ಒಳ್ಳೆ ನಟಿ ಆಗ್ಬೇಕು ಎಂದ್ರೆ ಸ್ವಲ್ಪ ಅಡ್ಜಸ್ಟ್‌ ಮಾಡ್ಕೋ ಎಂದ್ರು... ಆದ್ರೆ... ಕಾಸ್ಟಿಂಗ್‌ ಕೌಚ್‌ ಅನುಭವ ಹೇಳಿದ ನಯನತಾರಾ

By Suvarna News  |  First Published Feb 13, 2024, 4:52 PM IST

ಸಿನಿಮಾದಲ್ಲಿ ಕಾಸ್ಟಿಂಗ್‌ ಕೌಚ್‌ ಅನುಭವದ ಕುರಿತು ನಟಿ ನಯನತಾರಾ ಹೇಳಿದ್ದೇನು? ಅವರಿಗಾಗಿರುವ ಅನುಭವ ಎಂಥದ್ದು? 
 


ಕಾಸ್ಟಿಂಗ್​ ​ ಕೌಚ್​ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು.  

ಇದೀಗ ಬಹುಭಾಷಾ ನಟಿ ನಯನತಾರಾ ಅವರೂ ಕಾಸ್ಟಿಂಗ್‌ ಕೌಚ್‌ ಕುರಿತು ಮಾತನಾಡಿದ್ದಾರೆ. ಅನ್ನಪೂರ್ಣಿ ಚಿತ್ರದಲ್ಲಿ ಶ್ರೀರಾಮಚಂದ್ರನ ಕುರಿತು ಅವಹೇಳನ ಮಾಡಿರುವ ಹಾಗೂ ಫುಡ್‌ ಜಿಹಾದ್‌ ಆರೋಪದ ಮೇಲೆ ಭಾರಿ ಹಿನ್ನಡೆ ಅನುಭವಿಸಿದ್ದ ನಟಿ ನಯನತಾರಾ ತಮಗಾಗಿರುವ ಕಹಿ ಅನುಭವಗಳ ಕುರಿತು ಹೇಳಿದ್ದಾರೆ. ಆದರೆ ಇವರು ಉಳಿದ ನಟಿಯರಂತೆ ಮಾತನಾಡದೇ ಸ್ವಲ್ಪ ವಿಭಿನ್ನವಾಗಿ ಮಾತನಾಡಿದ್ದಾರೆ.

Latest Videos

undefined

Priyanka Chopra: ಅಂಡರ್​ವೇರ್​ ಕಳಚಿ ಎಂದಿದ್ದ ಆ ನಿರ್ದೇಶಕ: ಕರಾಳ ದಿನದ ಕುರಿತು ಮೌನ ಮುರಿದ ನಟಿ

ಬಹುತೇಕ ನಟಿಯರು ನಿರ್ದೇಶಕರು, ನಿರ್ಮಾಪಕರು ತಮ್ಮನ್ನು ಮಂಚಕ್ಕೆ ಕರೆದಿದ್ದರು, ಅಡ್ಜಸ್ಟ್‌ ಮಾಡಿಕೊಳ್ಳಲು ಹೇಳಿದರು, ತಮ್ಮ ಜೊತೆ ದಿನ ಕಳೆಯುವಂತೆ ಹೇಳಿದರು ಎಂದೆಲ್ಲಾ ಹೇಳಿದರೆ, ನಟಿ ನಯನತಾರಾ ಸ್ವಲ್ಪ ಭಿನ್ನವಾಗಿ ಹೇಳಿದ್ದಾರೆ. ನಯನತಾರಾ ಹೇಳಿದ್ದೇನೆಂದರೆ,  ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆಯೋ, ಇಲ್ಲವೋ ಎನ್ನುವುದು ಮುಖ್ಯವಲ್ಲ. ಆದರೆ ಇಂತಹ ಸಮಸ್ಯೆಗಳಿಗೆ ಕಾರಣವಾಗುವುದು ನಮ್ಮ ಸ್ವಭಾವವಷ್ಟೇ ಎನ್ನತ್ತೇನೆ.  ಕಾಸ್ಟಿಂಗ್ ಕೌಚ್ ಪರಿಸ್ಥಿತಿ ಎದುರಾದಾಗ ಅದನ್ನು ಹೇಗೆ ಎದುರಿಸಬೇಕು ಎನ್ನುವುದು ನಮ್ಮ ಕೈಯಲ್ಲಿ ಇರುತ್ತದೆ ಎನ್ನುವ ಮೂಲಕ ಕಾಸ್ಟಿಂಗ್‌ ಕೌಚ್‌ ಬಗ್ಗೆ ತಿಳಿಸಿದ್ದಾರೆ.

ನನಗೂ ಆರಂಭದ ದಿನಗಳಲ್ಲಿ ಇದರ ಅನುಭವ ಆಗಿದೆ. ನನ್ನನ್ನೂ  ಕೆಲವರು ಕಮೀಟ್‌ಮೆಂಟ್ ಬಗ್ಗೆ ಕೇಳಿ ಏನೇನೋ ಮಾತನಾಡಿದ್ದಾರೆ. ಆದರೆ ನಾನು  ಇಂಡಸ್ಟ್ರಿಗೆ ಟ್ಯಾಲೆಂಟ್ ನಂಬಿ ಬಂದವಳು. ಇಂಥ ಘಟನೆಗಳನ್ನು ನನ್ನ ಹತ್ತಿರ ಸುಳಿಗೊಡಲಿಲ್ಲ.  ಬರೀ ಟ್ಯಾಲೆಂಟ್‌ನಿಂದಲೇ ಈ ಮಟ್ಟಕ್ಕೇರಿದ್ದೀನಿ. ಆದ್ದರಿಂದ ಇಂಥ ಪರಿಸ್ಥಿತಿ ಎದುರಿಸುವ ಕಲೆ ನಟಿಯರಿಗೆ ಗೊತ್ತಿರಬೇಕಷ್ಟೇ ಎಂದಿದ್ದಾರೆ. ಸದ್ಯ ನಯನತಾರಾ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. . ಅವಳಿ ಮಕ್ಕಳ ಲಾಲನೆ ಪಾಲನೆಗಾಗಿ ಹೆಚ್ಚಿನ ಸಮಯ ಮೀಸಲಿಟ್ಟಿದ್ದರು. ಆದರೆ ಅನ್ನಪೂರ್ಣಿ ಚಿತ್ರದಲ್ಲಿ ನಟಿಸುವ ಮೂಲಕ ವಿವಾದವನ್ನು ಮೈಮೇಲೆ ಹಾಕಿಕೊಂಡಿದ್ದರು.  

Sonali Bendre: ಮಧ್ಯರಾತ್ರಿ ಕರೆ ಮಾಡಿ ಓಡಿಹೋಗೋಣ ಬಾ ಎಂದ: ಭಯಾನಕ ಅನುಭವ ಬಿಚ್ಚಿಟ್ಟ ನಟಿ

click me!