
ಕೊರೋನಾದಿಂದಾಗಿ ಬಹಳಷ್ಟು ಚಾರಿಟಿಯಲ್ಲಿ ಫಂಡ್ ಇಲ್ಲ. ಅನುದಾನ ಕೊಟ್ತಿದ್ದವರೂ ಹಿಂದೆ ಸರಿದಿದ್ದಾರೆ. ಇಂತಹ ಸಂದರ್ಭದಲ್ಲಿ ಹೆಣ್ಮಕ್ಕಳ ನೆರವಿಗೆ ಧಾವಿಸಿದ್ದಾರೆ ಸೌತ್‌ನ ಬಹುಭಾಷಾ ನಟಿ
ನಟಿ ಅಮೈರಾ ದಸ್ತರ್ ಇತ್ತೀಚೆಗಷ್ಟೇ ಮೂವರು ಹೆಣ್ಮಕ್ಕಳ ಸಂಪೂರ್ಣ ಶಿಕ್ಷಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದು ತಮ್ಮ ಜೀವನದ ಬೆಸ್ಟ್ ಡಿಸಿಷನ್ ಎಂದಿದ್ದಾರೆ ನಟಿ.
ನ್ಯಾಷನಲ್ ಅವಾರ್ಡ್ ಸಿಕ್ಕಿದ ಮೇಲೆ ಮದ್ವೆಯಾಗೋದಂತೆ ನಯನತಾರಾ..!
ಹೆಣ್ಮಕ್ಕಳಿಗೆ ಸರಿಯಾಗಿ ಕಾಲೇಜು ಶಿಕ್ಷಣ ಒದಗಿಸಲು ಕೆಲಸ ಮಾಡುವ ಚಾರಿಟಿ ಮೂಲಕ ನಾನು ಇದನ್ನು ಮಾಡಿದ್ದೇನೆ. ಭಾರತದಲ್ಲಿ ಒಬ್ಬ ಹೆಣ್ಣು ಮಗಳಾಗಿದ್ದುಕೊಂಡು ನಾವು ಪರಸ್ಪರ ಸಹಕಾರ ನೀಡಿ ನಮ್ಮನ್ನು ನಾವು ಬೆಳೆಸುವುದು ಅಗತ್ಯ ಎಂದಿದ್ದಾರೆ ನಟಿ.
ಹಣ, ಬಟ್ಟೆ ಒದಗಿಸುವುದು ಮಾತ್ರವಲ್ಲ. ನಮ್ಮ ಹಣವನ್ನು ಒಳ್ಳೆಯ ಕೆಲಸಕ್ಕಾಗಿ ವಿನಿಯೋಗಿಸಬೇಕು. ನಾನು ಕೊಟ್ಟ ಹಣದಲ್ಲಿ ಒಂದು ವರ್ಷ ಶಾಲೆಗೆ ಹೋಗಬಹುದು. ಪ್ರತಿ ವರ್ಷ ಶುಲ್ಕ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ನಾನು ಇವರ ಶಿಕ್ಷಣ ಸ್ಪಾನ್ಸರ್ ಮಾಡಲು ನಿರ್ಧರಿಸಿದೆ ಎಂದಿದ್ದಾರೆ.
ಬ್ರೇಕಪ್ ನಂತರವೂ ಒಟ್ಟಿಗೆ ಕೆಲಸ ಮಾಡಿದ ಕಪಲ್ಸ್!
ಭಾರತದಲ್ಲಿದ್ದು ಪರಸ್ಪರ ನೆರವಾಗಿ ಬೆಳೆಯಬೇಕು. ಹೆಣ್ಮಕ್ಕಳಿಗೆ ಶಿಕ್ಷಣ ಕೊಡುವುದು ನಾವು ಬೆಳೆಯುವ ಬೆಸ್ಟ್ ರೀತಿ ಎಂದಿದ್ದಾರೆ ನಟಿ. ನಾನು ಮೂರು ಜನರಿಗೆ ಶಿಕ್ಷಣ ಸ್ಪಾನ್ಸರ್ ಮಾಡುತ್ತಿದ್ದೇನೆ. ಅವರ ಕಾಲೇಜು ಶಿಕ್ಷಣಕ್ಕೂ ನೆರವಾಗುತ್ತೇನೆ ಎಂದಿದ್ದಾರೆ. ನನಗೆ ಈ ಬಗ್ಗೆ ಖುಷಿ ಮತ್ತು ಹೆಮ್ಮೆ ಇದೆ. ಇದನ್ನು ಎಟೆನ್ಶನ್‌ಗಾಗಿ ಮಾಡ್ತಿಲ್ಲ. ನಮ್ಮ ಹೆಣ್ಮಕ್ಕಳಿಗೆ ಶಿಕ್ಷಣ ಒದಗಿಸುವುದೇ ಅವರಿಗೆ ನೆರವಾಗುವ ಉತ್ತಮ ದಾರಿ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.