Allu Arjun Birthday; ನನ್ನ ಪುಷ್ಪರಾಜ್, ಇಡೀ ಜಗತ್ತು ನಿಮಗಾಗಿ ಕಾಯುತ್ತಿದೆ, ರಶ್ಮಿಕಾ ಸ್ವೀಟ್ ಬರ್ತಡೇ ವಿಶ್

Published : Apr 08, 2023, 10:28 AM ISTUpdated : Apr 08, 2023, 10:46 AM IST
Allu Arjun Birthday; ನನ್ನ ಪುಷ್ಪರಾಜ್, ಇಡೀ ಜಗತ್ತು ನಿಮಗಾಗಿ ಕಾಯುತ್ತಿದೆ, ರಶ್ಮಿಕಾ ಸ್ವೀಟ್ ಬರ್ತಡೇ ವಿಶ್

ಸಾರಾಂಶ

ನನ್ನ ಪುಷ್ಪರಾಜ್, ಇಡೀ ಜಗತ್ತು ನಿಮಗಾಗಿ ಕಾಯುತ್ತಿದೆ ಎಂದು ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಅವರಿಗೆ ಸ್ವೀಟ್ ಬರ್ತಡೇ ವಿಶ್ ಮಾಡಿದ್ದಾರೆ. 

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಇಂದು (ಏಪ್ರಿಲ್ 8) ಹುಟ್ಟುಹಬ್ಬದ ಸಂಭ್ರಮ. ಪುಷ್ಪ ಸ್ಟಾರ್‌ಗೆ ಅಭಿಮಾನಿಗಳು, ಸಿನಿಮಾ ಗಣ್ಯರಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಅಲ್ಲು ಅರ್ಜನ್ ಫೋಟೋ, ವಿಡಿಯೋ ಶೇರ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲು ಅರ್ಜುನ್ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ತರಹೇವಾರಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಅದ್ಭುತ ಅಭಿಯನದ ಜೊತೆಗೆ ಸ್ಟೈಲಿಶ್ ಸ್ಟಾರ್ ಡಾನ್ಸರ್ ಕೂಡ ಹೌದು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್‌ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. 

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಲ್ಲು ಅರ್ಜುನ್‌ಗೆ ಪುಷ್ಪ ಸಹ ನಟಿ ರಶ್ಮಿಕಾ ಮಂದಣ್ಣ ಕೂಡ ಸ್ವೀಟ್ ವಿಶ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಲ್ಲು ಅರ್ಜುನ್ ಜೊತೆಗಿನ ಫೋಟೋ ಶೇರ್ ಮಾಡಿ ಪ್ರೀತಿಯ ವಿಶ್ ಮಾಡಿದ್ದಾರೆ. ನನ್ನ ಪುಷ್ಪರಾಜ್ ಎಂದು ರಶ್ಮಿಕಾ ಅಲ್ಲು ಅರ್ಜುನ್‌ಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. 

'ನನ್ನ ಪುಷ್ಪರಾಜ್ ಅಲ್ಲು ಅರ್ಜುನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಡೀ ಜಗತ್ತು ನಿಮ್ಮನ್ನು ಪುಷ್ಪಾ ಆಗಿ ಮತ್ತೆ ನೋಡಲು ಕಾಯುತ್ತಿದೆ. ಅವರು ನಿಮ್ಮನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ತಗ್ಗದೇ ಇಲ್ಲ' ಎಂದು ಬರೆದುಕೊಂಡಿದ್ದಾರೆ. ಲವ್ ಯು ಸರ್ ಎಂದು ಬರೆದುಕೊಂಡು ಹಾರ್ಟ್ ಇಮೋಜಿ ಹಾಕಿದ್ದಾರೆ.

ಅಲ್ಲು ಅರ್ಜುನ್ 'ಪುಷ್ಪ-2' ಹೇರ್ ಸ್ಟೈಲ್ ವೈರಲ್; 'ತಗ್ಗೋದೇ ಇಲ್ಲ' ಎಂದ ಫ್ಯಾನ್ಸ್

ಪುಷ್ಪ ಸಿನಿಮಾ ಮೂಲಕ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಮೋಡಿ ಮಾಡಿದ್ದರು. ಇಬ್ಬರ ಕಾಂಬಿನೇಷನ್ ಅಭಿಮಾನಿಗಳ ಹೃದಯ ಗೆದ್ದಿತ್ತು. ಇದೀಗ ಮತ್ತೆ ಇಬ್ಬರನ್ನೂ ಪಾರ್ಟ್-2ನಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪುಷ್ಪ ಪಾರ್ಟ್-2 ಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸದ್ಯ ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಈಗಾಗಲೇ ಪುಷ್ಪ-2 ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ. ಪುಷ್ಪರಾಜ್‌ನನ್ನು ಎಲ್ಲರೂ ಹುಡುಕುತ್ತಿದ್ದಾರೆ. ಆದರೆ ಪುಷ್ಪರಾಜ್ ಕಾಡಿನಲ್ಲಿ ಹುಲಿಯ ಜೊತೆ ಕಾಣಿಸಿಕೊಳ್ಳುತ್ತಾರೆ. ಮತ್ತೊಂದು ವಿಭಿನ್ನ ಲುಕ್ ಕೂಡ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ನಿರಾಸೆ: 'ಪುಷ್ಪ-2' ಶೂಟಿಂಗ್‌ ಮತ್ತೆ ಸ್ಥಗಿತ, ಕಾರಣವೇನು?

ಸದ್ಯ ರಿಲೀಸ್ ಆಗಿರುವ ಗ್ಲಿಂಮ್ಸ್ ಪಾರ್ಟ್-2 ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫಹಾದ್ ಮತ್ತು ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ನಿರ್ದೇಶಕ ಸುಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಪುಷ್ಪ-2 ನೋಡಲು ಇನ್ನು ಒಂದಿಷ್ಟು ತಿಂಗಳು ಕಾಯಲೇ ಬೇಕಾಗಿದೆ. 

  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?