ಈ ಜನಪ್ರಿಯ ನಟ ನಟಿಯರು ಹುಟ್ಟಿನಿಂದಲೇ ಪ್ರತಿಭಾವಂತರು!

By Suvarna News  |  First Published Aug 22, 2021, 1:18 PM IST

ಬಾಲ್ಯದಲ್ಲೇ ಸಿನಿಮಾ ತೆರೆಯನ್ನು ಏರಿ, ತಮ್ಮ ಮುದ್ದಾದ ನಟನೆಯಿಂದ ನಮ್ಮನ್ನು ಸಂತೋಷಪಡಿಸಿದ ಅನೇಕರು ದೊಡ್ಡ ತಾರೆಯರಾಗಿ ಬೆಳೆದಿದ್ದಾರೆ. ಬಾಲನಟರಾಗಿ ಅವರನ್ನು ಪ್ರೇಕ್ಷಕರು ಸ್ವೀಕರಿಸಿದಂತೆ, ಹೀರೋ- ಹೀರೋಯಿನ್‌ಗಳಾಗಿಯೂ ಸ್ವೀಕರಿಸಿದ್ದಾರೆ. ಅಂಥ ಕೆಲವರನ್ನು ಇಲ್ಲಿ ನೋಡೋಣ.


ಬಾಲ್ಯದಲ್ಲೇ ಸಿನಿಮಾ ತೆರೆಯನ್ನು ಏರಿ, ತಮ್ಮ ಮುದ್ದಾದ ನಟನೆಯಿಂದ ನಮ್ಮನ್ನು ಸಂತೋಷಪಡಿಸಿದ ಅನೇಕ ಹುಡುಗ- ಹುಡುಗಿಯರು ನಂತರದ ವರ್ಷಗಳಲ್ಲಿ ಕಣ್ಮರೆಯಾಗಿ ಹೋಗಿರುವುದನ್ನು ನಾವು ಕಂಡಿದ್ದೇವೆ. ಅವರು ಸಿನಿಮಾ ತೆರೆಯಿಂದ ಆಚೆ ಸರಿದು ಮಾಮೂಲಿ ಬದುಕಿನಲ್ಲಿ ಲೀನವಾಗಿ ಹೋಗಿದ್ದಾರೆ. ಇನ್ನು ಹಲವರು ಹಾಗಲ್ಲ, ಅವರು ದೊಡ್ಡ ತಾರೆಯರಾಗಿ ಬೆಳೆದಿದ್ದಾರೆ. ಬಾಲನಟರಾಗಿ ಅವರನ್ನು ಪ್ರೇಕ್ಷಕರು ಸ್ವೀಕರಿಸಿದಂತೆ, ಹೀರೋ- ಹೀರೋಯಿನ್‌ಗಳಾಗಿಯೂ ಸ್ವೀಕರಿಸಿದ್ದಾರೆ. ಇವರು ಹುಟ್ಟು ಪ್ರತಿಭಾವಂತರು ಎನ್ನಬಹುದು. ಅಂಥ ಕೆಲವರನ್ನು ಇಲ್ಲಿ ನೋಡೋಣ.

ಅಮೀರ್ ಖಾನ್
ಅತ್ಯಂತ ಮೆಚ್ಚುಗೆ ಪಡೆದ ಸಮಕಾಲೀನ ನಟರಲ್ಲಿ ಒಬ್ಬರಾದ ಅಮೀರ್ ಖಾನ್ ಅವರು ಬಾಲನಟನಾಗಿ ಯಾದೋಂ ಕಿ ಬಾರಾತ್ (1973) ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದರು. ಇದು ಅವರ ಚಿಕ್ಕಪ್ಪ ನಾಸಿರ್ ಹುಸೇನ್ ಅವರ ಚಿತ್ರ. ಇದಾಗಿ ಹತ್ತು ವರ್ಷದ ವರೆಗೂ ಅವರು ಬೇರ್ಯಾವುದೇ ಫಿಲಂನಲ್ಲಿ ಮಾಡಲಿಲ್ಲ. ಅವರ ಮುಂದಿನ ಚಿತ್ರ 1984 ರಲ್ಲಿ ಹೋಳಿ ಚಿತ್ರದ ಮೂಲಕ ಬಂದಿತು. ಅವರು 1988ರಲ್ಲಿ ಖಯಮತ್ ಸೆ ಖಯಾಮತ್ ತಕ್ ಚಿತ್ರದಲ್ಲಿ ಪ್ರಮುಖ ಪಾತ್ರದೊಂದಿಗೆ ತೆರೆಗೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ಬ್ಲಾಕ್‌ಬಸ್ಟರ್ ಆಯಿತು ಮತ್ತು ಅಮೀರ್ ವೃತ್ತಿಜೀವನ ಏರುಗತಿಯಲ್ಲಿ ಸಾಗಿತು.

