ಟೈಟಾನಿಕ್ ಅವಶೇಷ ನೋಡಲು ಹೋದವರ ದಾರುಣ ಅಂತ್ಯ: 'ಟೈಟಾನಿಕ್' ವಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಹೇಳಿದ್ದೇನು?

By Shruthi KrishnaFirst Published Jun 23, 2023, 3:44 PM IST
Highlights

ಟೈಟಾನಿಕ್ ಅವಶೇಷ ನೋಡಲು ಹೋದವರ ದಾರುಣ ಅಂತ್ಯದ ಬಗ್ಗೆ ಬ್ಲಾಕ್‌ಬಸ್ಟರ್ ಹಿಟ್ 'ಟೈಟಾನಿಕ್' ವಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಪ್ರತಿಕ್ರಿಯೆ ನೀಡಿದ್ದಾರೆ. 

ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಲುಗಿದ್ದ ಟೈಟಾನಿಕ್ ಅವಶೇಷಗಳನ್ನು ನೋಡಲು ಹೋಗಿದ್ದ 5 ಜನ ಪ್ರವಾಸಿಗರು ದಾರುಣಅಂತ್ಯ ಕಂಡಿದ್ದಾರೆ. ಈ ಬಗ್ಗೆ ಅಮೆರಿಕಾ ಕೋಸ್ಟ್ ಗಾರ್ಡ್ ಖಚಿತ ಪಡಿಸಿದೆ. ವಿಶ್ವದ ಶ್ರೀಮಂತ ಕರೆದೊಯ್ಯುತ್ತಿದ್ದ ಸಬ್‌ಮರ್ಸಿಬಲ್ ಸಾಗರದ ಒಳಗೆ ಟೈಟಾನಿಕ್ ಅವಶೇಷಗಳ ಬಳಿ ಸ್ಪೋಟಗೊಂಡಿದೆ. ಘಟನೆ ಈಗ ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆಳ ಸಾಗರಕ್ಕೆ ಹೋಗುವಾಗ ಸುರಕ್ಷತೆ ಇಲ್ಲದೆ ಹೇಗೆ ಹೋದರು ಎನ್ನುವ  ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಈಗ ಬ್ಲಕ್‌ಬಸ್ಟರ್ ಟೈಟಾನಿಕ್ ಸಿನಿಮಾದ ನಿರ್ದೇಶಕ ಜೇಮ್ಸ್  ಕ್ಯಾಮೆರಾನ್ ಪ್ರತಿಕ್ರಿಯೆ ನೀಡಿದ್ದಾರೆ. ಟೈಟಾನಿಕ್ ಸಿನಿಮಾದಲ್ಲಿ ಟೈಟಾನಿಕ್ ದುರಂತದ ಬಗ್ಗೆ ತೋರಿಸಲಾಗಿತ್ತು. ಇದೀಗ ಪ್ರತಿಕ್ರಿಯೆ ನೀಡಿ ಸಂವಹನ ಮತ್ತು ನ್ಯಾವಿಗೇಷನ್ ಒಂದೇ ಸಮಯದಲ್ಲಿ ಕೈಕೊಟ್ಟಿದೆ ಕ್ಷಣಕ್ಕೆ ಏನೋ ಮಿಸ್ ಆಗಿದೆ ಎಂದು ಹೇಳಿದ್ದಾರೆ. 

68 ವರ್ಷದ ಖ್ಯಾತ ನಿರ್ದೇಶಕ ಕ್ಯಾಮರಾನ್ ಟೈಟಾನಿಕ್ ಸಿನಿಮಾಗಾಗಿ ಆ ಸಾಗರದ ಆಳವನ್ನು ವ್ಯಾಪಕವಾಗಿ ಪರಿಶೋಧಿಸಿದ್ದಾರೆ. ' 3500 ಮೀಟರ್‌ಗಳಲ್ಲಿ 3,800 ಮೀಟರ್‌ಗಳ ಕೆಳಗೆ ಹೋಗುತ್ತಿದ್ದರು. ಸಂವನ ಮತ್ತು ನ್ಯಾವಿಗೇಷನ್ ಸಂಪರ್ಕ ಕಡಿತಗೊಂಡಿದೆ. ತೀವ್ರ ದುರಂತ ನಡೆಯದೆ ಸಂವಹನ ಮತ್ತು ನ್ಯಾವಿಗೇಷನ್ ಎರಡೂ ಒಟ್ಟಿಗೆ ಕಡಿತಗೊಳ್ಳುವುದಿಲ್ಲ. ದೊಡ್ಡ ದುರಂತ ನಡೆದಿದೆ ಎನ್ನುವುದು ಗೊತ್ತಾಗುತ್ತಿದೆ. ನೋಡಿದ್ರೆ ಸ್ಫೋಟ ಆಗಿದೆ ಅಂತ ಗೊತ್ತಾಗುತ್ತಿದೆ. ಇದು ನನ್ನ ಅಭಿಪ್ರಾಯ' ಎಂದು ಹೇಳಿದ್ದಾರೆ.  

