'ಜವಾನ್​' ಫಸ್ಟ್​ ಲುಕ್​ ಲೀಕ್​? ನಯನತಾರಾ ಮಚ್ಚೆ ಮಾಯದ ಗುಟ್ಟು ರಟ್ಟಾಯ್ತು

By Suvarna News  |  First Published Jul 8, 2023, 2:27 PM IST

ನಟ ಶಾರುಖ್​ ಖಾನ್​ ಅವರ ಬಹು ನಿರೀಕ್ಷಿತ ಜವಾನ್​ ಚಿತ್ರಕ್ಕೆ ಫ್ಯಾನ್ಸ್​ ಕಾತರದಿಂದ ಕಾಯ್ತಿದ್ದಾರೆ. ಇದರ ನಡುವೆಯೇ ಫಸ್ಟ್​ಲುಕ್​ ಎನ್ನುವ ಪೋಸ್ಟರ್​ ವೈರಲ್​ ಆಗಿದೆ. ಏನಿದರ ಅಸಲಿಯತ್ತು? 
 


ಬಾಲಿವುಡ್ ನಟ ಶಾರುಖ್​ ಖಾನ್​ (Shah Rukh Khan)  ಅವರ ಬಹು ನಿರೀಕ್ಷಿತ ಜವಾನ್​ಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಶಾರುಖ್ ಖಾನ್ ಮತ್ತು ನಯನತಾರಾ (Nayanatara) ಅಭಿನಯದ ಜವಾನ್ ಚಿತ್ರ 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಸೌತ್ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.  ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ತಿಂಗಳು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು.   ಜವಾನ್ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.  

 ಸಿನಿಮಾದ ಮ್ಯೂಸಿಕ್ ಭರ್ಜರಿ ಬೆಲೆಗೆ ಮಾರಾಟವಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಕಲೆಕ್ಷನ್​ ಮಾಡಿದೆ. ಇದಕ್ಕೆ ಕಾರಣ ಚಿತ್ರದ ಮ್ಯೂಸಿಕ್​.  ಜವಾನ್ (Jawan) ಸಿನಿಮಾದ ಮ್ಯೂಸಿಕ್ ರೈಟ್ಸ್​​ನ್ನು ಟಿ ಸಿರೀಸ್ ಕಂಪೆನಿ ಭರ್ಜರಿ ಹಣಕೊಟ್ಟು ಪಡೆದುಕೊಂಡಿದೆ. ಟಿ ಸಿರೀಸ್ ಸುಮಾರು 36 ಕೋಟಿ ಬೆಲೆ ಕೊಟ್ಟು ಈ ಹಕ್ಕನ್ನು ಸ್ವಂತವಾಗಿಸಿದೆ. ಅಂದಹಾಗೆ ದಕ್ಷಿಣದ ನಟಿ ನಯನತಾರಾ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಅತಿಥಿ ಪಾತ್ರವೂ ಕಾಣಿಸಿಕೊಳ್ಳಲಿದೆ. ದೀಪಿಕಾ ಕಳೆದ ವರ್ಷ ಆಗಸ್ಟ್‌ನಲ್ಲಿ ಚೆನ್ನೈನಲ್ಲಿ ಚಿತ್ರದ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಪುಣೆ, ಮುಂಬೈ, ಹೈದರಾಬಾದ್, ಚೆನ್ನೈ, ರಾಜಸ್ಥಾನ ಮತ್ತು ಔರಂಗಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.  ಪಠಾಣ್​ ಭರ್ಜರಿ ಗೆಲುವಿನ ಬೆನ್ನಲ್ಲೇ ಸಹಜವಾಗಿ ಜವಾನ್​  ಮೇಲೆ ನಿರೀಕ್ಷೆ ಹೆಚ್ಚಿದೆ. ಕಾಲಿವುಡ್ ನಿರ್ದೇಶಕ ಅಟ್ಲಿ ಕುಮಾರ್ (Atlee Kumar)​ ಜೊತೆಗಿನ  ‘ಜವಾನ್​’ ಚಿತ್ರಕ್ಕೆ ಫ್ಯಾನ್ಸ್​ ಕಾಯುತ್ತಿದ್ದಾರೆ.  ತಮಿಳಿನಲ್ಲಿ ಅಟ್ಲಿ ಕುಮಾರ್ (Atly Kumar) ಅವರು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಈಗ ಅವರು ಶಾರುಖ್​ ಖಾನ್​ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ಹೈಪ್​ ಹೆಚ್ಚಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ ನೋಡಿ ಫ್ಯಾನ್ಸ್​ ವಾವ್​ ಎಂದಿದ್ದಾರೆ.   

