
ಸಮಂತಾ ಸೀಕ್ರೆಟ್ ಹೇಳಿದ ಸ್ನೇಹಿತೆ, ನಿರ್ದೇಶಕಿ ನಂದಿನಿ ರೆಡ್ಡಿ!
ಸೌತ್ ಸಿನಿಮಾ ಇಂಡಸ್ಟ್ರಿಯ 'ಅಪ್ರತಿಮ ಸುಂದರಿ', ಕೋಟ್ಯಂತರ ಅಭಿಮಾನಿಗಳ ಹೃದಯದ ಮಿಡಿತ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಬದುಕು ಇಂದು ಒಂದು ಹೋರಾಟದ ಕಥೆಯ ಜೊತೆಗೆ ಸ್ಫೂರ್ತಿಯ ಸೆಲೆಯೂ ಆಗಿದೆ ಎನ್ನಬಹುದು. ಗ್ಲಾಮರ್ ಲುಕ್, ಪ್ರತಿಭೆ ಮಾತ್ರವಲ್ಲದೆ, ಜೀವನದ ಅಗ್ನಿಪರೀಕ್ಷೆಯಲ್ಲೂ ಗೆದ್ದು ಬಂದಿರುವ ಈ ನಟಿಯ ಕುರಿತು ಒಂದು ರೋಚಕ 'ಸಕ್ಸಸ್ ಸ್ಟೋರಿ' ಇಲ್ಲಿದೆ ನೋಡಿ!
ಸಮಂತಾ 'ಮ್ಯಾಜಿಕ್'
'ಏ ಮಾಯ ಚೇಸಾವೆ' ಚಿತ್ರದ ಮೂಲಕ ತೆಲುಗು ಬೆಳ್ಳಿತೆರೆಯಲ್ಲಿ ಮಾಯೆ ಮಾಡಿದ ಸಮಂತಾ, ಅಂದಿನಿಂದ ಇಂದಿನವರೆಗೂ ತಮ್ಮ ಬೇಡಿಕೆ ಕಳೆದುಕೊಳ್ಳದೇ ನಾಯಕಿಯಾಗಿಯೇ ಮೆರೆಯುತ್ತಿದ್ದಾರೆ. ಕೆರಿಯರ್‌ನಲ್ಲಿ ಸಿಕ್ಕ ಅಭೂತಪೂರ್ವ ಗೆಲುವು ಒಂದೆಡೆಯಾದರೆ, ಜೀವನ ಅವರಿಗೆ ನೀಡಿದ ಆಘಾತಗಳು ಮತ್ತೊಂದೆಡೆ. ಆದರೂ ಏನೇ ಆದರೂ ನಟಿ ಸಮಂತಾ ಸೋಲೊಪ್ಪಲಿಲ್ಲ!
ಚಿತ್ರರಂಗದಲ್ಲಿ ಉತ್ತುಂಗದ ಶಿಖರಲ್ಲಿದ್ದಾಗಲೇ ಸಮಂತಾ ಅವರಿಗೆ 'ಮಯೋಸೈಟಿಸ್' ಎಂಬ ಆಟೋ ಇಮ್ಯೂನ್ ಸಮಸ್ಯೆ ಕಾಡಿತು. ದೇಹದ ಸ್ನಾಯುಗಳ ಮೇಲೆ ದಾಳಿ ಮಾಡುವ ಈ ಕಾಯಿಲೆ ಸಮಂತಾ ಅವರನ್ನು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಕುಗ್ಗಿಸಲು ಪ್ರಯತ್ನಿಸಿತು. ಆದರೆ, ಸಮಂತಾ ಕುಗ್ಗಲೇ ಇಲ್ಲ. ಈ ಕಾಯಿಲೆಯನ್ನು ಹತೋಟಿಯಲ್ಲಿಡಲು, ತಮ್ಮ ವೃತ್ತಿಜೀವನ ಕಾಪಾಡಿಕೊಳ್ಳಲು ಈ ನಟಿ ಮಾಡುತ್ತಿರುವ ತ್ಯಾಗ ಕೇಳಿದರೆ ಕಣ್ಣೀರು ಬರುತ್ತದೆ.
ಉಪ್ಪಿಲ್ಲದ ಊಟ, ರುಚಿಯಿಲ್ಲದ ತಿಂಡಿ; : ಗೆಳತಿ ನಂದಿನಿ ರೆಡ್ಡಿ ಬಿಚ್ಚಿಟ್ಟರು ರಹಸ್ಯ!
