ಆಸ್ಕರ್ ಗೆದ್ದ ಬಳಿಕ ಹೈದರಾಬಾದ್‌ಗೆ ಬಂದಿಳಿದ ಜೂ.ಎನ್‌ಟಿಆರ್‌ಗೆ ಅದ್ದೂರಿ ಸ್ವಾಗತ; RRR ಸ್ಟಾರ್ ಹೇಳಿದ್ದೇನು?

By Shruthi KrishnaFirst Published Mar 15, 2023, 10:59 AM IST
Highlights

ಪ್ರತಿಷ್ಠಿತ ಆಸ್ಕರ್ ಗೆದ್ದ ಬಳಿಕ ಜೂ.ಎನ್ ಟಿ ಆರ್ ಭಾರತಕ್ಕೆ ವಾಪಾಸ್ ಆಗಿದ್ದಾರೆ. ತುಂಬಾ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ. 

ಆಸ್ಕರ್ 2023 ಸಮಾರಂಭದಲ್ಲಿ 'ಆರ್ ಆರ್ ಆರ್' ತಂಡ ಭಾಗಿಯಾಗಿತ್ತು. ನಾಟು ನಾಟು ಹಾಡಿಗೆ ಆಸ್ಕರ್ ಗೆದ್ದ ಬಳಿಕ ಜೂ.ಎನ್ ಟಿ ಆರ್ ಹೈದಬಾರಾದ್‌ಗೆ  ವಾಪಾಸ್ ಆಗಿದ್ದಾರೆ. ಜೂ.ಎನ್ ಟಿ ಆರ್ ಜೊತೆ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಕೂಡ ಭಾರತಕ್ಕೆ ಬಂದಿದ್ದಾರೆ. ಇಂದು (ಮಾರ್ಚ್ 15) ಬೆಳಗ್ಗೆ ಹೈದರಾಬಾದ್ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ವಿಮಾನ ನಿಲ್ದಾಣದಿಂದ ಹೊರಬಂದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಜೂ.ಎನ್ ಟಿ ಆರ್ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು. ಪ್ರತಿಷ್ಠಿತ ಆಸ್ಕರ್ ಗೆದ್ದ ಸಂಭ್ರಮದಲ್ಲಿರುವ ಆರ್ ಆರ್ ಆರ್ ತಂಡಕ್ಕೆ ಅಭಿಮಾನಿಗಳು, ಸಿನಿಮಾ ಗಣ್ಯರು, ರಾಜಕೀಯ ವ್ಯಕ್ತಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. 

ಸಂತಸದಿಂದ ಭಾರತಕ್ಕೆ ಬಂದಿಳಿದ ಜೂ.ಎನ್ ಟಿ ಆರ್, 'ನಾನು ತುಂಬಾ ಹೆಮ್ಮೆ ಪಡುತ್ತೇನೆ. ಬೆಂಬಲಿಸಿದ ಪ್ರತಿಯೊಬ್ಬ ಭಾರತೀಯನಿಗೆ ಧನ್ಯವಾದಗಳು.  ಇದು ಸಾದ್ಯವಾಗಿದ್ದು ಅಭಿಮಾನಿಗಳು ಮತ್ತು ಚಿತ್ರರಂಗದ ಪ್ರೀತಿಯಿಂದ ಮಾತ್ರ.' ಎಂದು ಹೇಳಿದರು. ಇನ್ನು ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಮಾತನಾಡಿ,  'ಪ್ರಶಸ್ತಿ ಸ್ವೀಕರಿಸಿದ ನಂತರ ಕೀರವಾಣಿ ಸರ್ ಮತ್ತು ಚಂದ್ರಬೋಸ್ ಸರ್ ಹೊರಬಂದರು. ಕೀರವಾಣಿ ಸರ್ ನನ್ನನ್ನು ತಬ್ಬಿಕೊಂಡರು. ಆ ಕ್ಷಣ ವಿವರಿಸಲು ಸಾಧ್ಯವಿಲ್ಲ. ಆರ್‌ಆರ್‌ಆರ್ ಮತ್ತು ನಾಟು ನಾಟನ್ನು ತುಂಬಾ ಪ್ರೀತಿಸಿದ್ದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಹೇಳಿದರು.

ಆಸ್ಕರ್‌ಗೆ ರಾಮ್ ಚರಣ್-ಉಪಾಸನಾ ರೆಡಿಯಾಗಿದ್ದು ಹೇಗೆ? ದೇವರಿಗೆ ನಮಸ್ಕರಿಸಿ ಹೊರಟ ವಿಡಿಯೋ ವೈರಲ್

ಇಬ್ಬರೂ ಹೈದರಾಬಾದ್‌ಗೆ  ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮತ್ತು ಮಾಧ್ಯಮ ಅವರನ್ನು ಮುತ್ತುವರೆದಿತ್ತು. ಅವರಿಗೆ ಅಭಿನಂದನೆ ಸಲ್ಲಿಸಿದರು, ಸೆಲ್ಫಿ ಕ್ಲಿಕ್ಕಿಕೊಂಡು ಸಂಭ್ರಮಿಸಿದರು. ಜಾಗತಿನ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಕ್ಕಣ್ಣ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆರ್ ಆರ್ ಆರ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್‌ಗಳಾದ ಅಲಿಯಾ ಭಟ್, ಅಜಯ್ ದೇವಗನ್ ಕೂಡ ನಟಿಸಿದ್ದಾರೆ.

| Telangana: RRR Actor Jr NTR arrived at the Rajiv Gandhi International Airport in Hyderabad.

'Naatu Naatu' song from RRR won the for the Best Original Song pic.twitter.com/f5zGfnyk7m

— ANI (@ANI)

ಆಸ್ಕರ್ ಗೆದ್ದ ಬಳಿಕ ಉಕ್ರೇನ್‌ಗೆ ಧನ್ಯವಾದ ತಿಳಿಸಿ ರಾಜಮೌಳಿ ಹೇಳಿದ್ದೇನು?

ಆಸ್ಕರ್ ಗೆದ್ದುಕೊಂಡಿರುವು ನಾಟು ನಾಟು ಹಾಡಿಗೆ ಎಂ ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದ್ರಬೋಷ್ ಸಾಹಿತ್ಯದಲ್ಲಿ ರಚಿಸಿದ್ದಾರೆ. ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನ ಈ ಹಾಡಿಗಿದೆ. ಕಾಲ ಭೈರವ್ ಮತ್ತು ರಾಹುಲ್ ಸಿಪ್ಲಿಗುಂಜ್ ಧ್ವನಿ ನೀಡಿದ್ದಾರೆ. ಸದ್ಯ ಜೂ.ಎನ್ ಟಿ ಆರ್ ಆಗಮಿಸಿದ್ದಾರೆ. ಇನ್ನೂ ರಾಮ್ ಚರಣ್, ಕೀರವಾಣಿ ಹಾಗೂ ರಾಜಮೌಳಿ ಯಾವಾಗ ಹೈದರಾಬಾದ್‌ಗೆ ಬಂದಿಳಿಯುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯದಲ್ಲೇ ಎಲ್ಲರೂ ಭಾರತಕ್ಕೆ ಮರಳಲಿದ್ದಾರೆ. 

click me!