
ಬಾಲಿವುಡ್ ಹಾಗೂ ಬೆಂಗಾಲಿ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಯುವ ನಟಿ ಮಿಷ್ಟಿ ಮುಖರ್ಜಿ ಕಿಡ್ನಿ ವೈಫಲ್ಯವಾದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಖ್ಯಾತ ನಿರ್ಮಾಪಕ ಎಸ್.ಕೆ. ಕೃಷ್ಣಕಾಂತ್ ಇನ್ನಿಲ್ಲ
27 ವರ್ಷ ಮಿಷ್ಟಿ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದರು ಹಾಗೂ ತುಂಬಾನೇ ಡಯಟ್ ಫಾಲೋ ಮಾಡುತ್ತಿದ್ದರು ಎನ್ನಲಾಗಿದೆ.
ಮಿಷ್ಟಿ ಅಂತಿಮ ಕಾರ್ಯವನ್ನು ಪೋಷಕರು ಬೆಂಗಳೂರಿನಲ್ಲಿ ನೆರವೇರಿಸಿದ್ದಾರೆ. 'ಮಿಷ್ಟಿ ಈ ಹಿಂದೆ ತುಂಬಾನೇ ಸಣ್ಣ ಆಗಿದ್ದಳು. ಕಿಟೋ ಡಯಟ್ ಎಂದು ಮಾಡುತ್ತಿದ್ದಳು. 6-7 ದಿನಗಳ ಹಿಂದೆ ತುಂಬಾನೇ ಅನಾರೋಗ್ಯಕ್ಕೀಡಾಗಿದ್ದರು. ಆದರೆ ಆಸ್ಪತ್ರೆಗೆ ಸೇರಿಸಿದ ಬಳಿಕೆ ಕಿಡ್ನಿ ಫೆಲ್ಯೂರ್ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೇ ಒಂದು ವಾರದಲ್ಲಿ ಈಗ ಆಕೆ ನಮ್ಮೊಂದಿಗೆ ಇಲ್ಲ ಎಂಬ ಸುದ್ದಿ ಬಂದೆರಗಿದೆ. ಈ ಶಾಕಿನಿಂದ ಆಕೆಯ ತಾಯಿ ಇನ್ನೂ ಹೊರಬಂದಿಲ್ಲ' ಎಂದು ಮಿಷ್ಟಿ ತಂದೆ ಮಾತನಾಡಿದ್ದಾರೆ.
ಶೂಟಿಂಗ್ ಸೆಟ್‌ನಲ್ಲಿ ಹೃದಯಾಘಾತ: ಹಿರಿಯ ನಟ ರಾಕ್‌ಲೈನ್ ಸುಧಾಕರ್ ಇನ್ನಿಲ್ಲ
ಸಿನಿಮಾಗಳಲ್ಲಿ ಮಾತ್ರವಲ್ಲದೆ ಅನೇಕ ಮ್ಯೂಸಿಕ್ ಆಲ್ಬಂಗಳಲ್ಲಿ ಮಿಷ್ಟಿ ಅಭಿನಯಿಸಿ ಖ್ಯಾತಿ ಪಡೆದುಕೊಂಡಿದ್ದಾರೆ. ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿರುವ ಮಿಷ್ಟಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
2020 ಇಡೀ ಜನರ ಜೀವನದಲ್ಲಿ ಮರೆಯಲಾಗದ ವರ್ಷವಾಗಿ ಉಳಿಯುತ್ತದೆ. ಫರಾನ್ ಖಾನ್, ರಿಷಿ ಕಪೂರ್, ಸುಶಾಂತ್ ಸಿಂಗ್, ಚಿರಂಜೀವಿ ಸರ್ಜಾ, ಮೈಕಲ್, ಸರೋಜ್ ಖಾನ್ ಸೇರಿದಂತೆ ಅನೇಕ ಕಿರಿತೆರೆ ಕಲಾವಿದರೂ ಕೂಡ ಇಹಲೋಕ ತ್ಯಜಿಸಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.