ಒಬ್ಬನಿಂದ ನಂಬಿಕೆ ದ್ರೋಹ ಮತ್ತೊಬ್ಬನಿಗೆ ಜಾತಿ ಮತಾಂತ; ಹಳೆ ಲವರ್‌ಗಳ ಅಸಲಿ ಸತ್ಯ ಬಿಚ್ಚಿಟ್ಟ ನಯನತಾರ

Published : Nov 20, 2024, 05:59 PM IST
ಒಬ್ಬನಿಂದ ನಂಬಿಕೆ ದ್ರೋಹ ಮತ್ತೊಬ್ಬನಿಗೆ ಜಾತಿ ಮತಾಂತ; ಹಳೆ ಲವರ್‌ಗಳ ಅಸಲಿ ಸತ್ಯ ಬಿಚ್ಚಿಟ್ಟ ನಯನತಾರ

ಸಾರಾಂಶ

ನಯನತಾರಾ ಕೆಂಡಾಮಂಡಲವಾಗಿದ್ದಾರೆ. ಹಳೆಯ ನೋವನ್ನು ಬಿಚ್ಚಿಟ್ಟು ಬಿಟ್ಟುಹೋದ ಮಾಜಿ ಗೆಳೆಯರನ್ನು ನೆನೆದು ಕಿಡಿ ಕಾರಿದ್ದಾರೆ. ಯಾವ ಕಾರಣಕ್ಕೆ ಮುರಿದುಬಿದ್ದವು ಆ ಸಂಬಂಧ ? ಖುದ್ದು ನಯನತಾರಾ ಇದಕ್ಕೆ ಕೊಟ್ಟ ಕಾರಣವೇನು ? 

ಲೇಡಿ ಸೂಪರ್‌ಸ್ಟಾರ್ ನಯನತಾರಾ ಇಪ್ಪತ್ತು ವರ್ಷದಿಂದ ಬಣ್ಣದ ಲೋಕದಲ್ಲಿ ಮೆರೆಯುತ್ತಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಎಂದು ಕರೆಸಿಕೊಂಡಿದ್ದಾರೆ. ಈಗ ವಿಘ್ನೇಶ್ ಶಿವನ್ ಜತೆ ಸಂಸಾರ ನಡೆಸುತ್ತಿದ್ದಾರೆ. ಆದರೆ ಇದೇ ಹುಡುಗಿ ಮೊದಲು ಕಾಲಿಟ್ಟಾಗ ಸಿಂಬು ಅಲಿಯಾಸ್ ಸಿಲಂಬರಸನ್ ಜೊತೆ ನಂಟು ಬೆಳೆಸಿದ್ದರು. ಇನ್ನೇನು ಮದುವೆ ಆಗುತ್ತಾರೆಂದು ನಂಬಿದ್ದರು ಜನ. ನಾನೊಂದು ತೀರ ನೀನೊಂದು ತೀರ ಹಾಡಿಗೆ ಹೆಜ್ಜೆ ಹಾಕಿದರು. ಯಾಕೆ ಮುರಿಯಿತು ಕುಚಿಕು ಸ್ನೇಹ ?

ಪ್ರೀತಿಯಲ್ಲಿ ನಂಬಿಕೆ ಮುಖ್ಯ. ಅದು ಇದ್ದರೆ ಮಾತ್ರ ಸಂಬಂಧ ಸುಸೂತ್ರ. ಇಲ್ಲದಿದ್ದರೆ ಲೈಫು ಬರ್‌ಬಾದ್. ಹೀಗಾಗಿ ಮೊದಲ ಪ್ರೇಮ ಮುರಿಯಿತು-ನಯನತಾರಾ ಎಂದಿದ್ದರು. ನಯನತಾರಾ ಬಿಯಾಂಡ್ ದಿ ಫೇರಿಟೇಲ್...ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ಲೇಡಿ ಸೂಪರ್‌ಸ್ಟಾರ್ ಬದುಕಿನ ಕತೆ ಹರವಿಟ್ಟಿದೆ. ಇದರಲ್ಲಿ ಸಿಂಬು ಹೆಸರು ಹೇಳದೇ ನಯನ ಸತ್ಯವನ್ನು ವಿವರಿಸಿದ್ದಾರೆ. ನಂಬಿಕೆ ಇಲ್ಲದಂಥ ಕಾಯಕ ಸಿಂಬು ಏನು ಮಾಡಿದ ? ಇನ್ನೊಂದು ಹಕ್ಕಿಗೆ ಕಾಳು ಹಾಕಿದನಾ ? ಗೊತ್ತಿಲ್ಲ. ಈ ಸುದ್ದಿ ಮಾತ್ರ ಸಿಂಬು ಬುಡಕ್ಕೆ ಹೊಸ ಶಿಲಾಶಾಸನ ಕೆತ್ತಿದೆ. ಹಾಗೆಯೇ ನಟ ಪ್ರಭುದೇವಾ ಜೊತೆಗಿನ ಗೆಳೆತನಕ್ಕೆ ಕಲ್ಲು ಹಾಕಿದ್ದು ಯಾರು ಅನ್ನೋದನ್ನೂ ನಯನ ತಿಳಿಸಿದ್ದಾರೆ. 

