ಪಾಕ್ ಸಿಂಧಿ ಭಾಷೆ ಬಗ್ಗೆ ಕಾಮೆಂಟ್: ವಿವಾದ ಬಳಿಕ ಕ್ಷಮೆ ಕೇಳಿದ ನಾಸಿರುದ್ದೀನ್ ಶಾಗೆ ಪಾಕ್ ನಟ ಹೇಳಿದ್ದೇನು?

By Shruthi KrishnaFirst Published Jun 10, 2023, 2:22 PM IST
Highlights

ಪಾಕ್ ಸಿಂಧಿ ಭಾಷೆ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ನಟ ನಾಸಿರುದ್ದೀನ್ ಶಾ ಕ್ಷಮೆ ಕೇಳಿದ್ದಾರೆ. ಹಿರಿಯ ನಟ ಬಗ್ಗೆ ಪಾಕ್ ನಟ ಅದ್ನಾನ್ ಸಿದ್ದಕಿ ಪ್ರತಿಕ್ರಿಯೆ ನೀಡಿದ್ದಾರೆ. 

ಪಾಕಿಸ್ತಾನದಲ್ಲಿ ಸಿಂಧಿ ಬಾಷೆ ಮಾತನಾಡಲ್ಲ ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ ಈಗ ಬೇಷರತ್ ಕ್ಷಮೆ ಕೇಳಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾಸಿರುದ್ದೀನ್ ಶಾ ಪಾಕ್ ಭಾಷೆ ಬಗ್ಗೆ ಮಾತನಾಡಿದ್ದರು. ನಾಸಿರುದ್ದೀನ್ ಶಾ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದರು. ಇದೀಗ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ನಾಸಿರುದ್ದೀನ್ ಶಾ ಕ್ಷಮೆ ಕೇಳಿದ ಬಳಿಕ ಪಾಕ್ ನಟ ಅದ್ನಾನ್ ಸಿದ್ದಿಕಿ ಶ್ಲಾಘಿಸಿದ್ದಾರೆ.

 ನಾಸಿರುದ್ದೀನ್ ಶಾ ಸ್ಪಷ್ಟನೆ

Latest Videos

ತನ್ನ  ಫೇಸ್‌ಬುಕ್‌ನಲ್ಲಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ನಾಸಿರುದ್ದೀನ್ ಶಾ,  ಸಿಂಧಿ ಮತ್ತು ಮರಾಠಿ ಭಾಷೆಗಳ ಬಗ್ಗೆ ಹೇಳಿದ್ದ ಮಾತುಗಳು ಅನಗತ್ಯ ವಿವಾದಗಳಿಗೆ ಹೇಗೆ ಕಾರಣವಾಯಿತು ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದಾರೆ. 'ನಾನು ಇತ್ತೀಚೆಗೆ ಹೇಳಿದ ಮಾತು ಎರಡು ಸಂಪೂರ್ಣ ಅನಗತ್ಯ ವಿವಾದಗಳು ಭುಗಿಲೆದ್ದಿದೆ. ಒಂದು ಪಾಕಿಸ್ತಾನದಲ್ಲಿ ಸಿಂಧಿ ಭಾಷೆಯ ಬಗ್ಗೆ ನನ್ನ ತಪ್ಪು ಹೇಳಿಕೆಗೆ ಸಂಬಂಧಿಸಿದಂತೆ. ಎರಡನೆಯದು ಮರಾಠಿ ಮತ್ತು ಫಾರ್ಸಿ ನಡುವಿನ ಸಂಬಂಧದ ಬಗ್ಗೆ ಹೇಳಿದ ಮಾತು' ಎಂದಿದ್ದಾರೆ. 

'ನನ್ನ ಉದ್ದೇಶ ಎಂದರೆ ಹಲವು ಮರಾಠಿ ಪದಗಳು ಫಾರ್ಸಿ ಮೂಲ ಎನ್ನುವುದು. ನನ್ನ ಉದ್ದೇಶವು ಮರಾಠಿಗೆ ಅಪಮಾನ ಮಾಡುವುದು ಆಗಿರಲಿಲ್ಲ. ವೈವಿಧ್ಯತೆಯು ಎಲ್ಲಾ ಸಂಸ್ಕೃತಿಗಳನ್ನು ಹೇಗೆ ಶ್ರೀಮಂತಗೊಳಿಸುತ್ತದೆ ಎಂಬುದರ ಕುರಿತು ಮಾತನಾಡುವುದು ಉರ್ದು ಹಿಂದಿ ಫಾರ್ಸಿ ಟರ್ಕಿಶ್ ಮತ್ತು ಅರೇಬಿಕ್ ಮಿಶ್ರಣವಾಗಿದೆ' ಎಂದು ಹೇಳಿದ್ದಾರೆ. 

