ದೀಪಿಕಾ ಪಡುಕೋಣೆಯನ್ನು ವಿಚಾರಣೆ ಮಾಡಿದ್ದ NCB ಅಧಿಕಾರಿಗೆ ಕೊರೋನಾ ಪಾಸಿಟಿವ್

Published : Oct 04, 2020, 03:24 PM ISTUpdated : Oct 04, 2020, 03:28 PM IST
ದೀಪಿಕಾ ಪಡುಕೋಣೆಯನ್ನು ವಿಚಾರಣೆ ಮಾಡಿದ್ದ NCB ಅಧಿಕಾರಿಗೆ ಕೊರೋನಾ ಪಾಸಿಟಿವ್

ಸಾರಾಂಶ

ವಾರದ ಹಿಂದೆಯಷ್ಟೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ಎನ್‌ಸಿಬಿ ಅಧಿಕಾರಿ | ಡ್ರಗ್ಸ್ ವಿಚಾರವಾಗಿ ವಿಚಾರಣೆ | ಎನ್‌ಸಿಬಿ ಅಧಿಕಾರಿಗೆ ಕೊರೋನಾ ಪಾಸಿಟಿವ್ 

ವಾರದ ಹಿಂದೆಯಷ್ಟೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ವಿಚಾರವಾಗಿ ವಿಚಾರಣೆ ಮಾಡಿದ್ರು. ಇದೀಗ ಟನಿ ದೀಪಿಕಾಳ ವಿಚಾರಣೆ ಮಾಡಿದ ಎನ್‌ಸಿಬಿ ಅಧಿಕಾರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ

ಎನ್‌ಸಿಬಿ ಉಪ ನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಡ್ರಗ್ಸ್ ವಿಚಾರವಾಗಿ ವಿಚಾರಣೆ ಮಾಡಿದ ಎನ್‌ಸಿಬಿ ದೀಪಿಕಾ ಪಡುಕೋಣೆಯನ್ನು ವಿಚಾರಣೆ ಮಾಡಿತ್ತು.

ಕೊರೋನಾ ಸಂಕಷ್ಟ: ಬಡ ಹೆಣ್ಮಕ್ಕಳ ಶಿಕ್ಷಣ ಖರ್ಚು ನೋಡ್ಕೊಳ್ತಿದ್ದಾರೆ ನಟಿ ಅಮೈರಾ

ವಾಟ್ಸಾಪ್ ಚಾಟ್‌ ಆಧಾರದಲ್ಲಿ ದೀಪಿಕಾ ಪಡುಕೋಣೆಯ ವಿಚಾರಣೆ ಮಾಡಿದ್ದು, ಕೆಪಿಎಸ್ ಮಲ್ಹೋತ್ರಾ ಅವರೇ ನಟಿಯ ವಿಚಾರಣೆ ಮಾಡಿದ್ದರು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್‌ನಲ್ಲಿ ಮುಂಬೈನ ಬಾಂದ್ರಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ನಂತರದಲ್ಲಿ ಡ್ರಗ್ಸ್ ವಿಚಾರವಾಗಿ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿದೆ. ನಂತರ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್‌ನನ್ನು ವಿಚಾರಣೆ ಮಾಡಲಾಗಿತ್ತು.

ಬಾಲಿವುಡ್‌ನಲ್ಲಿ ಡ್ರಗ್ಸ್‌ ಸಮಸ್ಯೆ ಇರೋದು ನಿಜ: ಅಕ್ಷಯ್

ವಿಚಾರಣೆ ಸಂದರ್ಭ ದೀಪಿಕಾ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದೂ ಹೇಳಿದ್ದರು. ಹಾಗೆಯೇ ಮಾಲ್ ಎಂದು ಸಿಗರೇಟ್‌ನ್ನು ಹೇಳಿದ್ದು ಎಂದು ವಾಟ್ಸಾಪ್ ಚಾಟ್ ಬಗ್ಗೆ ಸ್ಪಷ್ಟನೆ ನೀಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ವಿಲನ್ ರೋಲ್'ನ ಲೀಸ್ ತೆಗೆದುಕೊಂಡಿದ್ದಾರಾ ಯಶ್? ಈ ಪ್ರಶ್ನೆಗೆ ಮಾರ್ಮಿಕ ಉತ್ತರ ಇಲ್ಲಿದೆ ನೋಡಿ!
ಬ್ರೇಕಪ್ ಸುದ್ದಿ ಬೆನ್ನಲ್ಲೇ ಮತ್ತೆ ತ್ರಿಶಾ ಪ್ರತ್ಯಕ್ಷ! ಯಾರ ಜೊತೆ ಎಲ್ಲಿ ಬಂದು ಚಮಕ್ ಕೊಟ್ರು ನೋಡಿ!