ಕನ್ನಡದ 'ಕಂದೀಲು' ಸೇರಿ National Film Award ಪ್ರದಾನ: 30 ವರ್ಷ ಬಳಿಕ Shahrukh Khanಗೆ ಒಲಿದ ಪ್ರಶಸ್ತಿ

Published : Sep 23, 2025, 07:07 PM IST
71st National Film Award function

ಸಾರಾಂಶ

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದ 'ಕಂದೀಲು: ದಿ ರೇ ಆಫ್‌ ಹೋಪ್' ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಇದೇ ವೇಳೆ, ನಟ ಶಾರುಖ್ ಖಾನ್ ತಮ್ಮ 30 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದರು.

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (National Film Award) ಪ್ರದಾನ ಸಮಾರಂಭ ಇಂದು ನಡೆದಿದ್ದು, ಕನ್ನಡ ಸಿನಿಮಾ ಕಂದೀಲು: ದಿ ರೇ ಆಫ್‌ ಹೋಪ್ (Kandilu the ray of hope movie kannada) ಚಿತ್ರ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. 2023ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಿತ್ರಗಳು, ನಟರು, ನಿರ್ದೇಶಕರು ಹಾಗೂ ತಾಂತ್ರಿಕ ಕಲಾವಿದರನ್ನ ಗುರುತಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನ ಪ್ರದಾನ ಮಾಡಿದರು. ಇದೇ ವೇಳೆ, 2023ರ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ ಲಾಲ್‌ ಅವರಿಗೆ ನೀಡಿ ಗೌರವಿಸಲಾಯಿತು.

ಕಂದೀಲು: ದಿ ರೇ ಆಫ್‌ ಹೋಪ್

ಕಂದೀಲು: ದಿ ರೇ ಆಫ್‌ ಹೋಪ್ ಚಿತ್ರಕ್ಕಾಗಿ ನಿರ್ಮಾಪಕ ಪ್ರಕಾಶ್‌ ಕರಿಯಪ್ಪ ಹಾಗೂ ನಿರ್ದೇಶಕಿ ಯಶೋಧಾ ಪ್ರಕಾಶ್‌ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಉಳಿದಂತೆ, ನಟ ಶಾರುಖ್​ ಖಾನ್​ ಅವರಿಗೆ ಈ ಪ್ರಶಸ್ತಿಯು ಜೀವಮಾನದಲ್ಲಿಯೇ ಅವಿಸ್ಮರಣೀಯವಾಗಿದೆ. ಇದಕ್ಕೆ ಕಾರಣ, ಅವರ 30 ವರ್ಷಗಳ ಈ ಸಿನಿ ಜರ್ನಿಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಫಿಲ್ಮ್​ ಅವಾರ್ಡ್​ ಪಡೆದುಕೊಂಡಿರುವುದು. ‘King’ ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶದಲ್ಲಿ ಇದ್ದ ಶಾರುಖ್ ಖಾನ್, 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ವಿಶೇಷವಾಗಿ ದೆಹಲಿಗೆ ವಿಮಾನದಲ್ಲಿ ಮರಳಿದರು. ‘ಕಿಂಗ್’ ಚಿತ್ರದಲ್ಲಿ, ಶಾರುಖ್ ತಮ್ಮ ಮಗಳು ಸುಹಾನಾ ಅವರೊಂದಿಗೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಶಸ್ತಿಗಳು ಹೀಗಿವೆ...

ಇನ್ನು ಪ್ರಶಸ್ತಿಯ ಕುರಿತು ಹೇಳುವುದಾದರೆ, ಅತ್ಯುತ್ತಮ ನಟ ಪ್ರಶಸ್ತಿಯನ್ನು Shah Rukh Khan ಜೊತೆಗೆ 12th ಫೇಲ್​ ಸಿನಿಮಾಕ್ಕಾಗಿ ವಿಕ್ರಾಂತ್ ಮೆಸ್ಸಿ ಅವರಿಗೂ ಲಭಿಸಿದೆ. ಈ ಮೂಲಕ ಈ ಬಾರಿ ಇಬ್ಬರು ನಟರು ಅತ್ಯುತ್ತಮ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಇನ್ನು Mrs ಚಟರ್ಜಿ ವರ್ಸ್ ನಾರ್ವೆ ಸಿನಿಮಾದಲ್ಲಿನ ಅಭಿನಯಕ್ಕೆ ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

71ನೇ ನ್ಯಾಷನಲ್ ಫಿಲ್ಮ್ ಪ್ರಶಸ್ತಿ ಲಿಸ್ಟ್:

