ಆಂಧ್ರ, ತೆಲಂಗಾಣ ಚಿತ್ರಮಂದಿರಗಳಲ್ಲಿ ನಟ ನಾನಿ ಸಿನಿಮಾಗಳು ಬಿಡುಗಡೆ ಮಾಡುವುದಿಲ್ಲ ಎಂದು ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ ಚಿತ್ರಮಂದಿರದ ಮಾಲೀಕರು. ಇಂಥ ನಿರ್ಧಾರಕ್ಕೇನು ಕಾರಣ?
ತೆಲುಗು ಚಿತ್ರರಂಗದ ಸ್ಟಾರ್ ನಟ ನಾನಿ ಯಾವುದೇ ಸಿನಿಮಾ ಮಾಡಿದರೂ ಸೂಪರ್ ಹಿಟ್ ಮಾತ್ರವಲ್ಲದೇ, ಹಾಕಿರುವ ಬಂಡವಾಳಕ್ಕಿಂತ ಹೆಚ್ಚು ಹಣ ಹಿಂಪಡೆಬಹುದು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ನಾನಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಸದಾ ಚಿತ್ರಮಂದಿರಗಳ ಮಾಲೀಕರು ರೆಡಿಯಾಗಿರುತ್ತಾರೆ, ಬೇರೆ ಚಿತ್ರ ಒಪ್ಪಿಕೊಂಡಿದ್ದರೂ, ಅದನ್ನ ಬದಿಗಿಟ್ಟು ಪ್ರಮುಖ್ಯತೆ ನೀಡುವುದು ನಾನಿ ಸಿನಿಮಾಗಳಿಗೆ. ಹೀಗಿರುವಾಗ ನಾನು ಸಿನಿಮಾ ರಿಲೀಸ್ ಮಾಡಲು ಓಟಿಟಿಗೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನಾನಿ ಅಭಿನಯದ 'ಟಕ್ ಜಗದೀಶ್' ಸಿನಿಮಾ ಸೆಪ್ಟೆಂಬರ್ 10ರಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ನಮ್ಮ ಸಿನಿಮಾ ನಮ್ಮ ಸಂಸ್ಕೃತಿಯ ಭಾಗ ಹೀಗಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಬೇಕು ಎಂದು ಹೇಳುತ್ತಿದ್ದ ನಾನಿ, ಈಗ ಓಟಿಟಿ ಆಯ್ಕೆ ಮಾಡಿಕೊಂಡಿರುವುದಕ್ಕೆ ಚಿತ್ರಮಂದಿರದ ಮಾಲೀಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಾಮೂಹಿಕವಾಗಿ ನಾನಿ ಸಿನಿಮಾಗಳಿಗೆ ಬಹಿಷ್ಕಾರ ಹಾಕುತ್ತಿದ್ದಾರೆ.
ಈ ವಿಚಾರದ ಬಗ್ಗೆ ತೆಲುಗು ರಾಜ್ಯದ ಚಿತ್ರಮಂದಿರದ ಮಾಲೀಕರು ಸಭೆ ನಡೆಸಿದ್ದಾರೆ. 'ಅಕ್ಟೋಬರ್ 10ರವರೆಗೆ ಕಾದು ನೋಡಿ, ಆವರೆಗೂ ಕೊರೋನಾ ಪರಿಸ್ಥಿರಿ ಸುಧಾರಿಸಿ, ಚಿತ್ರಮಂದಿರಗಳು ತೆರೆಯಲ್ಲಿಲ್ಲವೆಂದರೆ ನಿಮ್ಮ ಸಿನಿಮಾಗಳನ್ನು ಓಟಿಟಿಗೆ ನೀಡಲು ನಮ್ಮ ಅಭ್ಯಂತರವಿಲ್ಲ, ಎಂದು ನಿರ್ಮಾಪಕರಿಗೆ ಪತ್ರ ಬರೆಯಲಾಗಿತ್ತು. ಆದರೂ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಓಟಿಟಿಗೆ ನೀಡಿದ್ದಾರೆ. ನಾವು ದಶಕಗಳಿಂದ ನಿರ್ಮಾಪಕರಿಗೆ ಲಾಭ ಮಾಡಿಕೊಡುತ್ತಾ ಬಂದಿದ್ದೇವೆ. ಆದರೆ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಓಟಿಟಿಗೆ ನೀಡಿದ್ದಾರೆ,' ಎಂದು ಚಿತ್ರ ಪ್ರದರ್ಶಕ ಸಂಘದ ಪ್ರಮುಖರೊಬ್ಬರು ಮಾತನಾಡಿದ್ದಾರೆ.
ಮತ್ತೆ ನಾನಿ ಜೊತೆ ಸಿನಿಮಾ ಮಾಡಲು 2 ಕೋಟಿ ಡಿಮ್ಯಾಂಡ್ ಮಾಡಿದ್ರಾ ಸಾಯಿ ಪಲ್ಲವಿ?ಸದ್ಯದ ನಿರ್ಧಾರದ ಪ್ರಕಾರ ನಾನಿ 'ಟಕ್ ಜಗದೀಶ್' ಸಿನಿಮಾವನ್ನು ಆಂಧ್ರ ಮತ್ತು ತೆಲಂಗಾಣ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದಿಲ್ಲ. ನಾನಿ ಮುಂದಿನ ಸಿನಿಮಾಗೂ ಹೀಗೆ ಮಾಡುತ್ತೇವೆ ಎಂದು ಬಹಿಷ್ಕಾರ ಹಾಕುತ್ತೇವೆ, ಎಂದು ಚಿತ್ರಮಂದಿರಗಳ ಮಾಲೀಕರು ಎಚ್ಚರಿಸಿದ್ದಾರೆ.