Tap to resize

Latest Videos

undefined

ಊರ್ಮಿಳಾ ಮಾತೋಂಡ್ಕರ್
ಊರ್ಮಿಳಾ ಮುಂಚೂಣಿ ಹೀರೋಯಿನ್ ಆಗಿ ಗುರುತಿಸಿಕೊಳ್ಳುವ ಮೊದಲು ಬಾಲ ಕಲಾವಿದೆಯಾಗಿ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆ ಮೊದಲು ಮರಾಠಿ ಚಿತ್ರದಲ್ಲಿ ಜಕೋಲ್ (1980) ಎಂಬ ಹೆಸರಿನಲ್ಲಿ ನಟಿಸಿದಳು. ಬಾಲ ನಟಿಯಾಗಿ ಆಕೆಯ ಮೊದಲ ಹಿಂದಿ ಚಿತ್ರ ಕಲ್ಯುಗ್ (1981). ಮಾಸೂಮ್ (1983)ನ ನಟನೆಗೆ ಅವರು ಹೆಚ್ಚಿನ ಪ್ರಶಂಸೆ ಗಳಿಸಿದರು. ಇದರ ನಂತರ, ಆಕೆ ಮಲಯಾಳಂ ಚಲನಚಿತ್ರ ಚಾಣಕ್ಯನ್ (1989)ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಆಕೆಯ ಮೊದಲ ಬಾಲಿವುಡ್ ಚಿತ್ರ ನರಸಿಂಹ (1991). ಆಕೆ ಬಹಳ ಯಶಸ್ಸು ಕಂಡದ್ದು ರಂಗೀಲಾದಲ್ಲಿ. ಸತ್ಯ, ಭೂತ್ ಇತ್ಯಾದಿ ಹಿಟ್‌.

ಶ್ರೀದೇವಿ
ಶ್ರೀದೇವಿ ನಾಲ್ಕನೇ ವಯಸ್ಸಿನಲ್ಲಿ ನಟಿಸಲು ಆರಂಭಿಸಿದರು. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಅವರ ವೃತ್ತಿಜೀವನ ಪ್ರವರ್ಧಮಾನಕ್ಕೆ ಬಂದಿತು. ಆಕೆಯ ಮೊದಲ ಬಾಲಿವುಡ್ ಚಿತ್ರ ಜೂಲಿ (1975). ಜೂಲಿಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು. ಆದರೆ 13ನೇ ವಯಸ್ಸಿನಲ್ಲಿ ತಮಿಳಿನಲ್ಲಿ ಮೂಂಡ್ರು ಮುಡಿಚು ಚಿತ್ರದಲ್ಲಿ ತಮ್ಮ ಮೊದಲ ವಯಸ್ಕ ಪಾತ್ರವನ್ನು ನಿರ್ವಹಿಸಿದರು. ಅವರ ಇತರ ಕೆಲವು ಚಿತ್ರಗಳು ಹಿಮ್ಮತ್‌ವಾಲಾ, ತೋಹ್ಫಾ, ಲಮ್ಹೆ, ಜುದಾಯಿ ಇತ್ಯಾದಿ.

ನೀತು ಸಿಂಗ್
ನೀತು ಸಿಂಗ್ ಬೇಬಿ ಸೋನಿಯಾ ಹೆಸರಿನಿಂದ ಬಾಲನಟಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವಳ ಮೊದಲ ಪಾತ್ರ ಆಕೆ ಎಂಟು ವರ್ಷದವಳಿದ್ದಾಗ ಸೂರಜ್ (1966) ಚಿತ್ರದಲ್ಲಿ. ವಾರಿಸ್ ಮತ್ತು ಪವಿತ್ರ ಪಾಪಿ ಚಲನಚಿತ್ರಗಳು ಬಾಲನಟಿಯಾಗಿ ಖ್ಯಾತಿಯನ್ನು ನೀಡಿದವು. ರಿಕ್ಷಾವಾಲಾ (1973) ಚಿತ್ರದ ಮೂಲಕ ವಯಸ್ಕರಾಗಿ ಪಾದಾರ್ಪಣೆ ಮಾಡಿದರು. ರಿಷಿ ಕಪೂರ್ ಅವರನ್ನು ಮದುವೆಯಾಗುವ ಮೊದಲು ಮತ್ತು ಬಾಲಿವುಡ್‌ನಿಂದ ನಿವೃತ್ತಿಯಾಗುವ ಮೊದಲು ಅವರು ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ, ಮತ್ತೆ ನಟಿಸಲು ಪ್ರಾರಂಭಿಸಿದರು.

