ಮಕ್ಕಳಿಗೆ ಕೊರೋನಾ ಬಂದ್ರೇನು ಮಾಡಬೇಕು?; ನಟಿ ಸಮೀರಾ ರೆಡ್ಡಿ ಶೇರ್ ಮಾಡಿದ ವಿಡಿಯೋ!

By Suvarna NewsFirst Published Apr 23, 2021, 5:00 PM IST
Highlights

ನಟಿ ಸಮೀರಾ ರೆಡ್ಡಿ ಕುಟುಂಬ ಕೊರೋನಾ ಸೋಂಕಿಗೆ ತುತ್ತಾಗಿದೆ. ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಇರುವ ಕಾರಣ ವೈದ್ಯರ ಜೊತೆ ಮಾತನಾಡಿ, ಇನ್ನಿತರ ಮಕ್ಕಳಿಗೆ ಸಹಾಯವಾಗುವಂತೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 

ಬಹುಭಾಷಾ ನಟಿ ಸಮೀರಾ ರೆಡ್ಡಿ ಕೆಲವು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ಬಂದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿ ಕೊಂಡರು. ತಮ್ಮ ಇಬ್ಬರು ಪುಟ್ಟ ಮಕ್ಕಳಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಾಗ ಸಮೀರಾ ಗಾಬರಿಯಾಗಿದ್ದಾರೆ. ತಕ್ಷಣವೇ ತಮ್ಮ ಫ್ಯಾಮಿಲಿ ಡಾಕ್ಟರ್‌ಗೆ ಕರೆ ಮಾಡಿ, ಸಲಹೆ ಪಡೆದುಕೊಂಡಿದ್ದಾರೆ. ತನ್ನಂತೆ ಅದೆಷ್ಟೋ ತಾಯಂದಿರು ಮಕ್ಕಳಿಗೆ ಕೊರೋನಾ ಎಂದು ತಿಳಿದರೆ ಗಾಬರಿ ಅಗುತ್ತಾರೆ. ಅವರಿಗೆ ವೈದ್ಯರ ಮಾತು ಧೈರ್ಯ ನೀಡುತ್ತದೆ ಹಾಗೂ ಸಲಹೆಗಳನ್ನು ಪಾಲಿಸಲು ಸುಲಭವಾಗಲಿ, ಎಂದು ವಿಡಿಯೋ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಸಮೀರಾ ನೆಟ್ಟಿಗರಿಗೆ ಮಕ್ಕಳಿಗೆ ಕೋವಿಡ್‌19 ಬಂದರೇನು ಮಾಡಬೇಕೆಂದು ಪ್ರಶ್ನಿಸಿದ್ದರು. ನೆಟ್ಟಿಗರೂ ಕೇಳಿದ ಪ್ರಶ್ನೆಗಳನ್ನು ಕಲೆ ಹಾಕಿ, ವೈದ್ಯರಿಗೆ ಕೇಳಿದ್ದಾರೆ. ನೆಟ್ಟಿಗರ ಪ್ರಶ್ನೆಗೆ ಡಾ. ನಿಹಾರ್ ಪಾರಿಕ್ ಉತ್ತರಿಸಿದ್ದಾರೆ. ಮಕ್ಕಳಲ್ಲಿ ಕೋವಿಡ್‌19 ಕಾಣಿಸಿಕೊಳ್ಳುವ ಲಕ್ಷಣಗಳು ಏನು? ಕೋವಿಡ್‌ ಪಾಸಿಟಿವ್ ಬಂದಿರುವ ಮಕ್ಕಳ ತಾಯಂದಿರು ಮಗುವಿಗೆ ಹಾಲು ನೀಡಬಹುದಾ? ತಾಯಂದಿರು ಪಾಸಿಟಿವ್ ಬಂದರೆ ಮಕ್ಕಳಿಂದ ಹೇಗೆ ಐಸೋಲೇಟ್ ಆಗಬೇಕು? ಯಾವ ರೀತಿಯ ವಿಟಮಿನ್ ಹಾಗೂ ಡಯಟ್‌ ಅನ್ನು ಮಕ್ಕಳು ಪಾಲೀಸಬೇಕು? ಮಕ್ಕಳಿಗೆ ಬಿಸಿ ನೀರು ಶಾಖಾ ಎಷ್ಟು ಮುಖ್ಯ? ಈಗಿನ ಪರಿಸ್ಥಿತಿಯಲ್ಲಿ ಮಕ್ಕಳನ್ನು ಜೋಪಾನ ಮಾಡುವುದು ಹೇಗೆ? ಎಂಬ ಪ್ರಶ್ನೆಗೆ ಸಮೀರಾ ಡಾಕ್ಟರ್ ಬಳಿ ಉತ್ತರ ಪಡೆದುಕೊಂಡಿದ್ದಾರೆ. ಈ ಆರ್ಟಿಕಲ್ ಕೊನೆಯಲ್ಲಿ ವಿಡಿಯೋ ಎಂಬೇಡ್‌ ಮಾಡಲಾಗಿದೆ.

ಕಿಚ್ಚನಿಗೆ ಜೋಡಿಯಾಗಿದ್ದ ನಟಿ ಸಮೀರಾಗೆ ಕೊರೋನಾ ಪಾಸಿಟಿವ್ 

ಸಮೀರಾ ರೆಡ್ಡಿ ಅತಿ ಹೆಚ್ಚಾಗಿ ತಮ್ಮ ಅತ್ತೆ ಜೊತೆ 'Sassy Sasu' ವಿಡಿಯೋಗಳನ್ನು ಮಾಡುತ್ತಿದ್ದರು. ದೇವರ ದಯೆ ಸಾಕುಗೆ ಕೋವಿಡ್‌19 ನೆಗೆಟಿವ್ ಎಂದು ತಿಳಿದು ಬಂದಿದೆ. ' ನಾನು, ಪತಿ ಅಕ್ಷಯ್  ಮತ್ತು ಮಕ್ಕಳು ಪಾಸಿಟಿವ್ ಬಂದ ಕಾರಣ ಮನೆಯಲ್ಲಿ ಐಸೋಲೇಟ್ ಅಗಿದ್ದೀವಿ. ವೈದ್ಯರು ನೀಡಿದ ಔಷಧಿ ಹಾಗೂ ಬಿಸಿ ನೀರಿನ ಹಬೆ ತೆಗೆದುಕೊಳ್ಳುತ್ತಿರುವೆವು.  ಪೌಷ್ಠಿಕ ಆಹಾರ ಹಾಗೂ ವ್ಯಾಯಾಮ ಮಾಡುತ್ತಿದ್ದೇವೆ. ಈ ಸಮಯದಲ್ಲಿ ನೆಗೆಟಿವ್ ವಿಚಾರಗಳಿಂದ ದೂರ ಉಳಿಯಬೇಕು. ಪಾಸಿಟಿವ್ ಆಗಿರೋಣ,' ಎಂದು ಸಮೀರಾ ಬರೆದುಕೊಂಡಿದ್ದಾರೆ.

 

click me!