ಬಡತನದಿಂದ ಬಾಲಿವುಡ್‌ಗೆ ಬಂದ ಯುವಕನ ಕಥೆ ಇದು. ವಾಚ್‌ಮನ್ ಆಗಿ ಕೆಲಸ ಮಾಡಿ, ತರಕಾರಿ ಮಾರಾಟ ಮಾಡಿ, ಕೆಮಿಸ್ಟ್ ಆಗಿ ದುಡಿದು- ಹೀಗೆ ಥರಾವರಿ ಕೆಲಸಗಳಲ್ಲಿ ಗಳಿಸಿದ ಅಭಿನಯದಿಂದ ನಟನೆಯಲ್ಲಿ ಛಾಪು ಮೂಡಿಸಿದ ಈತ ಇಂದು ಜಾಗತಿಕ ಬೇಡಿಕೆಯ ನಟನೂ ಹೌದು.
ಈ ಬಾಲಿವುಡ್ ನಟ ಒಂದು ಕಾಲದಲ್ಲಿ ಮಾಡಿಲ್ಲದ ಉದ್ಯೋಗವೇ ಇಲ್ಲ. ತೀರಾ ಬಡತನದ ಹಿನ್ನೆಲೆಯಿಂದ ಬಂದ ಇವನು ವಾಚ್‌ಮನ್ ಕೆಲಸವನ್ನೂ ಮಾಡಿದ್ದಾನೆ. ಬಾಲಿವುಡ್‌ನಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಈತ ಬಹಳ ಹೆಣಗಾಡಬೇಕಾಯಿತು. ಇವನೇ ನವಾಜುದ್ದೀನ್ ಸಿದ್ದಿಕಿ. ಉತ್ತರ ಪ್ರದೇಶದ ಬುಧಾನಾದಲ್ಲಿ ಬಡ ರೈತ ಕುಟುಂಬದಲ್ಲಿ ಜನಿಸಿದ ನವಾಜುದ್ದೀನ್, ಬಡತನೊಂದಿಗೆ, ಕಠಿಣ ಪರಿಶ್ರಮದ ಮೌಲ್ಯವನ್ನು ಅರ್ಥಮಾಡಿಕೊಂಡು ಬೆಳೆದ. ನಿರ್ಬಂಧಗಳ ಹೊರತಾಗಿಯೂ ನಟನೆಯ ಬಗ್ಗೆ ಆಳವಾದ ಆಸಕ್ತಿಯನ್ನು ಬೆಳೆಸಿಕೊಂಡ. ಬಾಲಿವುಡ್‌ಗೆ ಹೋಗುವುದು ಅವನ ಕನಸಾಗಿತ್ತು. ಆದರೆ ಅದು ದೂರ ಮತ್ತು ಅಸಂಭವವೆಂದೇ ಕಂಡಿತ್ತು. ಆತನ ಆರಂಭಿಕ ವರ್ಷಗಳು ಆ ಕನಸನ್ನು ಜೀವಂತವಾಗಿಟ್ಟುಕೊಳ್ಳುವುದರ ಜೊತೆಗೆ ಜೀವನ ಸಾಗಿಸುವ ಹೋರಾಟವೂ ಸೇರಿಕೊಂಡಿತ್ತು.
ಬಾಲಿವುಡ್ ಸೇರುವ ಮೊದಲು ನವಾಜುದ್ದೀನ್ ಬದುಕಲು ವಿವಿಧ ಕೆಲಸಗಳಲ್ಲಿ ತೊಡಗಿದ. ದೆಹಲಿಯಲ್ಲಿ ಸೆಕ್ಯುರಿಟಿ ವಾಚ್‌ಮನ್ ಆಗಿ ಕೆಲಸ ಮಾಡಿದ. ವಡೋದರಾದಲ್ಲಿ ಕೆಮಿಸ್ಟ್ ಆಗಿ ದುಡಿದ. ಮುಂಬೈಗೆ ಬಂದ. ಅಲ್ಲಿ ತರಕಾರಿ ಮಾರಾಟ ಮಾಡಿದ. ನಿಧಾನವಾಗಿ ಬೆಳೆದು ನಟನಾ ಕಾರ್ಯಾಗಾರಗಳನ್ನು ನಡೆಸುವವರೆಗೆ ಬೆಳೆದ. ಬಾಲಿವುಡ್‌ನ ಸಣ್ಣ ಪಾತ್ರಗಳಿಗೆ ಆಡಿಷನ್‌ಗೆ ಕರೆ ಬಂತು. ಕೆಲವೆಡೆ ನಿರಾಕರಣೆಗಳೂ ಬಂದವು. ಆದರೆ ಆತ ಎಲ್ಲದರಿಂದ ಕಲಿಯುತ್ತಾ ಬೆಳೆಯುತ್ತಾ ಹೋದ.