ನನ್ನ ಪ್ರಶಸ್ತಿಗಳನ್ನು ಬಾತ್‌ರೂಮ್ ಬಾಗಿಲಿಗೆ ಹಿಡಿಕೆಗಳಾಗಿ ಬಳಸಿದ್ದೀನಿ: ನಾಸಿರುದ್ದೀನ್ ಶಾ ಶಾಕಿಂಗ್ ಹೇಳಿಕೆ

ಅದ್ನಾನ್ ಸಿದ್ದಿಕಿ ಪ್ರತಿಕ್ರಿಯೆ 

ನಾಸಿರುದ್ದೀನ್ ಶಾ  ಕ್ಷಮೆಯಾಚನ ನಂತರ ಅದರ ಸ್ಟ್ರೀನ್ ಶಾಟ್ ಶೇರ್ ಮಾಡಿ ಪಾಕ್ ನಟ ಅದ್ನಾನ್ ಸಿದ್ದಿಕಿ, 'ತಪ್ಪಿಗೆ ಕ್ಷಮೆಯಾಚಿಸುವುದು ನಿಜಕ್ಕೂ ವ್ಯಕ್ತಿಯ ಗುಣವಾಗಿದೆ ಮತ್ತು ಬುದ್ಧಿವಂತಿಕೆಗೆ ನಿಜವಾದ ಸಾಕ್ಷಿಯಾಗಿದೆ. ನಾಸೀರ್ ಸಾಹಬ್ ಅವರ ಇತ್ತೀಚಿನ ಗೆಸ್ಚರ್ ಅವರ ಬಗ್ಗೆ ನನ್ನ ಮೆಚ್ಚುಗೆಯನ್ನು ಇನ್ನಷ್ಟು ಹೆಚ್ಚಿಸಿದೆ. ತಪ್ಪುಗಳನ್ನು ಒಪ್ಪಿಕೊಳ್ಳಲು ಮತ್ತು ಅವುಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಶಕ್ತಿ ಮತ್ತು ನಮ್ರತೆ ಬೇಕಾಗುತ್ತದೆ' ಎಂದು ಹೇಳಿದ್ದಾರೆ. 

ಕೇರಳ ಸ್ಟೋರಿ ನೋಡಲ್ಲ, ಈ ಚಿತ್ರದ ಸಕ್ಸಸ್‌ ಡೇಂಜರಸ್‌ ಟ್ರೆಂಡ್‌: ನಾಸಿರುದ್ದೀನ್‌ ಶಾ!

ನಾಸಿರುದ್ದೀನ್ ಶಾ ಹೇಳಿದ್ದೇನು?

ಅವರ ವೆಬ್ ಸರಣಿ ತಾಜ್: ಡಿವೈಡೆಡ್ ಬೈ ಬ್ಲಡ್ ಸೀಸನ್ 2 ರ ಇತ್ತೀಚಿನ ಪ್ರಚಾರದ ಸಮಯದಲ್ಲಿ, ನಾಸಿರುದ್ದೀನ್ ಪಾಕಿಸ್ತಾನದಲ್ಲಿ ಮಾತನಾಡುವ ವಿವಿಧ ಭಾಷೆಗಳ ಬಗ್ಗೆ ಮಾತನಾಡಿದರು. 'ಅವರಿಗೆ ಬಲೂಚಿ ಇದೆ, ಬ್ಯಾರಿ ಇದೆ, ಸಿರೈಕಿ ಇದೆ ಮತ್ತು ಪುಷ್ಟೋ ಇದೆ. ಸಿಂಧಿ ಇನ್ನು ಮುಂದೆ ಪಾಕಿಸ್ತಾನದಲ್ಲಿ ಮಾತನಾಡುವುದಿಲ್ಲ' ಎಂದಿದ್ದರು. 

click me!