
'ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಹೆಚ್ಚಿದ ನಿರೀಕ್ಷೆ
ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ (Rishab Shetty) ಮುಂಬರುವ ಸಿನಿಮಾ 'ಛತ್ರಪತಿ ಶಿವಾಜಿ ಮಹಾರಾಜ್' (Chhatrapati Shivaji Maharaj) ಟೀಮ್‌ನಿಂದ ಹೊಸ ಸುದ್ದಿ ಹೊರಬಿದ್ದಿದೆ. ಈಗಾಗಲೇ ಭಾರೀ ನಿರೀಕ್ಷೆ ಸೃಷ್ಟಿಸಿರುವ ಈ ಚಿತ್ರದ ತಂತ್ರಜ್ಞರ ತಂಡಕ್ಕೆ ಇನ್ನೂ ಇಬ್ಬರು ಮಹಾನ್ ಪ್ರತಿಭೆಗಳು ಸೇರಿಕೊಂಡಿದ್ದಾರೆ. ಅವರು ಅಂತಿಂಥವರಲ್ಲ, ನ್ಯಾಷನಲ್ ಅವಾರ್ಡ್ ಪಡೆದಿರುವ ದಿಗ್ಗಜರು.
ಹೌದು, ಕಾಂತಾರ (Kantara) ಸಿನಿಮಾ ಮೂಲಕ ಜಾಗತಿಕವಾಗಿ ಹೆಸರು ಮಾಡಿ, ಪ್ಯಾನ್ ಇಂಡಿಯಾ ನಟರಾಗಿರುವ ಕನ್ನಡದ ರಿಷಬ್ ಶೆಟ್ಟಿಯವರ ಮುಂಬರುವ ಸಿನಿಮಾ 'ಛತ್ರಪತಿ ಶಿವಾಜಿ ಮಹಾರಾಜ್'. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ವಿಜೇತ ಅಮಿತ್ ತ್ರಿವೇದಿ ಸಂಗೀತ (Amit Trivedi) ಸಂಯೋಜನೆ ಮಾಡಲಿದ್ದಾರೆ. ಅಷ್ಟೇ ಅಲ್ಲ, ಇನ್ನೊಬ್ಬರು ರಾಷ್ಟ್ರ ಪ್ರಶಸ್ತಿ ವಿಜೇತ ಮಹಾನ್ ಪ್ರತಿಭೆ ಸಾಹಿತಿ ಪ್ರಸೂನ್ ಜೋಶಿ (Prasoon Joshi) ಅವರು ಚಿತ್ರದ ಹಾಡುಗಳನ್ನು ಬರೆಯಲಿದ್ದಾರೆ. ಈ ಮೂಲಕ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಇಬ್ಬರು ಈ ತಂಡಕ್ಕೆ ಸೇರಿದ್ದು, ರಿಷಬ್ ಶೆಟ್ಟಿಯವರ ಮುಂದಿನ ಸಿನಿಮಾಗೆ ಭಾರೀ ಹೈಪ್ ಕ್ರಿಯೇಟ್ ಆಗಿದೆ.
'ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕರು. ಜೊತೆಗೆ, ಮುಖ್ಯ ಭೂಮಿಕೆಯಲ್ಲಿ ನಟರಾದ ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂದೀಪ್ ಸಿಂಗ್ (Sandeep Singh) ನಿರ್ದೇಶನದ ಈ ಮಹತ್ವಾಕಾಂಕ್ಷೆಯ 'ಛತ್ರಪತಿ ಶಿವಾಜಿ ಮಹಾರಾಜ್' ಐತಿಹಾಸಿಕ ಬೃಹತ್ ಚಿತ್ರವು ಎರಡು ಭಾಗಗಳಲ್ಲಿ ಮೂಡಿ ಬರಲಿದೆ. ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಪ್ರೀತಮ್ ಅವರ ಮುಖ್ಯವಾಹಿನಿಯ ಚಿತ್ರಗಳಿಂದ ವಿರಾಮ ಪಡೆದ ನಂತರ, ಅಮಿತ್ ತ್ರಿವೇದಿ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ, ರಿಷಬ್ ಶೆಟ್ಟಿಯವರ ಮುಂಬರುವ ಐತಿಹಾಸಿಕ ಬೃಹತ್ ಚಿತ್ರ 'ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾ ಭಾರೀ ಭರವಸೆ ಹಾಗೂ ನಿರೀಕ್ಷೆ ಮೂಡಿಸಿದೆ. ನ್ಯಾಷನಲ್ ಅವಾರ್ಡ್ ವಿನ್ನರ್ಸ್ ಈ ಚಿತ್ರಕ್ಕೆ ಬಂದಿರುವ ಸಂಗತಿ ಸೋಷಿಯಲ್ ಮೀಡಿಯಾಗಳಲ್ಲಿ ಈ ಚಿತ್ರದ ಬಗ್ಗೆ ಹೊಸ ಸಂಚಲನ ಸೃಷ್ಟಿಸಿದೆ. ಅಂದಹಾಗೆ, ಈ ವಿಷಯವನ್ನು ತರಣ್ ಆದರ್ಶ್ ಅವರು ತಮ್ಮ ಎಕ್ಸ್ (X) ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.