
COVID-19 ಬಿಕ್ಕಟ್ಟಿನ ಮಧ್ಯೆ ವೆಕೇಷನ್ ಆನಂದಿಸಲು ಭಾರತವನ್ನು ಬಿಟ್ಟು ವಿದೇಶಕ್ಕೆ ಹಾರಿದ ಬಾಲಿವುಡ್ ಸ್ಟಾರ್‌ಗಳನ್ನು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಟೀಕಿಸಿದ್ದಾರೆ.
ವೆಕೇಷನ್ ಎಂಜಾಯ್ ಮಾಡುತ್ತಾ ಆ ಫೋಟೋಗಳನ್ನು ಈ ಸಂದರ್ಭ ಪೋಸ್ಟ್ ಮಾಡುತ್ತಿರುವವರ ಬಗ್ಗೆ ನಟ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳು ರಜೆಯ ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುವ ಸಮಯದಲ್ಲಿ ಜಗತ್ತು ಭೀಕರ ಆರ್ಥಿಕ ಹಿಂಜರಿತದಲ್ಲಿ ತತ್ತರಿಸುತ್ತಿದೆ. ಜನರಿಗಿಲ್ಲಿ ತಿನ್ನವುದಕ್ಕೇನಿಲ್ಲ, ನೀವು ಹಣ ಎಸೆಯುತ್ತಿದ್ದೀರಿ. ನಿಮ್ಮ ಬಗ್ಗೆ ಸ್ವಲ್ಪಾನಾದ್ರೂ ನಾಚಿಗೆ ಪಡ್ಕೊಳ್ಳಿ. ಈ ಸಂದರ್ಭ ಟ್ರಿಪ್ ಹೋಗುವುದು ಅದರ ಬಗ್ಗೆ ಆಡಂಬರದ ಪ್ರದರ್ಶಿಸುವುದು ಅಷ್ಟು ತಪ್ಪಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ತರಕಾರಿ ತರೋಕೂ PPE ಕಿಟ್ ಧರಿಸಿ ಹೋಗ್ತಾರೆ ರಾಖಿ ಸಾವಂತ್..!
ಮಾಲ್ಡೀವ್ಸ್ ಅಂದ್ರೆ ಒಂದು ಮಜಾ ಮಾಡಿಬಿಟ್ಟಿದ್ದಾರೆ. ಪ್ರವಾಸೋದ್ಯಮದೊಂದಿಗೆ ಅವರ ವ್ಯವಸ್ಥೆ ಏನು ಎಂದು ನನಗೆ ತಿಳಿದಿಲ್ಲ. ಆದರೆ ಮಾನವೀಯತೆಗಾಗಿ, ದಯವಿಟ್ಟು ಈ ರಜಾದಿನಗಳನ್ನು ನಿವೇ ಇಡ್ಕೊಳ್ಳಿ. ಎಲ್ಲೆಡೆ ಸಂಕಟವಿದೆ. COVID ಪ್ರಕರಣಗಳು ಹೆಚ್ಚಾಗ್ತಿದೆ. ಹೃದಯವಂತಿಕೆ ತೋರಿಸಿ. ದಯವಿಟ್ಟು ಬಳಲುತ್ತಿರುವವರನ್ನು ಕೆಣಕಬೇಡಿ, ಎಂದು ಅವರು ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಬಿ-ಟೌನ್ ತಾರೆಗಳಾದ ಮಾಧುರಿ ದೀಕ್ಷಿತ್, ದಿಶಾ ಪಟಾನಿ, ಆಲಿಯಾ ಭಟ್, ಶ್ರದ್ಧಾ ಕಪೂರ್, ರಣಬೀರ್ ಕಪೂರ್ ಮತ್ತು ಟೈಗರ್ ಶ್ರಾಫ್ ಇತರರು ಕೊವಿಡ್ -19 ಹಿನ್ನೆಲೆ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ವಿಧಿಸಿರುವ ಕಾರಣ ಮಾಲ್ಡೀವ್ಸ್‌ಗೆ ತೆರಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.