ಶಾಹಿದ್ ಕಪೂರ್
ಶಾಹಿದ್ ಕಪೂರ್ ಬಾಲ್ಯದಲ್ಲಿ ಕಾಂಪ್ಲಾನ್ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ನೃತ್ಯದಲ್ಲಿ ಆಸಕ್ತಿ ಹೊಂದಿದ್ದರು. ಬೆಳೆಯುತ್ತಿರುವಾಗ ಹಲವಾರು ಹಾಡುಗಳಲ್ಲಿ ಹಿನ್ನೆಲೆ ನೃತ್ಯಗಾರರಾಗಿ ಕೆಲಸ ಮಾಡಿದರು. ತಾಲ್‌ ಚಿತ್ರದ 'ಕಾಹಿನ್ ಆಗ್ ಲಾಗೆ' ಹಾಡಿನಲ್ಲಿ ಐಶ್ವರ್ಯ ರೈ ಬಚ್ಚನ್ ಹಿಂದೆ ಅವರನ್ನು ಕ್ಷಣಕಾಲ ನೋಡಬಹುದು. ಹದಿಹರೆಯದಲ್ಲಿ ಕೆಲವು ಮ್ಯೂಸಿಕ್ ವೀಡಿಯೊಗಳಲ್ಲಿ ನಟಿಸಿದರು. ಇಷ್ಕ್ ವಿಶ್ಕ್ (2003) ಚಿತ್ರದ ಮೂಲಕ ಪ್ರಮುಖ ತಾರೆಯಾಗಿ ಪಾದಾರ್ಪಣೆ ಮಾಡಿದರು. ಫಿದಾ, ಜಬ್ ವಿ ಮೆಟ್, ವಿವಾಹ್, ಕಮೀನೇ, ಹೈದರ್ ಮುಂತಾದ ಚಿತ್ರಗಳ ಖ್ಯಾತಿ.

ಹೃತಿಕ್ ರೋಷನ್
ಹೃತಿಕ್ ಬಾಲನಟನಾಗಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ಕಹೋ ನಾ ಪ್ಯಾರ್ ಹೈ (2000) ಚಿತ್ರದೊಂದಿಗೆ ಹೀರೋ ಆಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆಶಾ (1980) ಚಿತ್ರದಲ್ಲಿ ಮೊದಲು ನಟಿಸಿದಾಗ ಅವರಿಗೆ ಆರು ವರ್ಷ. ಅವರ ತಂದೆಯ ಪ್ರೊಡಕ್ಷನ್ ಹೌಸ್‌ನಿಂದ ಮಾಡಿದ ಆಪ್ ಕೆ ದೀವಾನೆ, ಆಸ್ ಪಾಸ್, ಇತ್ಯಾದಿಗಳಲ್ಲಿ ಕ್ಷಣಿಕ ಪಾತ್ರಗಳನ್ನು ಮಾಡಿದರು. ಪೂರ್ಣ ಸಮಯದ ನಟನಾ ವೃತ್ತಿಯನ್ನು ಮುಂದುವರಿಸುವ ಮೊದಲು ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದರು. ಮಿಷನ್ ಕಾಶ್ಮೀರ, ಫಿಜಾ, ಕಭಿ ಖುಶಿ ಕಭೀ ಘಮ್, ಮುಜ್ಸೆ ದೋಸ್ತಿ ಕರೋಗೆ, ಕೋಯಿ ಮಿಲ್ ಗಯಾ, ಕ್ರಿಶ್, ಧೂಮ್ 2 ಇತ್ಯಾದಿ ಅವರ ಕೆಲವು ಚಿತ್ರಗಳು.
 

ಆಯೇಷಾ ಟಾಕಿಯಾ
ಆಯೆಷಾ ಮೊದಲು ಕಾಂಪ್ಲಾನ್ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಅದು ಬಹಳ ಜನಪ್ರಿಯವಾಯಿತು. ನಂತರ ಅವರು ಫಲ್ಗುಣಿ ಪಾಠಕ್ ಅವರ ಮ್ಯೂಸಿಕ್ ವಿಡಿಯೋ "ಮೇರಿ ಚುನಾರ್ ಉಡ್ ಉಡ್‌ ಜಾಯೆ" ಯಲ್ಲಿ ಹದಿಹರೆಯದ ನಟಿಯಾಗಿ ನಟಿಸಿದರು. ಟಾರ್ಜಾನ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಪ್ರಮುಖ ನಟಿಯಾಗಿ ಪಾದಾರ್ಪಣೆ ಮಾಡುವ ಮೊದಲು ಹಲವು ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡರು. ಆಕೆಯ ಇತರ ಚಿತ್ರಗಳು ಸೊಚಾ ನಾ ಥಾ, ಡೋರ್, ವಾಂಟೆಡ್ ಇತ್ಯಾದಿ.

