ಮಗಳ ನಿರ್ಧಾರಗಳಲ್ಲಿ ಅಲ್ಲು ಅರ್ಜುನ್ ತಲೆ ಹಾಕಲ್ಲ; ಇಂಟ್ರಸ್ಟಿಂಗ್ ವಿಚಾರ ಬಿಚ್ಚಿಟ್ಟ ನಟಿ ಸಮಂತಾ

Published : Apr 08, 2023, 11:05 AM IST
ಮಗಳ ನಿರ್ಧಾರಗಳಲ್ಲಿ ಅಲ್ಲು ಅರ್ಜುನ್ ತಲೆ ಹಾಕಲ್ಲ; ಇಂಟ್ರಸ್ಟಿಂಗ್ ವಿಚಾರ ಬಿಚ್ಚಿಟ್ಟ ನಟಿ ಸಮಂತಾ

ಸಾರಾಂಶ

ಮಗಳ ನಿರ್ಧಾರಗಳಲ್ಲಿ ಅಲ್ಲು ಅರ್ಜುನ್ ತಲೆ ಹಾಕಲ್ಲ ಎಂದು ಇಂಟ್ರಸ್ಟಿಂಗ್ ವಿಚಾರವನ್ನು ನಟಿ ಸಮಂತಾ ಬಿಚ್ಚಿಟ್ಟಿದ್ದಾರೆ. 

ಹುಟ್ಟುಹಬ್ಬ ಸಂಭ್ರಮದಲ್ಲಿರುವ ಅಲ್ಲು ಅರ್ಜುನ್ ಅವರಿಗೆ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ಜನ್ಮದ ದಿನದ ಪ್ರಯುಕ್ತ ಬಹುನಿರೀಕ್ಷೆಯ ಪುಷ್ಪ-2 ಸಿನಿಮಾದ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ. ಪುಷ್ಪ-2 ಟೀಸರ್ ಈಗಾಗಲೇ ವೈರಲ್ ಆಗಿದ್ದು ಅಲ್ಲು ಅರ್ಜುನ್ ಲುಕ್ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಈ ನಡುವೆ ಅಲ್ಲು ಅರ್ಜುನ್ ಮಗಳು ಕೂಡ ತೆರೆಮೇಲೆ ಬರಲು ಸಿದ್ಧರಾಗಿದ್ದಾರೆ. ಸ್ಟೈಲಿಶ್ ಸ್ಟಾರ್ ಮಗಳು ಅರ್ಹಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. 

ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಮೂಲಕ ಅರ್ಹಾ ಮೊದಲ ಬಾರಿಗೆ ಸಿನಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್‌ನಲ್ಲಿ ಅರ್ಹಾ ಅವರ ಲುಕ್ ರಿವೀಲ್ ಆಗಿ ವೈರಲ್ ಆಗಿತ್ತು. ಶಾಕುಂತಲಂನಲ್ಲಿ ಅರ್ಹಾ ಸಮಂತಾ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಗುಣಶೇಖರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಶಾಕುಂತಲಂ ಸಿನಿಮಾದಲ್ಲಿ ಅರ್ಹಾ ರಾಜಕುಮಾರ ಭಾರತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕಾಳಿದಾಸ ಬರೆದ ಜನಪ್ರಿಯ ನಾಯಟ  ಅಭಿಜ್ಞಾನ ಶಾಕುಂತಲ ಆಧರಿಸಿದೆ. ಈಗಾಗಲೇ ಬಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ.

