ಭಾರತದ ಬಿಗ್ ಬಟೆಟ್ ಸಿನಿಮಾ ಇದಾಗಿತ್ತು. ರಜನಿಕಾಂತ್, ಅಮಿತಾಬ್ ಬಚ್ಚನ್ ಈ ಸಿನಿಮಾ ತಿರಸ್ಕರಿಸಿದ ಬಳಿಕ ಮತ್ತೊಬ್ಬ ಸ್ಟಾರ್ ನಟ ಪ್ರಮುಖ ಪಾತ್ರದಲ್ಲಿದ್ದರೆ, ನಟ ವಿಷ್ಣುವರ್ಧನ್, ಹಾಲಿವುಡ್ ನಟಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿದ್ದರು. ಆದರೆ ಈ ಸಿನಿಮಾ ದಿಢೀರ್ ಅರ್ಧಕ್ಕೆ ನಿಂತಿದ್ದೇಕೆ?
ಮುಂಬೈ(ಏ.03) ಭಾರತೀಯ ಸಿನಿಮಾದಲ್ಲಿ ಇದೀಗ ದುಬಾರಿ ವೆಚ್ಚದ ಸಿನಿಮಾಗಳು ನಿರ್ಮಾಣವಾಗುತ್ತಿದೆ. 300 ಕೋಟಿ, 600 ಕೋಟಿ ಸೇರಿದಂತೆ ಅತೀ ದುಬಾರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿ ಬಳಿಕ ಸಾವಿರ ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಬಾಹುಬಲಿ, ಕೆಜಿಎಫ್, ಪುಷ್ಪಾ2 ಸೇರಿದಂತೆ ಹಲವು ಸಿನಿಮಾಗಳು ಈ ಸಾಲಿಗೆ ಸೇರಿದೆ. ಆದರೆ ಇವೆಲ್ಲವನ್ನೂ ಮೀರಿಸುವ ಭಾರತದ ಅತೀ ದೊಡ್ಡ ಬಜೆಟ್ ಸಿನಿಮಾ 1997ರಲ್ಲೇ ಸೆಟ್ಟೇರಿತ್ತು. ಕಮಲ್ ಹಾಸನ್ ನಾಯಕ ನಟನಾಗಿದ್ದರೆ, ಈ ಸಿನಿಮಾದಲ್ಲಿ ಸಾಹಸ ಸಿಂಹ ವಿಷ್ಮುವರ್ಧನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಹಾಲಿವುಡ್ ನಟಿ ಕೇಟ್ ವಿನ್‌ಸ್ಲೆಟ್ ಕೂಡ ಪ್ರಮುಖ ಪಾತ್ರದಲ್ಲಿದ್ದರು. ಆದರೆ ಈ ಸಿನಿಮಾ ಅರ್ಧಕ್ಕೆ ನಿಂತು ಬಿಟ್ಟಿತ್ತು. ಬಳಿಕ ಈ ಸಿನಿಮಾ ಅದೇನು ಮಾಡಿದರೂ ಪೂರ್ಣಗೊಳ್ಳಲೇ ಇಲ್ಲ.
ಮರುಧನಯಾಗಂ ಸಿನಿಮಾ
ಈ ಸಿನಿಮಾ ಹೆಸರು ಮರುಧನಯಾಗಂ. ಸ್ವಾತಂತ್ರ ವೀರ ಹೋರಾಟಗಾರನ ಕುರಿತು ಕತೆ ಇದಾಗಿತ್ತು. ಭಾರತ, ಫ್ರೆಂಚ್ ಹಾಗೂ ಬ್ರಿಟೀಷ್ ಕಂಪನಿ ಈ ಸಿನಿಮಾ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿತ್ತು. ಹೀಗಾಗಿ ಇದು 90ರ ದಶಕದ ಅತೀ ದೊಡ್ಡ ಬಜೆಟ್ ಸಿನಿಮಾ. ಹಾಲಿವುಡ್ ಸಿನಿಮಾ ನಟಿ, ಭಾರತದ ಪ್ರಮುಖ ಸಿನಿಮಾ ನಟ ನಟಿಯರು ಈ ಸಿನಿಮಾದಲ್ಲಿ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಇವರ ಸಂಭಾವನೆ, ಹಾಲಿವುಡ್ ತಂತ್ರಜ್ಞರ ನರೆವು, ಗ್ರಾಫಿಕ್ಸ್ ಸೇರಿದಂತೆ ಹಲವು ಕಾರಣಗಳಿಂದ ಇದು ಅತೀ ದೊಡ್ಡ ಬಜೆಟ್ ಸಿನಿಮಾ ಆಗಿತ್ತು. ಇದರ ಮುಂದೆ ಬಾಹುಬಲಿ ಸೇರಿದಂತೆ ಇತರ ಸಿನಿಮಾಗಳು ಲೆಕ್ಕಕ್ಕೇ ಇರಲಿಲ್ಲ. ಆದರೆ ಈ ಮರುಧನಯಾಗಂ ಸಿನಿಮಾ ನಿರ್ಮಾಣ ಹಂತದಲ್ಲಿ ನಿಂತು ಹೋಯಿತು.
ಒಂದು ರಾತ್ರಿಯೂ ಪತಿ ಸೈಫ್ ನನ್ನ ಜೊತೆ ಇರಲಿಲ್ಲ, ಕರೀನಾ ಕಪೂರ್ ಹೀಗಂದಿದ್ದೇಕೆ?
