ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ರು: ನಟ ಅಕ್ಷಯ್ ಕುಮಾರ್ ವಿರುದ್ಧ ಕಮಾಲ್ ಖಾನ್ ಗಂಭೀರ ಆರೋಪ

Published : Jun 10, 2023, 12:48 PM IST
ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ರು: ನಟ ಅಕ್ಷಯ್ ಕುಮಾರ್ ವಿರುದ್ಧ ಕಮಾಲ್ ಖಾನ್ ಗಂಭೀರ ಆರೋಪ

ಸಾರಾಂಶ

ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ನಟ ಅಕ್ಷಯ್ ಕುಮಾರ್ ತನ್ನ ಕೊಲೆಗೆ ಸುಪಾರಿ ಕೊಟ್ಟಿದ್ದರು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. 

ಬಾಲಿವುಡ್‌ನ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ಸ್ಟಾರ್‌ಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮೂಲಕ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದರೂ ತನ್ನ ಹೇಳಿಕೆಗಳಿಗೆ ಬ್ರೇಕ್ ಹಾಕಿಲ್ಲ ಕಮಾಲ್ ಆರ್ ಖಾನ್. ಇದೀಗ ಕಮಲ್ ಆರ್ ಖಾನ್ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.  ಅಕ್ಷಯ್ ಕುಮಾರ್ ತನ್ನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದರು ಎಂದು ಕಮಾಲ್ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದ ತಾನು ಜೈಲಿಗೆ ಹೋಗಲು ಅಕ್ಷಯ್ ಕುಮಾರ್ ಅವರೇ ಕಾರಣ ಎಂದು ಹೇಳಿದ್ದಾರೆ. 

ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರಿಗೂ ಯಾವುದೇ ಸಂಬಂಧವಿಲ್ಲ. ಅಕ್ಷಯ್ ಕುಮಾರ್ ಅವರನ್ನು ಕೆನಡಿಯನ್ ಕುಮಾರ್ ಎಂದು ಕರೆದಿದ್ದಕ್ಕಾಗಿ ತೊಂದರೆಯಲ್ಲಿ ಇದ್ದೀನಿ ಎಂದು ಕಮಾಲ್ ಖಾನ್ ಹೇಳಿದ್ದಾರೆ. ಈ ಬಗ್ಗೆ ಕಮಾಲ್ ಸರಣಿ ಟ್ವೀಟ್ ಮಾಡಿದ್ದಾರೆ. 'ನನಗೆ ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಹೊರತುಪಡಿಸಿ ಎಲ್ಲರೊಂದಿಗೂ ಉತ್ತಮ ಸಂಬಂಧವಿದೆ.  ನನ್ನನ್ನು ಜೈಲಿನಲ್ಲಿ ಕೊಲ್ಲಲು ಸುಪಾರಿ ನೀಡಿ ನನ್ನನ್ನು ಬಂಧಿಸಿದವನು ಅವನೇ' ಎಂದು ಹೇಳಿದ್ದರು. ಟ್ವೀಟ್ ಮಾಡಿ ಕೆಲವೇ ಕ್ಷಣಕ್ಕೆ ಕಮಾಲ್ ಆರ್ ಖಾನ್ ಡಿಲೀಟ್ ಮಾಡಿದ್ದಾರೆ. 

ಸರಣಿ ಸೋಲು: ಟೆಂಪಲ್ ರನ್ ಮಾಡುತ್ತಿರುವ ನಟ ಅಕ್ಷಯ್ ಕುಮಾರ್, ಕೇದಾರನಾಥ, ಬದರಿನಾಥ್‌ಗೆ ಭೇಟಿ

ಅಕ್ಷಯ್ ಕುಮಾರ್ ಅವರ ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆಯೂ ಕಮಾಲ್ ಉಲ್ಲೇಖ ಮಾಡಿದ್ದಾರೆ. 10 ಸಿನಿಮಾಗಳ ಹೆಸರನ್ನು ಸಹ ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಕಮಲ್ ಆರ್ ಖಾನ್ ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಇದೇ ಮೊದಲಲ್ಲ. ಈ ಮೊದಲು ಸಲ್ಮಾನ್ ಖಾನ್ ವಿರುದ್ಧ ಅನೇಕ ಕಾಮೆಂಟ್ ಮಾಡಿದ್ದರು. ಇದೀಗ ಅಕ್ಷಯ್ ಕುಮಾರ್ ಬ್ಗಗೆ ಮತನಾಡಿ ಅವರ ಅಭಿಮಾನಿಗಳ ಕೆಂಗಣ್ಣಿಗೆ  ಗುರಿಯಾಗಿದ್ದಾರೆ.  

20 ವರ್ಷದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಮಾಜಿ ಜೋಡಿ ಅಕ್ಷಯ್- ರವೀನಾ: ಇಬ್ಬರೂ ತಬ್ಬಿ ಮಾತಾಡಿದ ವಿಡಿಯೋ ವೈರಲ್

ಅಂದಹಾಗೆ ಈ ಬಗ್ಗೆ  ಅಕ್ಷಯ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಖಿಲಾಡಿ ಕುಮಾರ್ ಸದ್ಯ  OMG 2 ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದು ಆಗಸ್ಟ್ 11 ರಂದು ರಿಲೀಸ್ ಆಗುತ್ತಿದೆ. ಅದೇ ದಿನ ರಣಬೀರ್ ಕಪೂರ್ ಅವರ ಚಿತ್ರ ಅನಿಮಲ್ ಕೂಡ ಬಿಡುಗಡೆಯಾಗಲಿದೆ. ಕಮಾಲ್ ಖಾನ್ ಹೇಳಿಕೆಗೆ  ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡುತ್ತಾರಾ ಅಥವಾ ನಿರ್ಲಕ್ಷಿಸುತ್ತಾರಾ ಎಂದು ಕಾದುನೋಡಬೇಕಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂಪರ್ ಹಿಟ್ 'ಜನುಮದ ಜೋಡಿ' ಸಿನಿಮಾದಲ್ಲಿ ಶಿಲ್ಪಾ ಬದಲು ಸೌಂದರ್ಯ ನಟಿಸಬೇಕಿತ್ತು.. ಆದರೆ, ಅದಕ್ಕೆ ಅಡ್ಡಗಾಲಾಗಿದ್ದು ಏನು?
27 ವರ್ಷಗಳ ದಾಂಪತ್ಯಕ್ಕೆ 250 ಕೋಟಿ ರೂ? ದಳಪತಿ-ಸಂಗೀತಾ ಡಿವೋರ್ಸ್​ಗೆ ಇದೇನಿದು ಟ್ವಿಸ್ಟ್​?