಇಬ್ಬರನ್ನೂ ಒಟ್ಟಿಗೆ ತೆರೆಮೇಲೆ ತರುವ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಚಂದೂ. ಎಲ್ಲವೂ ಅಂದುಕೊಂಡಂತೆ ಆದರೆ ನಾಗ್ ಮತ್ತು ಕೀರ್ತಿ ಇಬ್ಬರೂ ಒಟ್ಟಿಗೆ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಬಿಳಿ ಸೀರೆಯಲ್ಲಿ ಮಿಂಚಿದ ಶೋಭಿತಾ

ಹೊಸ ಸಿನಿಮಾ ಆಗಸ್ಟ್‌ನಲ್ಲಿ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ. ಈಗಾಗಲೇ ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ನಾಗ್ ಚೈತನ್ಯ ಅವರಿಗೆ ಈ ಸಿನಿಮಾವಾದ್ರು ಕೈ ಹಿಡಿಯುತ್ತಾ, ಸಕ್ಸಸ್ ಕಾಣುತ್ತಾರಾ ಎಂದು ಕಾದುನೋಡಬೇಕಿದೆ. ಇನ್ನೂ ನಟಿ ಕೀರ್ತಿ ಸುರೇಶ್ ಸಿನಿಮಾಗಳು ಇತ್ತೀಚಿಗೆ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಹಾಗಾಗಿ ಈ ಸಿನಿಮಾ ಕೀರ್ತಿಗೂ ಸಕ್ಸಸ್ ತಂದುಕೊಡುತ್ತಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋತ 'ಕಸ್ಟಡಿ'; ಮತ್ತೆ ಕಿತ್ತಾಟ ಆರಂಭಿಸಿದ ಸಮಂತಾ-ನಾಗ ಚೈತನ್ಯ ಫ್ಯಾನ್ಸ್

ನಾಗ ಚೈತನ್ಯ ನಟನೆಯ ಲವ್ ಸ್ಟೋರಿ ಸಿನಿಮಾ ಸಕ್ಸಸ್ ಕಂಡಿತ್ತು. ಸಾಯಿ ಪಲ್ಲವಿ ಜೊತೆ ನಾಗ ಚೈತನ್ಯ ನಟಿಸಿದ್ದರು. ಬಳಿಕ ಬಂದ ಬಂಗರಾಜು, ಥ್ಯಾಂಕ್ಯೂ, ಹಿಂದಿಯ ಲಾಲ್ ಸಿಂಗ್ ಚಡ್ಡಾ ಮತ್ತ ಇತ್ತೀಚೆಗೆ ಬಂದ ಕಸ್ಟಡಿ ಸಿನಿಮಾಗಳು ನೆಲಕಚ್ಚಿವೆ. ಇದೀಗ ದೊಡ್ಡ ಸಕ್ಸಸ್‌ನ ನಿರೀಕ್ಷೆಯಲ್ಲಿರುವ ಚೈ ಮುಂದಿನ ಸಿನಿಮಾ ಮೂಲಕ ಗೆಲುವಿನ ಟ್ರ್ಯಾಕ್‌ಗೆ ಮರಳುತ್ತಾರಾ ಎಂದು ಕಾದು ನೋಡಬೇಕಿದೆ.  

click me!