ಆಸ್ಕರ್ ವೇದಿಕೆಯಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಡಾನ್ಸ್ ಯಾಕೆ ಮಾಡಿಲ್ಲ ಎಂದು ಆಸ್ಕರ್ ನಿರ್ಮಾಪಕ ರಾಜ್ ಕಪೂರ್ ಬಹಿರಂಗ ಪಡಿಸಿದ್ದಾರೆ.
ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಹೆಜ್ಜೆ ಹಾಕಿದ್ದ ನಾಟು ನಾಟು ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆರ್ ಆರ್ ಆರ್ ಸಿನಿಮಾ ಇದೀಗ ಜಾಗತಿನ ಮಟ್ಟದಲ್ಲಿ ಸ್ದದು ಮಾಡುತ್ತಿದೆ. ರಾಮ್ ಚರಣ್, ಜೂ.ಎನ್ ಟಿ ಆರ್ ನಟನೆ, ರಾಜಮೌಳಿ ನಿರ್ದೇಶನ ಎಲ್ಲರ ಮೆಚ್ಚುಗೆ ಪಡೆದಿದೆ. ನಾಟು ನಾಟು ಆಸ್ಕರ್‌ಗೆ ನಾಮನಿರ್ದೇಶನಗೊಳ್ಳುತ್ತಿದ್ದಂತೆ ಆರ್ ಆರ್ ಆರ್ ತಂಡ ಹಾಗೂ ಭಾರತೀಯ ಸಿನಿ ಪ್ರೇಕ್ಷಕರಲ್ಲಿ ಸಂತಸ ತಂದಿದ್ದು. ಇದೀಗ ಆರ್ ಆರ್ ಆರ್ ಆಸ್ಕರ್ ಗೆದ್ದು ಬೀಗತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. ಆಸ್ಕರ್ ವೇದಿಕೆಯಲ್ಲಿ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಪ್ರದರ್ಶನ ನೀಡಬೇಕಿತ್ತು. ಇಬ್ಬರೂ ಡಾನ್ಸ್ ಮಾಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅದು ನಡೆದಿಲ್ಲ.
ರಾಮ್ ಮತ್ತು ಜೂ.ಎನ್ ಟಿ ಆರ್ ಇಬ್ಬರೂ ಆಸ್ಕರ್ ವೇದಿಕೆಯಲ್ಲಿ ಡಾನ್ಸ್ ಮಾಡಬೇಕಿತ್ತು, ಲೈವ್ ಪ್ರದರ್ಶನ ನೀಡಬೇಕಿತ್ತು ಎಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ನಿರ್ಮಾಪಕರಲ್ಲಿ ಒಬ್ಬರಾಗಿರುವ ರಾಜ್ ಕಪೂರ್ ಹೇಳಿದ್ದಾರೆ. ಇಬ್ಬರೂ ಅನೇಕ ಕಾರಣಕ್ಕೆ ಪ್ರದ್ರಶನದಿಂದ ಹಿಂದೆ ಸರಿದರು ಎಂದು ಬಹಿರಂಗ ಪಡಿಸಿದ್ದಾರೆ. ಆರಂಭದಲ್ಲಿ ನಾಟು ನಾಟು ಮೂಲ ಗಾಯಕರಾದ ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಲೈವ್ ಆಗಿ ಹಾಡುವುದು ಅದಕ್ಕೆ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಡಾನ್ಸ್ ಮಾಡುವುದು ಎಂದು ಪ್ಲಾನ್ ಮಾಡಲಾಗಿತ್ತು. ಆದರೆ ಕೊನೆಯಲ್ಲಿ ಗಾಯಕರು ಮಾತ್ರ ಪ್ರದರ್ಶನ ನೀಡಿದರು.
ಹಿಟ್ ಮಷಿನ್ ಎಸ್‌ಎಸ್ ರಾಜಮೌಳಿ; ಇದುವರೆಗೂ ಒಂದು ಸಿನಿಮಾವು ಸೋತಿಲ್ಲ!
ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಇಬ್ಬರೂ ಪ್ರತಿಷ್ಠಿತ ವೇದಿಕೆಯಲ್ಲಿ ಡಾನ್ಸ್ ಮಾಡಲು ಆರಾಮದಾಯಕವಾಗಿರದ ಕಾರಣ ಪ್ರದರ್ಶನ ನೀಡಿಲ್ಲ ಎಂದು ರಾಜ್ ಕಪೂರ್ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಾಜ್ ಕಪೂರ್, 'ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಬೈರವ ಗಾಯಕರ ಜೊತೆ ಇವರಿಬ್ಬರೂ ಪ್ರದರ್ಶನ ನೀಡಬೇಕಿತ್ತು. ಪ್ರದರ್ಶನದ ಭಾಗವಾಗವಾದರೆ ತಂಡಕ್ಕೆ ಸುರಕ್ಷಿತ ವೀಸ ವ್ಯವಸ್ಥೆಗೆ ಸಹಾಯವಾಗುತ್ತಿದೆ. ಎಂ ಎಂ ಕೀರವಾಣಿ ಹೇಳಿದ ಬಳಿಕ ನಾವು ರಾತ್ರೋರಾತ್ರಿ ಭಾರತದ ಮತ್ತು ಲಾಸ್ ಏಂಜಲೀಸ್‌ನಲ್ಲಿರುವ ಕೋರಿಯೋಗ್ರಾಫರ್‌ಗಳಿಗೆ ಕರೆ ಮಾಡಿ ಮಾತನಾಡಿದೆವು. ನಾವು ಕಾಸ್ಟಿಂಗ್ ಆಯ್ಕೆಗಳು, ವಸ್ತ್ರ ವಿನ್ಯಾಸ ಮತ್ತು ಭಾರತದ ತಂಡದೊಂದಿಗೆ ಸ್ಟೇಜ್ ರೆಂಡರಿಂಗ್ ಎಲ್ಲವೂ ಸಿದ್ಧಮಾಡಿಕೊಂಡೆವು' ಎಂದು ಹೇಳಿದರು.
ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಇಬ್ಬರೂ ಆಸ್ಕರ್‌ನಲ್ಲಿ ಹಾಜರಾಗುತ್ತಾರೆ ಎನ್ನುವುದು ಫೆಬ್ರವರಿಯಲ್ಲಿ ಗೊತ್ತಾಯಿತು. ಆಗ ಅವರು ಸ್ಟೇಜ್ ಮೇಲೆ ಲೈವ್ ಪ್ರದರ್ಶನ ನೀಡಲು ಆರಾಮದಾಯಕವಾಗಿಲ್ಲ ಎಂದರು. ಹಾಗೂ ಇತರ ವೃತ್ತಿಪರ ಬದ್ಧತೆಗಳಿಂದಾಗಿ ಇಬ್ಬರೂ ಡಾನ್ಸ್ ಮಾಡಿಲ್ಲ'ಎಂದು ಬಹಿರಂಗ ಪಡಿಸಿದರು.
RRR: ನಾಟು ನಾಟು..ಆಸ್ಕರ್ ಗೆದ್ದಾಗ ಭಾವುಕರಾದ ದೀಪಿಕಾ ಪಡುಕೋಣೆ, ವಿಡಿಯೋ ವೈರಲ್
'ಆಸ್ಕರ್ ವೇದಿಕೆಯಲ್ಲಿ ಲೈವ್ ಪ್ರದರ್ಶನಕ್ಕಾಗಿ ಸಿಕ್ಕಾಪಟ್ಟೆ ತಯಾರಿ ಮಾಡಿಕೊಳ್ಳಲಾಗಿದೆ. ಲಾಸ್ ಎಂಜಲೀಸ್ ನಲ್ಲಿ ವೃತ್ತಿಪರ ನೃತ್ಯಗಾರರೊಂದಿಗೆ ಒಟ್ಟಿ 18 ಗಂಟೆ ಪೂರ್ವ ಅಭ್ಯಾಸ ಮಾಡಲಾಗಿದೆ' ಎಂದು ಹೇಳಿದರು.