ಹಿರಿಯ ನಟ ಮಮ್ಮುಟಿ ಸೇರಿ 300 ಮಂದಿ ವಿರುದ್ಧ ದೂರು ದಾಖಲು!

Suvarna News   | Asianet News
Published : Aug 09, 2021, 11:53 AM ISTUpdated : Aug 09, 2021, 12:00 PM IST
ಹಿರಿಯ ನಟ ಮಮ್ಮುಟಿ  ಸೇರಿ  300 ಮಂದಿ ವಿರುದ್ಧ ದೂರು ದಾಖಲು!

ಸಾರಾಂಶ

ಕೋವಿಡ್ ನಿಮಯ ಉಲ್ಲಂಘಿಸಿದ ಮಲಯಾಳಂ ಹಿರಿಯ ನಟ ಮಮ್ಮುಟಿ. 300 ಮಂದಿ ವಿರುದ್ಧ ಪ್ರಕರಣ ದಾಖಲು.  

ಕಳೆದ ಮಂಗಳವಾರ ಕೋಯಿಕ್ಕೋಡನ್‌ನಲ್ಲಿರುವ ಮೈತ್ರಾ ಆಸ್ಪತ್ರೆಯಲ್ಲಿ ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆ ಸೇವೆ ಉದ್ಘಾಟನೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಮಲಯಾಳಂ ಹಿರಿಯ ನಟ ಮಮ್ಮುಟಿ ತೆರಳಿದ್ದರು. ಈ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಆಗಿದೆ ಎಂದು ಪೊಲೀಸರು ಆರೋಪಿಸಿ, ನಟ ಸೇರಿ ಉಳಿದ 300 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. 

ಸರ್ಕಾರಿ ಜಾರಿಗೊಳಿಸಿರುವ ಕೋವಿಡ್ ನಿಯಮ ಉಲ್ಲಂಘಿಸಿ ಸಮಾರಂಭದಲ್ಲಿ ಹೆಚ್ಚಿನ ಜನ ಸೇರಿದ್ದರು. ಸಾಂಕ್ರಾಮಿಕ ರೋಗ ಕಾಯ್ದೆ ಅನ್ವಯ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋ ಹಾಗೂ ಫೋಟೋವನ್ನು ಪರಿಶೀಲಿಸಿ, ಕಾರ್ಯಕ್ರಮ ಆಯೋಜಿಸಿದ್ದ ಆಸ್ಪತ್ರೆಯ ಆಡಳಿತ ಸಿಬ್ಬಂದಿ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ ಪೊಲೀಸರು. 

ಮಮ್ಮುಟ್ಟಿ-ಸಲ್ಫತ್ ಜೊತೆಯಾಗಿ 42 ವರ್ಷ..! ಟೈಂ ಸಿಕ್ಕಾಗಲೆಲ್ಲಾ ಹೆಂಡ್ತಿಗೆ ಫೋನ್ ಮಾಡೋ ಮೆಗಾಸ್ಟಾರ್

'ಸಮಾರಂಭದ ಆರಂಭದಲ್ಲಿ ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಿದ್ದರು. ಆದರೆ ಕೆಲ ಸಮಯದ ಬಳಿಕ ಸಮಾರಂಭದಲ್ಲಿ ಭಾಗವಹಿಸಿದವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ. ಆಗಮಿಸಿದ ಅತಿಥಿಗಳು ಬೇಜವಾಬ್ದಾರಿಯಿಂದ ನಡೆದುಕೊಂಡರು,' ಎಂದು ಪೊಲೀಸರು ತಿಳಿಸಿದ್ದಾರೆ. 'ಸಮಾರಂಭಕ್ಕೆ ಸೆಲೆಬ್ರಿಟಿಗಳು ಬಂದಿದ್ದರಿಂದ ಅನಿರೀಕ್ಷತ ಸನ್ನಿವೇಶಗಳು ಎದುರಾಯ್ತು,' ಎಂದು ಮೈತ್ರಾ ಆಸ್ಪತ್ರೆ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.

ಕೇರಳದಲ್ಲಿ ದೇಶದ ಸುಮಾರು ಅರ್ಧದಷ್ಟು ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕ ಗಡಿ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಲ್ಲಿ ರೋಗ ಹೆಚ್ಚು ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ವೀಕೆಂಡ್ ಲಾಕ್‌ಡೌನ್‌ವಂಥ ಕ್ರಮಗಳಿಗೂ ಸರಕಾರ ಮುಂದಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?