ಕುನಾಲ್ ಖೇಮು
ದೂರದರ್ಶನದಲ್ಲಿ ಗುಲ್ ಗುಲ್ಶನ್ ಗುಲ್ಫಾಮ್ ಎಂಬ ಟಿವಿ ಸೀರಿಯಲ್‌ನಲ್ಲಿ ಖೇಮು ಬಾಲನಟನಾಗಿ ತೆರೆಗೆ ಪಾದಾರ್ಪಣೆ ಮಾಡಿದರು. ಮಹೇಶ್ ಭಟ್ ಅವರ ಸರ್ (1993) ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡರು. ಇದರ ನಂತರ ರಾಜಾ ಹಿಂದೂಸ್ತಾನಿ, ಭಾಯ್, ಅಖ್ಮ್, ಮತ್ತು ಹಮ್ ಹೈ ರಾಹಿ ಪ್ಯಾರ್ ಕೆ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. ವಯಸ್ಕರಾಗಿ ಅವರ ಮೊದಲ ಚಿತ್ರ ಕಲ್ಯುಗ್ (2005). ಟ್ರಾಫಿಕ್ ಸಿಗ್ನಲ್, ಗೋಲ್ಮಾಲ್ 3, ಗೋ ಗೋವಾ ಗಾನ್ ಮುಂತಾದ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು.
 

ಇವರು ಕಾಲೇಜಿಗೂ ಹೋಗದ ಬಾಲಿವುಡ್‌ ಸೆಲೆಬ್ರಿಟಿಗಳು!

ಹನ್ಸಿಕಾ ಮೋಟ್ವಾನಿ
ಹನ್ಸಿಕಾ ಬಾಲ್ಯದಲ್ಲಿ ಶಕ ಲಕ ಬೂಮ್ ಬೂಮ್ ಧಾರಾವಾಹಿಯಲ್ಲಿ ನಟಿಸಲು ಪ್ರಾರಂಭಿಸಿದರು. ನಂತರ ಇಸ್ ದೇಸ್ ಮೇ ನಿಕ್ಲಾ ಹೋಗಾ ಚಾಂದ್ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ನಟಿಸಿದ ಕೋಯಿ ಮಿಲ್ ಗಯಾ ಚಿತ್ರದಲ್ಲಿ ಬಾಲನಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ತೆಲುಗು ಚಿತ್ರ 'ದೇಶಮಧುರು'ನಲ್ಲಿ ಪ್ರಬುದ್ಧ ಪಾತ್ರದಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದರು. ವಯಸ್ಕಳಾಗಿ ಆಕೆಯ ಮೊದಲ ಬಾಲಿವುಡ್ ಚಿತ್ರ ಆಪ್ ಕಾ ಸುರೂರ್. ಅವರು ಅನೇಕ ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಇಮ್ರಾನ್ ಖಾನ್
ಇಮ್ರಾನ್ ಖಾನ್ ನಟ ಅಮೀರ್ ಖಾನ್ ಅವರ ಸೋದರಳಿಯ. ಬಾಲ್ಯದಲ್ಲಿ ಅವರು ತಮ್ಮ ಚಿಕ್ಕಪ್ಪನ ಚಿತ್ರಗಳಾದ ಖಯಾಮತ್ ಸೆ ಖಯಾಮತ್ ತಕ್ (1988) ಮತ್ತು ಜೋ ಜೀತಾ ವೋಹಿ ಸಿಕಂದರ್ (1992) ನಲ್ಲಿ ಕಾಣಿಸಿಕೊಂಡರು. ಅಪಾರ ಯಶಸ್ವಿ ಚಿತ್ರ ಜಾನೆ ತು ಯಾ ಜಾನೆ ನಾ (2008) ಮೂಲಕ ಹೀರೋ ಆಗಿ ಪಾದಾರ್ಪಣೆ ಮಾಡಿದರು. ಅವರ ಇತರ ಕೆಲವು ಯಶಸ್ವಿ ಚಿತ್ರಗಳಲ್ಲಿ ಡೆಲ್ಲಿ ಬೆಲ್ಲಿ, ಐ ಹೇಟ್ ಲವ್ ಸ್ಟೋರೀಸ್, ಏಕ್ ಮೈ ಔರ್ ಎಕ್ ತು, ಮೇರೆ ಬ್ರದರ್ ಕಿ ದುಲ್ಹನ್ ಇತ್ಯಾದಿಗಳಿವೆ.
 

ಹೆಣ್ಣುಮಗುವಿಗೆ ತಂದೆಯಾದ ತಮ್ಮ: ಅತ್ತೆಯಾದ್ರು ಸನ್ನಿ ಲಿಯೋನ್

 

click me!