ಬಾಲಿವುಡ್‌ಗೆ ಪ್ರವೇಶಿಸುವುದು ಸುಲಭವಲ್ಲ. ನವಾಜುದ್ದೀನ್ ತನ್ನ ಅಷ್ಟೊಂದು ಸುಂದರನಲ್ಲದ ನೋಟ ಮತ್ತು ಬಾಲಿವುಡ್ ಸಂಪರ್ಕಗಳ ಕೊರತೆಯಿಂದಾಗಿ ಹಲವಾರು ನಿರಾಕರಣೆಗಳನ್ನು ಎದುರಿಸಿದ. ನೂರಕ್ಕೂ ಹೆಚ್ಚು ಪಾತ್ರಗಳಿಗೆ ಆಡಿಷನ್ ಮಾಡಿದರು. ಆಗಾಗ್ಗೆ ಎಕ್ಸ್‌ಟ್ರಾ ಪಾತ್ರಗಳಲ್ಲಿ ಅಥವಾ ಬಂದು ಹೋಗುವ ಪಾತ್ರಗಳಲ್ಲಿ ನಟಿಸುತ್ತಿದ್ದ. ಸರ್ಫರೋಷ್ (1999) ಮತ್ತು ಶೂಲ್ (1999) ನಂತಹ ಚಲನಚಿತ್ರಗಳಲ್ಲಿನ ಅವರ ಆರಂಭಿಕ ಅಭಿನಯ ಹೆಚ್ಚಾಗಿ ಗಮನಕ್ಕೆ ಬಾರದೆ ಹೋಯಿತು. ಆದರೆ ನವಾಜ್ ಹೋರಾಟ ಬಿಟ್ಟುಕೊಡಲಿಲ್ಲ.
ನವಾಜುದ್ದೀನ್ ಅಭಿನಯಿಸಿದ 'ಗ್ಯಾಂಗ್ಸ್ ಆಫ್ ವಾಸ್ಸೇಪುರ್' (2012) ಚಿತ್ರದಲ್ಲಿ ಅವರ ಫೈಜಲ್ ಖಾನ್ ಪಾತ್ರ ಯಾರೂ ಮರೆಯಲಾಗದಂತಿತ್ತು. ಅವರ ತೀವ್ರ ಅಭಿನಯ ಮತ್ತು ಕಚ್ಚಾ ಉಪಸ್ಥಿತಿಯು ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಆಕರ್ಷಿಸಿತು. ಇದರ ನಂತರ ಅವನು ಕಹಾನಿ (2012), ದಿ ಲಂಚ್‌ಬಾಕ್ಸ್ (2013) ಮತ್ತು ಮಾಂಝಿ: ದಿ ಮೌಂಟೇನ್ ಮ್ಯಾನ್ (2015) ಚಿತ್ರಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ. ತನ್ನ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ. ಬಾಲಿವುಡ್‌ನ ಅತ್ಯುತ್ತಮ ನಟರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ.
ಇದು ಭಾರತದ ಬಿಗ್ ಬಜೆಟ್ ಸಿನಿಮಾ, ವಿಷ್ಣುವರ್ಧನ್, ಹಾಲಿವುಡ್ ನಟಿ ಸೇರಿ ಹಲವರಿದ್ದರೂ ಫಿಲ್ಮ್ ಅರ್ಧಕ್ಕೆ ಸ್ಟಾಪ್
ನವಾಜುದ್ದೀನ್ ಪ್ರತಿಭೆ ಬಾಲಿವುಡ್ ಅನ್ನು ಮೀರಿ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅವನಿಗೆ ಮನ್ನಣೆ ತಂದಿತು. ಸೇಕ್ರೆಡ್ ಗೇಮ್ಸ್ (2018) ಮತ್ತು ಮಾಂಟೊ (2018) ಚಿತ್ರಗಳಲ್ಲಿನ ಅವನ ಅಭಿನಯವು ಸಂಕೀರ್ಣ ಪಾತ್ರಗಳಿಗೆ ಜೀವ ತುಂಬುವ ಅವನ ಸಾಮರ್ಥ್ಯವನ್ನು ಮತ್ತಷ್ಟು ಪ್ರದರ್ಶಿಸಿತು. ಎಕ್ಸ್‌ಟ್ರಾ ಪಾತ್ರಗಳಿಂದ ಜಾಗತಿಕವಾಗಿ ಮೆಚ್ಚುಗೆ ಪಡೆದ ನಟನಾಗುವ ವರೆಗಿನ ಅವನ ಪ್ರಯಾಣ ಅವನ ಪರಿಶ್ರಮ, ಪ್ರತಿಭೆ ಮತ್ತು ಹಠಕ್ಕೆ ಹಿಡಿದ ಕೈಗನ್ನಡಿ. ಇಂದು ನವಾಜುದ್ದೀನ್ ಸಿದ್ದಿಕಿ ಕೇವಲ ಪ್ರಸಿದ್ಧ ನಟನಲ್ಲ, ಬಡ ಹಿನ್ನೆಲೆಯಿಂದ ಬರುವ ಮಹತ್ವಾಕಾಂಕ್ಷಿ ಕಲಾವಿದರಿಗೆ ಸ್ಫೂರ್ತಿಯೂ ಹೌದು. ಪ್ರತಿಭೆ ಮತ್ತು ದೃಢಸಂಕಲ್ಪವು ಅಡೆತಡೆಗಳನ್ನು ಮೀರಿ ಅಸಾಧಾರಣ ಯಶಸ್ಸನ್ನು ತರಬಹುದು ಎಂಬುದನ್ನು ಅವರ ಕಥೆ ನೆನಪಿಸುತ್ತದೆ.
ಒಂದು ರಾತ್ರಿಯೂ ಪತಿ ಸೈಫ್ ನನ್ನ ಜೊತೆ ಇರಲಿಲ್ಲ, ಕರೀನಾ ಕಪೂರ್ ಹೀಗಂದಿದ್ದೇಕೆ?