ಅತ್ಯುತ್ತಮ ಕನ್ನಡ ಸಿನಿಮಾ: ಕಂದೀಲು

ಅತ್ಯುತ್ತಮ ಹಿಂದಿ ಸಿನಿಮಾ: ಕಥಲ್

ಅತ್ಯುತ್ತಮ ತೆಲುಗು ಸಿನಿಮಾ: ಭಾಗ್ಯಶ್ರಿ ಕೇಸರಿ

ಉತ್ಯುತ್ತಮ ತಮಿಳು ಸಿನಿಮಾ: ಪಾರ್ಕಿಂಗ್

ಅತ್ಯುತ್ತಮ ಪಂಜಾಬಿ ಸಿನಿಮಾ:ಗುಡ್ಡೆ ಗುಡ್ಡೆ ಚಾ

ಅತ್ಯುತ್ತಮ ಮರಾಠಿ ಸಿನಿಮಾ: ಶ್ಯಾಮ್ಚಿ ಆಯಿಬೆಸ್ಟ್

ಅತ್ಯುತ್ತಮ ಮಲೆಯಾಳಂ ಸಿನಿಮಾ: ಉಲ್ಲೋಝೋಕುಬೆಸ್ಟ್

ಅತ್ಯುತ್ತಮ ಬಂಗಾಳಿ ಸಿನಿಮಾ: ಡೀಪ್ ಫ್ರಿಡ್ಜ್

ಉತ್ತಮ ಆ್ಯಕ್ಷನ್ ಡೈರೆಕ್ಷನ್ : ಹುನು ಮಾನ್ (ತೆಲುಗು)

ಉತ್ತಮ ಕೊರಿಯೋಗ್ರಾಫಿ: ರಾಕಿ ಔರ್ ರಾನಿ ಕಾ ಪ್ರೇಮ್ ಕಹಾನಿ

ಉತ್ತಮ ಲಿರಿಕ್ಸ್ : ಬಲಗಾಮ್

ಉತ್ತಮ ಮ್ಯೂಸಿಕ್ ಡೈರೆಕ್ಷನ್ : ಜಿವಿ ಪ್ರಕಾಶ್ ವಾಥಿ (ತಮಿಳು), ಹರ್ಷವರ್ಧನ್ ರಾಮೇಶ್ವರ್ (ಆ್ಯನಿಮಲ್)

ಉತ್ತಮ ಮೇಕ್ ಅಪ್ ಕಾಸ್ಟೂಮ್ ಡಿಸೈನರ್ : ಶ್ರೀಕಾಂತ್ ದೇಸಾಯಿ ( ಸ್ಯಾಮ್ ಬಹದ್ದೂರ್)

ಉತ್ತಮ ಪ್ರೊಡಕ್ಷನ್ ಡಿಸೈನರ್: ಎವ್ರಿ ಒನ್ ಈಸ್ ಹಿರೋ (ಮಲೆಯಾಳಂ)

ಉತ್ತಮ ಸಿನಿಮಾಟೋಗ್ರಫಿ: ಪ್ರಶಾಂತ್ ಮೋಹಪಾತ್ರ ( ಕೇರಳ ಸ್ಟೋರಿ (ಹಿಂದಿ)

ಉತ್ತಮ ಹಿನ್ನಲೆ ಗಾಯಕ: ರೋಹಿತ್ ( ಬೇಬಿ )

ಉತ್ತಮ ಹಿನ್ನಲೆ ಗಾಯಕಿ: ಶಿಲ್ಪಾ ರಾವ್ ( ಜವಾನ್)

ಉತ್ತಮ ಪೋಷಕ ಕಲಾವಿದ: ಪೂಕಳಂ

ಉತ್ತಮ ಡಾಕ್ಯುಮೆಂಟರಿ ಸಿನಿಮಾ: ಗಾಡ್ ವಲ್ಚರ್ ಆ್ಯಂಡ್ ಹ್ಯೂಮನ್

ಬೆಸ್ಟ್ ಆರ್ಟ್-ಕಲ್ಚರ್ ಸಿನಿಮಾ: ಟೈಮ್‌ಲೆಸ್ (ತಮಿಳು)

ಉತ್ತಮ ಪದಾರ್ಪಣಾ ಸಿನಿಮಾ: ದಿ ಸ್ಪಿರಿಟ್ ಡ್ರೀಮ್ಸ್ ಆಫ್ಸ್ ಚೆರ್ವಾ

ಬೆಸ್ಟ್ ನಾನ್ ಫಿಕ್ಷನ್ ಸಿನಿಮಾ : ಫ್ಲವರಿಂಗ್ ಮ್ಯಾನ್

ಬೆಸ್ಟ್ ಸೌಂಡ್ ಡಿಸೈನ್ : ಸಚಿನ್ ಸುಧಾಕರನ್, ಹರಿಹರನ್ (ಆ್ಯನಿಮಲ್)

ಬೆಸ್ಟ್ ಸ್ಕ್ರೀನ್‌ಪ್ಲೇ : ಸಾಯಿ ರಾಜೇಶ್ (ಬೇಬಿ ) ರಾಮ್‌ಕುಮಾರ್ ಬಾಲಕೃಷ್ಣ (ಪಾರ್ಕಿಂಗ್)

ಬೆಸ್ಟ್ ಡೈಲಾಗ್ : ದೀಪಕ್ ಕಿಂಗ್ರಾಣಿ (ಸಿರ್ಫ್ ಎಕ್ ಬಂಧಾ ಕಾಫಿ ಹೇ)
 

ಇದನ್ನೂ ಓದಿ: ಗೌರಿಯನ್ನು ಮದ್ವೆಯಾಗಲು ಜೀತೇಂದ್ರ ಕುಮಾರ್​ ಎಂದು ಹೆಸರಿಟ್ಟುಕೊಂಡಿದ್ದ Shah rukh Khan!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!