150 ಕೋಟಿ ರೂ. ಸಂಕಷ್ಟದಲ್ಲಿ ತಲಾ ಅಜಿತ್ 'ವಿದಾಮುಯರ್ಚಿ' ಟೀಂ; ಕಥೆ ಕದ್ದಿದ್ದು ನಿಜವೇ?

By Vaishnavi Chandrashekar  |  First Published Dec 3, 2024, 11:54 AM IST

ಟ್ರೈಲರ್ ರಿಲೀಸ್ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡ ತಲಾ ಅಜಿತ್ ತಂಡ. ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಮತ್ತೊಂದು ಸಂಕಷ್ಟ......
 


ಕಾಲಿವುಡ್ ಸೂಪರ್ ಸ್ಟಾರ್ ತಲಾ ಅಜಿತ್ ಕುಮಾರ್ ಮತ್ತು ತ್ರಿಷಾ ನಟನೆಯ ವಿದಾಮುಯರ್ಚಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಸಣ್ಣ ತುಣುಕು ಮೂಲಕವೇ ಸಿನಿ ರಸಿಕರ ಗಮನ ಸೆಳೆದಿರುವ ಈ ಚಿತ್ರತಂಡ ಇದೀಗ ಸಂಕಷ್ಟಕ್ಕೆ ಸಿಲುಕಿದೆ, ಏಕೆಂದರೆ ಇದು ಪಕ್ಕಾ ಹಾಲಿವುಡ್‌ನಿಂದ ಕದ್ದಿರುವ ಚಿತ್ರಕಥೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ,ರೆಗಿನಾ ಕಸೆಂದ್ರ, ಆರವ್ ಸೇರಿದಂತೆ ದೊಡ್ಡ ತಾರಬಳಗವಿದೆ. 

ಹೌದು! ವಿದಾಮುಯರ್ಚಿ ಸಿನಿಮಾದ ಟ್ರೈಲರ್ ನೋಡಿದ ವೀಕ್ಷಕರು ಇದು 'ಬ್ರೇಕ್‌ಡೌನ್‌' ಚಿತ್ರದ ಕಥೆ ಇದ್ದಹಾಗೆ ಇದೆ ಎನ್ನುವ ಕಾಮೆಂಟ್ ಮಾಡುತ್ತಿದ್ದಾರೆ.1997ರಲ್ಲಿ ಡಿನೋ ಡಿ ಲಾರೆಂಟಿಸ್‌ ಕಂಪನಿ ಹಾಗೂ ಸ್ಪೆಲ್ಲಿಂಗ್ ಫಿಲ್ಮ್‌ ಸಂಸ್ಥೆಗಳನ್ನು 'ಬ್ರೇಕ್‌ಡೌನ್‌' ಚಿತ್ರವನ್ನು ನಿರ್ಮಾಣ ಮಾಡಿತ್ತು, ಈ ಚಿತ್ರಕ್ಕೆ ಸಂಪೂರ್ಣ ವಿತರಣೆ ಹಕ್ಕನ್ನು ಪಾರಮೌಂಟ್ ಪಿಕ್ಚರ್ಸ್‌ ಸಂಸ್ಥೆ ಪಡೆದಿದ್ದರು. ಈಗ ಇದೇ ಚಿತ್ರದ ಒನ್‌ಲೈನ್‌ನ ವಿದಾಮುಯರ್ಚಿ ಕದ್ದಿದ್ದಾರೆ ಎಂದು ಕಾಪಿರೈಡ್‌ ನೋಟಿಸ್‌ ಕಳುಹಿಸಲಾಗಿದೆ ಎನ್ನಲಾಗಿದೆ.  ಪಾರಮೌಂಟ್‌ ಪಿಕ್ಚರ್ಸ್‌ ಸಂಸ್ಥೆ 'ವಿದಾಮುಯರ್ಚಿ' ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ, ಪರಿಹಾರವಾಗಿ 150 ಕೋಟಿ ರೂಪಾಯಿ ಕೇಳಿದ್ದಾರಂತೆ. ಈಗ ಚಿತ್ರತಂಡ ಯಾವ ರೀತಿಯಲ್ಲಿ ಹೆಜ್ಜೆ ಇಡಲಿದೆ ಎಂದು ಕಾದು ನೋಡಬೇಕಿದೆ. ಅಲ್ಲದೆ ಈ ಹಿಂದೆ ಅಜೆರ್ಬೈಜಾನ್‌ ದೇಶದಲ್ಲಿ ಸಿನಿಮಾ ಚಿತ್ರೀಕರಣ ಮಾಡುವಾಗ ಸ್ಟಂಟ್ಸ್‌ ವೇಳೆ ಸಂಕಷ್ಟ ಎದುರಾಗಿತ್ತು. ಒಂದಾದ ಮೇಲೊಂದು ಸಂಕಷ್ಟ ಎದರಾಗುತ್ತಿದ್ದರೂ 2025ರ ಸಂಕ್ರಾಂತಿ ಹಬ್ಬದಂದು ಸಿನಿಮಾ ರಿಲೀಸ್ ಮಾಡಬೇಕು ಎನ್ನುತ್ತಿದ್ದಾರೆ.  

Tap to resize

Latest Videos

undefined

Photo Leak ಐರಾ ಬರ್ತಡೇ ಪಾರ್ಟಿ ಫೋಟೋ ವೈರಲ್; ಯಶ್‌ ಲುಕ್‌ಗೆ ಫ್ಯಾನ್ಸ್‌ ಫಿದಾ

ಬ್ರೇಕ್‌ಡೌನ್‌ ಚಿತ್ರದಲ್ಲಿ ಜೆ.ಟಿ ವಾಲ್ಷ್‌ ಹಾಗೂ ಕ್ಯಾಥ್ಲೀನ್‌ ಕ್ವಿನ್ಲಾನ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೊಸದಾಗಿ ಮದುವೆಯಾಗಿರುವ ಜೋಡಿ ಪ್ರವಾಸ ಕೈಗೊಳ್ಳುತ್ತಾರೆ. ಈ ಜರ್ನಿಯಲ್ಲಿ ತಮ್ಮ ಪತ್ನಿಯನ್ನು ಕೆಲವು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡುತ್ತಾರೆ, ತನ್ನ ಚಾಣಾಕ್ಷತನದಿಂದ ಆಕೆಯನ್ನು ಹೇಗೆ ವಾಪಸ್ ಪಡೆಯುತ್ತಾನೆ ಎನ್ನುವುದು ಬ್ರೇಕ್‌ಡೌನ್‌ ಕಥೆ ಆಗಿತ್ತು. ಈಗ ಅದೇ ಕಥೆಯನ್ನು ಈ ಟ್ರೈಲರ್‌ನಲ್ಲಿ ತೋರಿಸಿದ್ದಾರೆ ಎಂದು ಅಭಿಮಾನಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ. 

ನಿಮ್ಮ ಕನಸಿನಲ್ಲಿ ಹಾವು ಬರ್ತಿದ್ಯಾ? ಹಾಗಿದ್ರೆ ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ

click me!