
ಹಿಂದಿ ಚಿತ್ರರಂಗದ ಹಿರಿಯ ಕಲಾವಿದ ಅನುಪಮ್ ಶ್ಯಾಮ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬಹ ಅಂಗಾಂಗ ವೈಫಲ್ಯದಿಂದ ಅನುಪಮ್ ಶ್ಯಾಮ್ ಕೊನೆಯುಸಿರೆಳೆದಿದ್ದಾರೆ.
63 ವರ್ಷದ ಅನುಪಮ್ ಶ್ಯಾಮ್ ಅವರಿಗೆ ಕಳೆದ ವರ್ಷ ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾದ ಅವರು ಬಿಲ್ ಕಟ್ಟಲು ಒದ್ದಾಡುತ್ತಿದ್ದಾದ ಸಹೋದರ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು. ಸಿನಿ ಸ್ನೇಹಿತರು ಹಾಗೂ ಅಭಿಮಾನಿಗಳು ಸಹಾಯ ಮಾಡಿದ್ದರು. ಆ ನಂತರ ಡಯಾಲಿಸಿಸ್ ಮಾಡಿಸುತ್ತಿದ್ದರಿಂದ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದರು.
ಈ ವರ್ಷ ಆರಂಭದಲ್ಲಿ 'ಮನ್ ಕೆ ಆವಾಜ್ 2' ಧಾರಾವಾಹಿ ಚಿತ್ರೀಕರಣ ಆರಂಭಿಸಿದ ಅನುಪಮ್ ಶ್ಯಾಮ್ ಚಿತ್ರೀಕರಣದ ಸಮಯದಲ್ಲೂ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. 1993ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅನುಪಮ್ ದಸ್ತಕ್, ದಿಲ್ ಸೇ, ಗೋಲ್‌ಮಾಲ್, ಮನ್ನ ಮೈಕೇಲ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಮನ್ ಕೇ ಆವಾಜ್', ರಿಶ್ತೇ, ಕೃಷ್ಣ ಚಲೀ ಲಂಡನ್ ಸೇರಿದಂತ ಅನೇಕ ಧಾರಾವಾಹಿಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು.
ಕುಟುಂಬಸ್ತರು, ಸಿನಿ ಸ್ನೇಹಿತರು ಹಾಗೂ ಅಭಿಮಾನಿಗಳನ್ನು ಅಗಲಿರುವ ಅನುಪಮ್ ಶ್ಯಾಮ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.