ಅಲ್ಲು ಅರ್ಜುನ್ ಪುತ್ರಿ ಅರ್ಹಾ ಬಗ್ಗೆ ಮತ್ತು ಆಕೆಯ ನಟನೆಯ ಬಗ್ಗೆ ನಟಿ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಮಂತಾ, ಕೆಲವು ಕಾರಣಕ್ಕೆ ಆಕೆ ತನ್ನದೆ ವ್ಯಕ್ತಿ ಮತ್ತು ತನ್ನ ವಿಷಯಗಳನ್ನು ತಾನೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅವಳ ತಂದೆ ಆಕೆಯ ನಿರ್ಧಾರಗಳಲ್ಲಿ ಭಾಗಿಯಾಗುತ್ತಾರೆ ಎಂದು ನನಗೆ ಅನಿಸಿಲ್ಲ. ಯಾಕೆಂದರೆ ಅವರು ತಮ್ಮ ವೃತ್ತಿಜೀವನದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ಆಕೆಯ ಕರಿಯರ್ ವಿಭಿನ್ನವಾಗಲಾಗಿದೆ. ಖಂಡಿತವಾಗಿಯೂ ಎದುರುನೋಡಬೇಕಾದ ಸಂಗತಿ. ಈ ಸಿನಿಮಾ ಕುಟುಂಬ ಮತ್ತು ಮಕ್ಕಳಿಗೂ ಕನೆಕ್ಟ್ ಆಗಲಿದೆ. ಈ ಸಿನಿಮಾದಲ್ಲಿ ಒಂದು ಮಗುವಿದೆ ಪಾತ್ರ ಸುಂದರವಾಗಿದೆ' ಎಂದು ಹೇಳಿದ್ದಾರೆ. 

ಅಲ್ಲು ಅರ್ಜುನ್ ಮಗಳು ಇಂಗ್ಲಿಷ್ ಮಾತನಾಡಲ್ಲ ಅಪ್ಪಟ್ಟ ತೆಲುಗು ಪ್ರೇಮಿ; ಅರ್ಹಾ ಬಗ್ಗೆ ಸಮಂತಾ ಹೇಳಿಕೆ

ಶಾಕುಂತಲಂ ಸಿನಿಮಾ ರಿಜೆಕ್ಟ್ ಮಾಡಿದ್ದ ಸಮಂತಾ 

ಶಾಕುಂತಲಂನಲ್ಲಿ ಸಮಂತಾ ಮೇನಕಾ ಮತ್ತು ವಿಶ್ವಾಮಿತ್ರ ಪುತ್ರಿ ಶಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರ ಮೊದಲು ಆಫರ್ ಮಾಡಿದಾಗ ರಿಜೆಕ್ಟ್ ಮಾಡಿದ್ದೆ ಎಂದು ಸಮಂತಾ ರಿವೀಲ್ ಮಾಡಿದ್ದರು. ಸಂದರ್ಶನದಲ್ಲಿ ಸಮಂತಾ, 'ನಾನು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣವನ್ನು ಪೂರ್ಣಗೊಳಿಸಿದ ಸಮಯದಲ್ಲಿ ನನಗೆ ಈ ಆಫರ್ ಬಂದಿತು. ನಾನು ರಾಜಿ ಪಾತ್ರದಲ್ಲಿ ನಟಿಸಿದ್ದೇನೆ, ಶಕುಂತಲೆಗಿಂತ ಹಲವು ರೀತಿಯಲ್ಲಿ ಭಿನ್ನವಾದ ಪಾತ್ರ ಅದಾಗಿತ್ತು. ಶಕುಂತಲಾ ಪಾವಿತ್ರ್ಯತೆ, ಮುಗ್ಧತೆ, ಮತ್ತು ಘನತೆಯ ಸಂಕೇತವಾಗಿದೆ. ಆ ಸಮಯದಲ್ಲಿ ನಾನು ಶಕುಂತಲಾ ಆಗಿ ಬದಲಾಗಬಹುದೇ ಎಂದು ನನಗೆ ಖಚಿತ ಇರಲಿಲ್ಲ' ಎಂದು ಸಮಂತಾ ಹೇಳಿದ್ದರು. 

ಸಮಂತಾ ನಟಿಸಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ; ಮಹಿಳಾ ಪ್ರಧಾನ ಚಿತ್ರದಲ್ಲಿ ಗ್ಲಾಮರ್ ನಟಿ

ಶಾಕುಂತಲಂ ಸಿನಿಮಾದಲ್ಲಿ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾ ವೀಕ್ಷಿಸಿದ್ದ ಸಮಂತಾ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂತಸ ಹೊರಹಾಕಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?