ಸಹಾಯ ಬೇಡಿ ಮೆಸೇಜ್‌ ಮಾಡುವವರಿಗೆ 'ಆಗುವುದಿಲ್ಲ' ಎಂದ ನಟ ನವದೀಪ್!

Suvarna News   | Asianet News
Published : Apr 24, 2021, 11:43 AM ISTUpdated : Apr 24, 2021, 12:20 PM IST
ಸಹಾಯ ಬೇಡಿ ಮೆಸೇಜ್‌ ಮಾಡುವವರಿಗೆ 'ಆಗುವುದಿಲ್ಲ' ಎಂದ ನಟ ನವದೀಪ್!

ಸಾರಾಂಶ

ಸಹಾಯ ಬೇಕೆಂದು ಮೆಸೇಜ್ ಮಾಡುತ್ತಿರುವ ಜನರಿಗೆ ಸ್ಟೇಟಸ್‌ ಮೂಲಕ ಉತ್ತರ ನೀಡಿರುವ ನಟ ನವದೀಪ್. ಸಹಾಯ ಮಾಡಲು ಆಗುವುದಿಲ್ಲ. ಯಾಕೆ ಗೊತ್ತಾ?   

ತೆಲುಗು ಚಿತ್ರರಂಗದ ಹ್ಯಾಂಡ್ಸಮ್‌ ನಟ ನವದೀಪ್‌ ಕಳೆದು ಕೊರೋನಾ ಲಾಕ್‌ಡೌನ್‌ ವೇಳೆ ತಂಡವೊಂದನ್ನು ಕಟ್ಟಿಕೊಂಡು, ಸಂಕಷ್ಟದಲ್ಲಿದ್ದ ಜನರಿಗೆ ಸಹಯಾ ಮಾಡಿದ್ದಾರೆ. ಫುಡ್‌ ಕಿಡ್ ಹಾಗೂ ಸಣ್ಣಪುಟ್ಟ ಅಗತ್ಯ ವಸ್ತುಗಳನ್ನು ವಿತರಿಸಿದ್ದರು. ಆದರೆ ಈ ಬಾರಿಯೂ ಸಹಾಯ ಬೇಡಿ, ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದವರಿಗೆ ನಟ ನೇರವಾಗಿ ಉತ್ತರ ನೀಡಿದ್ದಾರೆ. 

ನಟನಾಗಿ, ನಿರೂಪಕನಾಗುವುದಕ್ಕೆ ಈ ಆಟೋ ಡ್ರೈವರ್ ಕಾರಣ ಎಂದ ನವದೀಪ್! 

'ನನ್ನ ಮನಸಿಗೆ ನೋವಾಗುತ್ತಿದೆ. ಹಣ ಹಾಗೂ ಔಷಧಿ ಸಹಾಯ ಬೇಡಿ, ಅನೇಕರು ಮೆಸೇಜ್ ಮಾಡಿದ್ದೀರಿ. ಆದರೆ ಸಾರಿ ನನಗೆ ಸಹಾಯ ಮಾಡಲು ಆಗುವುದಿಲ್ಲ.ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಈಗ ಆಫ್‌ ಸೆಂಟರ್ ಆಗಿದೆ.  #Stayout #3lakhcases'ಎಂದು ನವದೀಪ್ ಬರೆದುಕೊಂಡಿದ್ದಾರೆ.  ಇದರ ಅರ್ಥ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮಗಳು  ಸೂಕ್ತವಾಗಿಲ್ಲ ಎಂದಿದ್ದಾರೆ. 'ಸರ್ ನೀವು ಸಹಾಯ ಮಾಡಿಲ್ಲ ಅಂದೂ ಪರ್ವಗಿಲ್ಲ. ಏಕೆಂದರೆ ನೀವು ಅಲ್ಪಸ್ವಲ್ಪ ಸಿನಿಮಾ ಮಾಡಿ ಸಂಪಾದಿಸಿರುವ ಹಣದಿಂದ ಕಳೆದ ಬಾರಿ ದೊಡ್ಡ ಸಹಾಯ ಮಾಡಿದ್ದೀರಿ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಕೆಲವು ವರ್ಷಗಳ ಹಿಂದೆ ನವದೀಪ್‌ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದರು. ಆದರೆ ಅವಕಾಶಗಳು ಕಡಿಮೆ ಆಗುತ್ತಿದ್ದಂತೆ, ನವದೀಪ್ ಚಿತ್ರರಂಗದಿಂದ ದೂರ ಉಳಿದರು. ಆದರೀಗ ವಿಲನ್‌ ಮತ್ತ ಹೀರೋ ಸ್ನೇಹಿತನ ಪಾತ್ರದ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ತೆಲುಗಿನ ಟಿವಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!