ದರ್ಶನ್‌ಗೆ ಮಧ್ಯಂತರ ಜಾಮೀನು ಯಾಕೆ ಕ್ಯಾನ್ಸಲ್ ಮಾಡಬೇಕು?ಕೋರ್ಟ್ ಹಾದಿ ತಪ್ಪಿಸಿದ್ದು ನಿಜವೇ?

ಮದುವೆ ನಂತರ ನಟನೆ ಬಿಡಬೇಕೆಂದು ಆತ ಹೇಳಿದ. ಅದಕ್ಕೆ ನಾನು ಒಪ್ಪಿದ್ದೆ. ಮತಾಂತರ ಕೂಡ ಆಗಿದ್ದೆ. ಆದರೆ ಆತನ ಪತ್ನಿ ಈ ಮದುವೆಗೆ ಒಪ್ಪಲಿಲ್ಲ. ಆತನಿಗೆ ಡಿವೋರ್ಸ್ ಕೊಡಲಿಲ್ಲ. ನೀನು ನನ್ನ ಗಂಡನಿಂದ ಸಂಬಂಧ ಹರಿದುಕೊ ಎಂದು ಹೇಳಿದರು. ಕೊನೆಗೆ ಆ ಸಂಬಂಧ ಬರಕತ್ತಾಗಲಿಲ್ಲ-ನಯನತಾರಾ ಹೀಗೆ ಹೇಳಿದ್ದಾರೆ.

ಬಾಲಿವುಡ್‌ಗೆ ಹಾರಿದ 'ಭಜರಂಗಿ' ನಿರ್ದೇಶಕ ಎ.ಹರ್ಷ; ಟೈಗರ್ ಶ್ರಾಫ್‌ ಚಿತ್ರದ ಫಸ್ಟ್‌ ಲುಕ್

ಇದು ನೋಡಿ ನಯನತಾರಾ ಅಸಲಿ ಸತ್ಯ. ಎರಡು ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ನಂತರ ನಯನ ದಿಕ್ಕೆಟ್ಟು ಕುಂತರು. ಆಗ ಕಣ್ಣಿಗೆ ಬಿದ್ದಿದ್ದೆ ವಿಘ್ನೇಶ್ ಶಿವನ್. ಇಬ್ಬರ ನಡುವೆ ಪ್ರೀತಿ ಹುಟ್ಟಿತು. ಅದು ಮದುವೆವರೆಗೆ ಬಂದಿತು. ಈಗ ಇಬ್ಬರು ಮಕ್ಕಳ ಜೊತೆ ನಯನತಾರಾ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ನಡುವೆ ಧನುಶ್ ಹಾಕಿದ ಹತ್ತು ಕೋಟಿ ಮೊಕದ್ದಮೆಯಿಂದ ಲೈಮ್‌ಲೈಟಿಗೆ ಬಂದಿದ್ದರು. ಈಗ ಈ ವೆಬ್‌ಸೀರಿಸ್‌ ಹವಾ ಎಬ್ಬಿಸಿದೆ. ಈಕೆಯ ಬಿಚ್ಚು ಮಾತಿಗೆ ಮಾಜಿ ಪಡ್ಡೆಗಳು ಏನು ಗುಟುರು ಹಾಕುತ್ತವೋ ? ನೋಡೋಣ ಬಿಡಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!