ಸಮಂತಾ ಅವರ ಆಪ್ತ ಗೆಳತಿ ಹಾಗೂ ನಿರ್ದೇಶಕಿ ನಂದಿನಿ ರೆಡ್ಡಿ ಅವರು ಇತ್ತೀಚೆಗೆ ಸಮಂತಾ ಅವರ ಶಿಸ್ತಿನ ಬಗ್ಗೆ ಕೆಲವು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. "ನೋಡಲು ನಗುಮುಖದ ಸುಂದರಿಯಂತೆ ಕಾಣುವ ಸಮಂತಾ, ಕಳೆದೆರಡು ವರ್ಷಗಳಿಂದ ಮಯೋಸೈಟಿಸ್ ಎದುರಿಸಲು ಅತ್ಯಂತ ಕಠಿಣ ಜೀವನಶೈಲಿ ಅಳವಡಿಸಿಕೊಂಡಿದ್ದಾರೆ. ಆರೋಗ್ಯಕ್ಕಾಗಿ ಅವರು ಉಪ್ಪಿಲ್ಲದ ಮತ್ತು ಯಾವುದೇ ರುಚಿಯಿಲ್ಲದ ಆಹಾರವನ್ನು ಮಾತ್ರ ಸೇವಿಸುತ್ತಿದ್ದಾರೆ. ನಾಲಿಗೆಯ ರುಚಿಗಿಂತ ಆರೋಗ್ಯವೇ ಮುಖ್ಯ ಎಂದು ಅರಿತು ಅವರು ಪಾಲಿಸುತ್ತಿರುವ ಶಿಸ್ತು ನಿಜಕ್ಕೂ ಪ್ರಶಂಸನೀಯ" ಎಂದು ನಂದಿನಿ ಹೇಳಿದ್ದಾರೆ. ಜೀವನಪರ್ಯಂತ ಇಂತಹ ನಿಯಮಗಳನ್ನು ಪಾಲಿಸುವುದು ಸಾಮಾನ್ಯ ಮನುಷ್ಯರಿಗೆ ಅಸಾಧ್ಯದ ಮಾತು!
'ಮಾ ಇಂಟಿ ಬಂಗಾರಂ' ಚಿತ್ರದ ಶೂಟಿಂಗ್ ವೇಳೆ ಸಮಂತಾರ ವೃತ್ತಿಪರತೆ, ಬದ್ಧತೆ ಕಂಡು ಇಡೀ ಚಿತ್ರತಂಡವೇ ದಂಗಾಗಿತ್ತು. ಸಾಮಾನ್ಯವಾಗಿ ಸಾಹಸ ದೃಶ್ಯಗಳಿಗೆ ಸ್ಟಂಟ್ ಡ್ಯೂಪ್‌ಗಳನ್ನು ಬಳಸಲಾಗುತ್ತದೆ. ಆದರೆ, ಕ್ಲೈಮ್ಯಾಕ್ಸ್‌ನ ಕಠಿಣ ಆಕ್ಷನ್ ದೃಶ್ಯಗಳಲ್ಲಿ ಸಮಂತಾ "ನನಗೆ ಡ್ಯೂಪ್ ಬೇಡ, ನಾನೇ ಸ್ವತಃ ಮಾಡುತ್ತೇನೆ" ಎಂದು ಪಟ್ಟು ಹಿಡಿದು ಆಕ್ಷನ್ ಸನ್ನಿವೇಶಗಳನ್ನು ಮಾಡಿದ್ದಾರಂತೆ. ಅನಾರೋಗ್ಯದ ನಡುವೆಯೂ ಸಮಂತಾ ತೋರಿಸಿದ ಈ ಧೈರ್ಯಕ್ಕೆ ನಿರ್ದೇಶಕಿ ನಂದಿನಿ ರೆಡ್ಡಿ ಫಿದಾ ಆಗಿದ್ದಾರೆ.
ಬಾಕ್ಸ್ ಆಫೀಸ್ ಧೂಳಿಪಟ: 75 ಕೋಟಿಯ ಬ್ಲಾಕ್‌ಬಸ್ಟರ್!
ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ 75 ಕೋಟಿ ರೂಪಾಯಿಗೂ ಅಧಿಕ ಗಳಿಸುವ ಮೂಲಕ ಸಮಂತಾ ಅವರ ಮಾರುಕಟ್ಟೆ ಮೌಲ್ಯವನ್ನು ಸಾಬೀತುಪಡಿಸಿದೆ. ಈಗಲೂ ವೃತ್ತಿಜೀವನದಲ್ಲಿ ಸಕ್ಸಸ್ ಕಾಣುತ್ತಿರುವ ಸಮಂತಾ, ಇತ್ತೀಚೆಗೆ ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಹಂಚಿಕೊಂಡಿದ್ದು, ಸದ್ಯ ಜೀವನದ ಅತ್ಯಂತ ಸುಂದರ ಕ್ಷಣಗಳನ್ನು ಸಹ ಸಂಭ್ರಮಿಸುತ್ತಿದ್ದಾರೆ. ಸಾಲು ಸಾಲು ಸಂಕಷ್ಟಗಳ ನಡುವೆಯೂ ಫೀನಿಕ್ಸ್‌ನಂತೆ ಎದ್ದು ಬಂದಿರುವ ಸಮಂತಾ, ಇಂದು ಸಿನಿಮಾ ರಂಗದ 'ಮ್ಯಾಜಿಕ್ ಹೀರೋಯಿನ್' ಎನ್ನಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.