Tap to resize

Latest Videos

ಶಾರುಖ್ ಖಾನ್​​ ಫ್ಯಾನ್ಸ್​ ಕಾತುರದಿಂದ ಕಾಯ್ತಿರೋ 'ಜವಾನ್'​ ಡೇಟ್​ ಕೊನೆಗೂ ಫಿಕ್ಸ್​

ಇದರ ಬೆನ್ನಲ್ಲೇ ಚಿತ್ರದ ಫಸ್ಟ್​ ಲುಕ್​ ಎನ್ನಲಾದ ಪೋಸ್ಟ್​ ಒಂದು ಸಕತ್​ ಸದ್ದು ಮಾಡುತ್ತಿದೆ. ಜವಾನ್​ ಚಿತ್ರದ ಫಸ್ಟ್​ ಲುಕ್​ ಎಂದು ವೈರಲ್​ ಆಗಿರೋ ಈ ಚಿತ್ರದಲ್ಲಿ ನಟಿ ನಯನತಾರಾ (Nayanthara) ಕಾಣಿಸಿಕೊಂಡಿದ್ದಾರೆ.  ಇದರಲ್ಲಿ ನಟಿ ಪಿಂಕ್ ಬಣ್ಣದ ಬ್ಲೇಝರ್ ಧರಿಸಿ, ಸಾಫ್ಟ್ ಕರ್ಲ್ ಮಾಡಿಕೊಂಡು ಬಾಸ್ ಲೇಡಿ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.  ಇದು ಜವಾನ್ ಸಿನಿಮಾದಿಂದ ನಟಿ ನಯನತಾರಾ ಅವರ ಫಸ್ಟ್ ಲುಕ್ ಎಂದೇ ಹೇಳುವ ಮೂಲಕ ಸಕತ್​ ವೈರಲ್​ ಆಗುತ್ತಿದೆ.  

ಆದರೆ ಇದರ ಅಸಲಿಯತ್ತೇ ಬೇರೆ. ಈ ಪೋಸ್ಟರ್​ ನೋಡಿದವರು ಇದಾಗಲೇ ಫೇಕ್​ ಎಂದಿದ್ದರೆ, ಕೆಲವರು ಮಾತ್ರ ಇದು ಜವಾನ್​ ಚಿತ್ರದ ಫಸ್ಟ್​ ಲುಕ್ಕೇ ಎಂದಿದ್ದಾರೆ. ಆದರೆ ಈ ಚಿತ್ರವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅದರಲ್ಲಿ, ನಯನತಾರಾ ಮೂಗಿನ ಕೆಳಗೆ ಇರುವ  ಮಚ್ಚೆ ಮಾಯವಾಗಿದೆ. ಆದ್ದರಿಂದ ಇದು ಫೇಕ್​ ಎಂದು ಹಲವರು ಕಮೆಂಟ್​ ಹಾಕುತ್ತಿದ್ದಾರೆ. ಮಚ್ಚೆ ನಯನತಾರಾ ಅವರಿಗೆ ಹುಟ್ಟಿದಾಗಿನಿಂದಲೂ ಇದೆ. ಈ ಪೋಸ್ಟರ್​ನಲ್ಲಿ ಇಲ್ಲ ಎಂದು ಸ್ಪಷ್ಟವಾಗಿ ಕಾಣಿಸುತ್ತದೆ. ಆದ್ದರಿಂದ ಇದು ಫೇಕ್​ ಎನ್ನುತ್ತಾರೆ.  ಅಸಲಿಗೆ ಇದು ಫೇಕ್​ ಪೋಸ್ಟ್​ ಎನ್ನುವುದು ನಿಜವೇ. ಏಕೆಂದರೆ,  ಈಗ ವೈರಲ್​ ಆಗಿರುವ ಪೋಸ್ಟ್​ ಜವಾನ್ ಸಿನಿಮಾದ ನಯನತಾರಾ ಫಸ್ಟ್ ಲುಕ್ (first look) ಅಲ್ಲ. ಬದಲಾಗಿ ಇದು ಎಐ (ಕೃತಕ ಬುದ್ಧಿಮತ್ತೆ) ಜನರೇಟ್ ಮಾಡಿರುವಂತ ಸ್ಪೆಷಲ್ ಫೋಟೋ.   ಇದರಲ್ಲಿ ನಯನತಾರಾ ಅವರನ್ನು ಅಮೆರಿಕನ್ ಫಿಲ್ಮ್ ಮೇಕರ್ ವೆಸ್ ಆಂಡರ್ಸನ್ ಸಿನಿಮಾದಲ್ಲಿ ಕಾಣಬಹುದು. ಅವರು ತಮ್ಮ ಸಿನಿಮಾಗಳಲ್ಲಿ ಬುಡಾಪೆಸ್ಟ್ ಹೋಟೆಲ್, ರಾಯಲ್ ಲುಕ್​ಗಾಗಿಯೇ ಫೇಮಸ್. ನಯನತಾರಾ ಅವರ ಅಭಿಮಾನಿಗಳ ಪೇಜ್ ಒಂದರಿಂದ ಈ ಫೋಟೋ ಶೇರ್ ಮಾಡಿ ನಯನತಾರಾ ಅವರ ಜವಾನ್ ಫಸ್ಟ್ ಲುಕ್, ನಯನತಾರಾ ಜವಾನ್ ಟ್ರೈಲರ್ ಎಂದು ಬರೆದಿದ್ದಾರೆ ಅಷ್ಟೇ.

ರಿಲೀಸ್‌ಗೂ ಮುನ್ನ 36 ಕೋಟಿ ಗಳಿಸಿದ ಶಾರುಖ್ ಖಾನ್ ನಟನೆಯ ಜವಾನ್!

Leaked, NAYANTHARA's first look from pic.twitter.com/4OkQbu1Ljo

— Nayanthara Fan Account (@NayanthaaraF)
click me!