ಮೊದಲು ಈ ಸಿನಿಮಾವನ್ನು ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್‌ಗೆ ಆಫರ್ ಮಾಡಲಾಗಿತ್ತು. ಇಬ್ಬರು ಡೇಟ್ ಹೊಂದಿಕೆಯಾಗಲಿಲ್ಲ. ಇದರ ಜೊತೆಗ ಇಬ್ಬರೂ ಈ ಸಿನಿಮಾದಲ್ಲಿ ಪಾತ್ರ ನಿಭಾಯಿಸಲು ನಿರಾಸಕ್ತಿ ತೋರಿದ್ದರು. ಹೀಗಾಗಿ ಕಮಲ್ ಹಾಸನ್‌ಗೆ ಈ ಸಿನಿಮಾ ಆಫರ್ ಮಾಡಲಾಯಿತು. ಕಮಲ್ ಹಸನ್ ಈ ಸಿನಿಮಾ ಒಪ್ಪಿಕೊಂಡಿದ್ದರು. ಈ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಮ್ಮ ಸಾಹಸ ಸಿಂಹ ವಿಷ್ಮುವರ್ಧನ್ ಕೂಡ ಇದ್ದರು. ಇನ್ನು ಸತ್ಯರಾಜ್ ಸೇರಿದಂತೆ ಹಲವು ಪ್ರಮುಖರು ಈ ಸಿನಿಮಾದಲ್ಲಿ ಪಾತ್ರ ನಿಭಾಯಿಸಿದ್ದರು.
ಟೈಟಾನಿಕ್ ನಟಿ
1997ರಲ್ಲಿ ಈ ಸಿನಿಮಾ ಸೆಟ್ಟೇರಿತ್ತು. ಇದರ ಆರಂಭಿಕ ಬಜೆಟ್ 85 ಕೋಟಿ ರೂಪಾಯಿ. 90ರ ದಶಕದಲ್ಲಿ 85 ಕೋಟಿ ರೂಪಾಯಿ ಈಗನ ಸಾವಿರ ಕೋಟಿ ರೂಪಾಯಿಗೂ ಮೇಲು. ಟೈಟಾನಿಕ್ ಸಿನಿಮಾ ಹೀರೋಯಿನ್ ಕೇಟ್ ವಿನ್‌ಸ್ಲೆಟ್ ಈ ಸಿನಿಮಾದಲ್ಲಿ ಪಾತ್ರ ಮಾಡಲು ಆಫರ್ ಮಾಡಲಾಗಿತ್ತು. ಆದರೆ ಕೇಟ್ ವಿನ್‌ಸ್ಲೆಟ್ ಈ ಸಿನಿಮಾ ತರಿಸ್ಕರಿಸಿದ್ದರು. ಕೇಟ್ ಬದಲು ಮತ್ತೊಬ್ಬ ಹಾಲಿವುಡ್ ಸಿನಿಮಾ ನಟಿಯನ್ನು ಆಯ್ಕೆ ಮಾಡಲು ಪ್ಲಾನ್ ನಡೆದಿತ್ತು.
ನ್ಯೂಕ್ಲಿಯರ್ ಪರೀಕ್ಷೆ ಸಂಕಷ್ಟ
ಈ ಸಿನಿಮಾ 1997ರಲ್ಲಿ ಸೆಟ್ಟೇರಿತ್ತು. ಶೂಟಿಂಗ್ ಸೇರಿದಂತೆ ಹಲವು ಕೆಲಸಗಳು ಆರಂಭಗೊಂಡಿತ್ತು. ಆದರೆ 1998ರಲ್ಲಿ ಭಾರತ ನ್ಯೂಕ್ಲಿಯರ್ ಪರೀಕ್ಷೆ ನಡೆಸಿತ್ತು. ಇದು ಬ್ರಿಟಿಷ್ ಪ್ರೊಡಕ್ಷನ್ ಹೌಸ್ ಆಕ್ರೋಶಕ್ಕೆ ಗುರಿಯಾಗಿತ್ತು. ಹೀಗಾಗಿ ಬ್ರಿಟಿಷ್ ಪ್ರೊಡಕ್ಷನ್ ಹೌಸ್ ಚಿತ್ರ ನಿರ್ಮಾಣದಿಂದ ಹಿಂದೆ ಸರಿಯಿತು. ಇದರ ಬೆನ್ನಲ್ಲೇ ಫ್ರೆಂಚ್ ಕೂಡ ಹಿಂದೆ ಸರಿದಿತ್ತು. ಹೀಗಾಗಿ ಈ ಸಿನಿಮಾ ಅರ್ದಕ್ಕೆ ನಿಂತಿತ್ತು. 90ರ ದಶಕದಲ್ಲಿ ಭಾರತ ಏಕಾಂಗಿಯಾಗಿ ಈ ಸಿನಿಮಾ ನಿರ್ಮಾಣ ಮಾಡುವ ಸಾಹಸಕ್ಕೆ ಇಳಿಯಲಿಲ್ಲ.
ಮುಂದೂಡಿದ್ರಾ ರಿಷಬ್ ಶೆಟ್ಟಿ ಕಾಂತಾರಾ 1 ಬಿಡುಗಡೆ ? ಚಿತ್ರತಂಡದಿಂದ ಮಹತ್ವದ ಅಪ್‌ಡೇಟ್