
ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಸದಾ ಸುದ್ದಿಯಾಗುತ್ತದೆ. ಅದರಲ್ಲೂ ನಿರ್ದೇಶಕ ವಿಘ್ನೇಶ್ ಜೊತೆ ಹಲವು ವರ್ಷಗಳಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು, ಸೈಲೆಂಟ್ ಆಗಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ಮದುವೆ ಯಾವಾಗ ಎನ್ನುವುದೇ ದೊಡ್ಡ ಪ್ರಶ್ನೆ.
ಈ ಗಾಸಿಪ್‌ಗಳ ನಡುವೆ ಇಬ್ಬರ ಸಾಧನೆಗೆ ಒಂದು ಪ್ರಶಸ್ತಿ ಸಿಕ್ಕಿದೆ. ಅದುವೇ ಟೈಗರ್ ಪ್ರಶಸ್ತಿ. ಹೌದು! ನಯನತಾರಾ ಹಾಗೂ ವಿಘ್ನೇಶ್ ಒಟ್ಟಿಗೆ ಪೆಬ್ಬಲ್ಸ್ ಚಿತ್ರ ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದು ಲಭಿಸಿದೆ. 'ಪೆಬ್ಬಲ್ಸ್ ಚಿತ್ರಕ್ಕೆ ಟೈಗರ್ ಪ್ರಶಸ್ತಿ ಸಿಕ್ಕಿದೆ. ಇದು ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ. ನಮ್ಮ ಇಡೀ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು,' ಎಂದು ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
ಸಿನಿ ಜರ್ನಿಯಲ್ಲಿ ಯಶಸ್ಸು ಕಾಣುತ್ತಿದ್ದಂತೆ ವಿಘ್ನೇಶ್ 'ರೌಡಿ ಪಿಕ್ಚರ್ಸ್' ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ತೆರೆದರು. ವಿಘ್ನೇಶ್ ಅವರನ್ನು ಪ್ರೀತಿಸಿದ ಕೆಲವೇ ವರ್ಷದೊಳಗೆ ನಯನತಾರಾ ಸಹ ಮಾಲಕಿ ಆದರು. ಈ ಸಂಸ್ಥೆಯಲ್ಲಿ ಇಬ್ಬರೂ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲೂ 'ನೇಟ್ರಿಕಣ್' ಸಿನಿಮಾದಲ್ಲಿ ನಯನತಾರಾ ಅಭಿನಯಿಸಿ, ವೀಕ್ಷಕರ ಗಮನ ಸೆಳೆದರು. ಹಾಕಿದ ಸಂಪೂರ್ಣ ಬಂಡವಾಳ ಒಂದೇ ತಿಂಗಳಲ್ಲಿ ಗಳಿಸಿವಲ್ಲಿಯೂ ಯಶಸ್ವಿಯಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.