Latest Videos

'ಟೈಟಾನಿಕ್ ದುರಂತದ ಹಾಗೆ ಮತ್ತೊಂದು ಅವಘಡದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಅಲ್ಲಿ ಕ್ಯಾಪ್ಟನ್ ತನ್ನ ಹಡಗಿನ ಮುಂದೆ ಮಂಜುಗಡ್ಡೆಯ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು ಆದರೂ ಅತೀ ವೇಗದಲ್ಲಿ ಐಸ್ ಫೀಲ್ಡ್ಗೆ ಆವಿಯಲ್ಲಿ ಹೋದರು' ಎಂದು ಜೇಮ್ಸ್ ಕ್ಯಾಮರಾನ್ CNN ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಸಮುದ್ರದಾಳದಿಂದ ಕೇಳಿಬಂದ ಸದ್ದು: ಟೈಟಾನಿಕ್ ಅವಶೇಷ ನೋಡಲು ಹೊರಟವರು ಜೀವಂತ ?

ನೀವು ದುರಂತ ನಡೆದ ಸ್ಥಳಕ್ಕೆ ಹೋಗಿ ಫೀಲ್ ಮಾಡಲು ಇಷ್ಟ ಪಡುತ್ತೀರಾ. ಅದು ನಿಮ್ಮನ್ನು ಸೆಳೆಯುತ್ತೆ. ಅದನ್ನು ಜನರು ಅನುಭವಿಸಲು  ಬಯಸುತ್ತಾರೆ. ಅದು ಇತಿಹಾಸವನ್ನು ಮತ್ತೆ ನೆನಪಿಸುತ್ತೆ' ಎಂದು ಹೇಳಿದರು. ಓಷನ್‌ಗೇಟ್ ಸಬ್‌ಮರ್ಸಿಬಲ್‌ಗೆ ಸಂಬಂಧಿಸಿದಂತೆ ಮಾತನಾಡಿ ಆಳವಾದ ಮುಳುಗುವಿಕೆ ಎಂಜಿನಿಯರಿಂಗ್ ಸಮುದಾಯದಲ್ಲಿ ಎದ್ದಿರುವ ಕಳವಳಗಳ ಬಗ್ಗೆ ಕ್ಯಾಮೆರಾನ್ ಬೆಳಕು ಚೆಲ್ಲಿದರು.

James Cameron believes OceanGate Titan imploded before reaching Titanic. 📷 pic.twitter.com/wGtWvXR0V7

— Ak Cheema (@AkCheema777)

ಟೈಟಾನಿಕ್ ಅವಶೇಷ ನೋಡ ಹೊರಟ ಸಬ್‌​ಮ​ರೀ​ನ್‌ ಅವ​ಶೇಷ ಪತ್ತೆ: ​ಪ್ರವಾ​ಸಿ​ಗರು ಜಲ​ಸ​ಮಾ​ಧಿ?

'ಇದು ಭಯಾನಕ ಕಲ್ಪನೆ ಎಂದು ನಾನು ಭಾವಿಸಿದೆ. ನನಗಿಂತ ಯಾರಾದರೂ ಬುದ್ಧಿವಂತರು ಎಂದು ನಾನು ಭಾವಿಸಿದೆ, ನಿಮಗೆ ತಿಳಿದಿದೆ, ಏಕೆಂದರೆ ನಾನು ಆ ತಂತ್ರಜ್ಞಾನವನ್ನು ಎಂದಿಗೂ ಪ್ರಯೋಗಿಸಿಲ್ಲ, ಆದರೆ ಅದು ಅದರ ಮುಖದಲ್ಲಿ ಕೆಟ್ಟದಾಗಿ ಧ್ವನಿಸುತ್ತದೆ' ಎಂದು ಹೇಳಿದರು. 

click me!