ಆಸ್ಪತ್ರೆಯಿಂದ ಮಿಥುನ್‌ ಚಕ್ರವರ್ತಿ ಡಿಸ್‌ಚಾರ್ಜ್‌: ಕರೆ ಮಾಡಿ ನಟನನ್ನು ಬೈದ ಪಿಎಂ ಮೋದಿ- ಏನಿದು ವಿಷ್ಯ?

By Suvarna News  |  First Published Feb 13, 2024, 1:04 PM IST

ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮಗೆ ಕರೆ ಮಾಡಿ ಬೈದಿರುವುದಾಗಿ ನಟ ಹೇಳಿದ್ದಾರೆ. ಏನಿದು ವಿಷ್ಯ? 
 


ಇಸ್ಕೆಮಿಕ್ ಸೆರೆಬ್ರೊವಾಸ್ಕುಲರ್ ಸ್ಟ್ರೋಕ್‌ನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕೋಲ್ಕತಾ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಹೃದಯ ಸಂಬಂಧಿ ತೊಂದರೆಯಿಂದ ಅವರು ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಲಾಗಿತ್ತು. ನಂತರ ಬಲಗೈ ಮತ್ತು ಕಾಲಿನಲ್ಲಿ ದೌರ್ಬಲ್ಯವನ್ನು ಅನುಭವಿಸುತ್ತಿದ್ದಾರೆ ಎನ್ನಲಾಗಿತ್ತು.  ಆಸ್ಪತ್ರೆಗೆ ದಾಖಲಾದ ಬಳಿಕ  ಅವರಿಗೆ ರಕ್ತಕೊರತೆಯ ಸೆರೆಬ್ರೊವಾಸ್ಕುಲರ್ ಸ್ಟ್ರೋಕ್ ಇರುವುದನ್ನು ವೈದ್ಯರು ಗುರುತಿಸಿದ್ದರು.  73 ವರ್ಷ ವಯಸ್ಸಿನ ಮಿಥುನ್‌ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅವರೀಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ.

ನಿನ್ನೆ ಅಂದರೆ ಫೆ.12ರಂದು ನಟನನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗಿದೆ. ಈ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಮಿಥುನ್‌ ಚಕ್ರವರ್ತಿ ಅವರು, ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ಗದರಿರುವುದಾಗಿ ತಿಳಿಸಿದ್ದಾರೆ. ನಾನು ನನ್ನ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ತಮಗೆ ಪ್ರಧಾನಿಯವರು ಗದರಿ ಇನ್ನು ಮುಂದೆ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವಂತೆ ಹೇಳಿದರು ಎಂದಿದ್ದಾರೆ. 

Tap to resize

Latest Videos

ಕಂಗನಾಗೆ ನಿಜವಾಗಿಯೂ ಪ್ರಧಾನಿಯಾಗೋ ಆಸೆ ಇದ್ಯಾ? ’ಎಮರ್ಜೆನ್ಸಿ’ ನಟಿಗೆ ಪ್ರಶ್ನೆ ಕೇಳಿದ್ರೆ ಹೀಗೆ ಹೇಳೋದಾ?

ನಾನು ರಾಕ್ಷಸನಂತೆ ತಿನ್ನುತ್ತೇನೆ. ಹಾಗಾಗಿ ನನಗೆ ಈ ರೀತಿ ಆರೋಗ್ಯ ಹದೆಗಟ್ಟಿತು. ಪ್ರತಿಯೊಬ್ಬರಿಗೂ ನನ್ನ ಸಲಹೆ ಏನಂದರೆ ನಿಯಮಿತ ಆಹಾರ ಬಳಸಿ. ಮಧುಮೇಹ ಇರುವವರು ಸಿಹಿತಿಂಡಿಗಳನ್ನು ಸೇವಿಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು ಹೊಂದಿರಬಾರದು. ನಿಮ್ಮ ಆಹಾರಕ್ರಮವನ್ನು ನಿಯಂತ್ರಿಸಿ ಎಂದು ಇದೇ ವೇಳೆ ಮಿಥುನ್‌ ದಾದಾ ಎಲ್ಲರಿಗೂ ಸಲಹೆ ನೀಡಿದ್ದಾರೆ. 

ಅಂದಹಾಗೆ ಇಸ್ಕೆಮಿಕ್ ಸೆರೆಬ್ರೊವಾಸ್ಕುಲರ್ ಸ್ಟ್ರೋಕ್‌ ಎಂದರೆ,  ಮೆದುಳಿನ ಭಾಗಕ್ಕೆ ರಕ್ತ ಪೂರೈಕೆ ನಿರ್ಬಂಧಿಸಿದಾಗ ಅಥವಾ ಕಡಿಮೆಯಾದಾಗ ರಕ್ತಕೊರತೆಯ ಸ್ಟ್ರೋಕ್ ಸಂಭವಿಸುತ್ತದೆ. ಇದು ಮೆದುಳಿನ ಅಂಗಾಂಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯುವುದನ್ನು ತಡೆಯುತ್ತದೆ. ಮೆದುಳಿನ ಜೀವಕೋಶಗಳು ನಿಮಿಷಗಳಲ್ಲಿ ಸಾಯಲು ಪ್ರಾರಂಭಿಸುತ್ತವೆ. ಮತ್ತೊಂದು ರೀತಿಯ ಪಾರ್ಶ್ವವಾಯು ಹೆಮರಾಜಿಕ್ ಸ್ಟ್ರೋಕ್ ಆಗಿದೆ. ಮೆದುಳಿನಲ್ಲಿನ ರಕ್ತನಾಳವು ಸೋರಿಕೆಯಾದಾಗ ಅಥವಾ ಸ್ಫೋಟಗೊಂಡಾಗ ಮತ್ತು ಮೆದುಳಿನಲ್ಲಿ ರಕ್ತಸ್ರಾವವನ್ನು ಉಂಟು ಮಾಡಿದಾಗ ಇದು ಸಂಭವಿಸುತ್ತದೆ. ರಕ್ತವು ಮೆದುಳಿನ ಕೋಶಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ಹಾನಿಗೊಳಿಸುತ್ತದೆ. ಇಂಥ ಸಂದರ್ಭದಲ್ಲಿ ಮಾತನಾಡಲು ಮತ್ತು ಇತರರು ಏನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ತೊಂದರೆಯಾಗುತ್ತದೆ. ಮುಖ, ತೋಳು ಅಥವಾ ಕಾಲಿನಲ್ಲಿ ಮರಗಟ್ಟುವಿಕೆ, ದೌರ್ಬಲ್ಯ ಅಥವಾ ಪಾರ್ಶ್ವವಾಯು ಉಂಟಾಗಬಹುದು. ಒಂದು ಅಥವಾ ಎರಡೂ ಕಣ್ಣುಗಳಲ್ಲಿ ನೋಡಲು ತೊಂದರೆ ಆಗಬಹುದು. ತಲೆನೋವು, ನಡೆಯಲು ತೊಂದರೆ, ತಲೆತಿರುಗುವಿಕೆ ಆಗಬಹುದು ಎನ್ನುತ್ತಾರೆ ವೈದ್ಯರು.

ನ್ಯಾಚುರಲ್​ ಬ್ಯೂಟಿ ಸಾಯಿ ಪಲ್ಲವಿ ಜೊತೆ ಜಪಾನ್​ನಲ್ಲಿ ಆಮೀರ್​ ಪುತ್ರ ಜುನೈದ್​! ಏನಿದು ಹೊಸ ವಿಷ್ಯ?
 

click me!