ಸಹೋದರಿ ಮಾಡಿಕೊಂಡ ಎಡವಟ್ಟಿನಿಂದ ಪರದಾಡುತ್ತಿರುವ ಖ್ಯಾತ ನಟಿ ನರ್ಗಿಸ್. ಜಾಮೀನು ಸಿಗದಿದ್ದರೆ ಕಥೆ ಏನು?
ರಾಕ್ ಸ್ಟಾರ್, ಮೇ ತೇರಾ ಹೀರೊ, ಅಜರ್, ಹೌಸ್‌ಪುಲ್ 3 ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನರ್ಗಿಸ್ ಫಖ್ರಿ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಹೆಸರು ಮತ್ತು ಹಣ ಮಾಡುವುದರಲ್ಲಿ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ. ಆದರೆ ನರ್ಗಿಸ್ ಫಖ್ರಿ ಸಹೋದರಿ ಆಲಿಯಾ ತಮ್ಮ ಜೀವನ ತಮ್ಮ ಕೈಯಾರಿ ಹಾಳು ಮಾಡಿಕೊಂಡಿದ್ದಾರೆ ಅದು ಕೊಲೆ ಮಾಡಿ.
ಹೌದು! ವಿದೇಶದಲ್ಲಿ ನರ್ಗಿಸ್ ಫಖ್ರಿ ಸಹೋದರಿ ಅಲಿಯಾ ನೆಲೆಸಿದ್ದಾರೆ. 43 ವರ್ಷದ ಆಲಿಯಾ ಕೆಲವು ವರ್ಷಗಳಿಂದ 35 ವರ್ಷದ ಎಡ್ವರ್ಡ್ ಜೇಕಬ್ಸ್‌ನ ಪ್ರೀತಿಸುತ್ತಿದ್ದರು. ಸಣ್ಣ ಕಾರಣದಿಂದ ಮನಸ್ಥಾಪವಾಗಿ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಅಲ್ಲಿಂದ ಆಲಿಯಾಗೆ ತಿಳಿಯುತ್ತದೆ ತಮ್ಮ ಬಾಯ್‌ಫ್ರೆಂಡ್ ಎಡ್ವರ್ಡ್ ಜೇಕಬ್ಸ್‌ಗೆ 33 ವರ್ಷ ಅನಸ್ತಾಸಿಯಾ ಎಂಬ ಹುಡುಗಿ ಮೇಲೆ ಲವ್ ಅಗಿದೆ ಎಂದು. ಅಲ್ಲಿಂದ ದೊಡ್ಡ ಮಟ್ಟದಲ್ಲಿ ಅನುಮಾನ ಶುರುವಾಗುತ್ತದೆ. ಎಡ್ವರ್ಡ್ ಮತ್ತು ಅನಸ್ತಾಸಿಯಾ ನಡುವೆ ಇದ್ದ ಸ್ನೇಹ ಮತ್ತು ಆತ್ಮೀಯತೆಯಿಂದ ಆಲಿಯಾಗೆ ಅಸೂಯೆ ಶುರುವಾಗುತ್ತದೆ.
ನಿಮ್ಮ ಕನಸಿನಲ್ಲಿ ಹಾವು ಬರ್ತಿದ್ಯಾ? ಹಾಗಿದ್ರೆ ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ
ದಿನದಿಂದ ದಿನಕ್ಕೆ ಜಗಳ ದೊಡ್ಡದಾಗುತ್ತಿದ್ದ ಕಾರಣ ಆಲಿಯಾ ನೇರವಾಗಿ ಎಡ್ವರ್ಡ್ ವಾಸವಿದ್ದ ಮನೆಗೆ ಬೆಳಗ್ಗೆ 6.20ರ ಸುಮಾರಿಗೆ ನುಗ್ಗಿ ನೀವು ಇಂದು ಸಾಯುವುದು ಖಚಿತ ಎಂದು ಜಗಳ ಮಾಡಿ ಇಡೀ ಮನೆಗೆ ಬೆಂಕಿ ಹಚ್ಚಿದ್ದಾರೆ. ಗಾಡ ನಿದ್ರೆಯಲ್ಲಿದ್ದ ಎಡ್ವರ್ಡ್ ಮತ್ತು ಸ್ನೇಹಿತೆ ಅನಸ್ತಾನಿಯಾ ಹೊಗೆ, ಗ್ಯಾಸೋಲಿನ್ ಮತ್ತು ಸುಟ್ಟು ಗಾಯಗಳಿಂದ ಕೊನೆಯುಸಿರೆಳೆದಿದ್ದಾರೆ.
ಎಡ್ವರ್ಡ್ ತಾಯಿ ಮಾತು:
ನನ್ನ ಮಗ ಮತ್ತು ಆಲಿಯಾ ಒಂದು ವರ್ಷದಿಂದ ದೂರವಿದ್ದರು. ಹಲವು ಬಾರಿ ತನ್ನಿಂದ ದೂರ ಇರುವಂತೆ ಆಲಿಯಾಗೆ ಪದೇ ಪದೇ ಮನವಿ ಮಾಡುತ್ತಿದ್ದ ಆದರೆ ಆಲಿಯಾ ಯಾವತ್ತೂ ಎಡ್ವರ್ಡ್ ಮಾತುಗಳನ್ನು ಕೇಳುತ್ತಿರಲಿಲ್ಲ. ಇಬ್ಬರು ಕೊಲೆ ಮಾಡಿರುವ ಆಲಿಯಾಗೆ ಕಠಿಣ ಶಿಕ್ಷೆ ಆಗಬೇಕು ಎಂದು ನ್ಯೂಯಾರ್ಕ್ ಪೋಸ್ಟ್‌ಗೆ ಎಡ್ವರ್ಡ್ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.
Photo Leak ಐರಾ ಬರ್ತಡೇ ಪಾರ್ಟಿ ಫೋಟೋ ವೈರಲ್; ಯಶ್ ಲುಕ್‌ಗೆ ಫ್ಯಾನ್ಸ್ ಫಿದಾ
ಆಲಿಯಾ ಕೊಲೆ ಮಾಡುವ ವ್ಯಕ್ತಿ ಅಲ್ಲ, ಇನ್ನೂ ಕಷ್ಟದಲ್ಲಿ ಇದ್ದವರಿಗೆ ತನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತಾಳೆ ಎಂದು ನರ್ಗಿಸ್ ಮತ್ತು ಅವರ ತಾಯಿ ಆರೋಪವನ್ನು ತಳ್ಳಿ ಹಾಕಿದ್ದಾರೆ ಎನ್ನಲಾಗಿದದೆ. ಸದ್ಯ ಆಲಿಯಾ ನ್ಯೂಯಾರ್ಕ್‌ನ ಕ್ರಿಮಿನಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾಗ ಜಿಲ್ಲಾ ಅಟಾರ್ನಿ ಮೆಲಿಂಡಾ ಜಾಮೀನು ನೀಡಲು ನಿರಾಕರಿಸಿ