68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಉತ್ತಮ ನಟ ಸೂರ್ಯ, ಅಜಯ್ ದೇವಗನ್- ನಟಿ ಅಪರ್ಣಾ ಬಾಲಮುರಳಿ

By Shruiti G KrishnaFirst Published Jul 22, 2022, 4:59 PM IST
Highlights

ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರು ಹಂಚಿಕೊಂಡಿದ್ದಾರೆ. ಸೂರರೈ ಪೊಟ್ರು ಸಿನಿಮಾದ ಉತ್ತಮ ಅಭಿನಯಕ್ಕೆ ನಟ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ನಜ ಅಜಯ್ ದೇವಗನ್ ಸಹ ಅತ್ತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ತನ್ಹಾಜಿ ಸಿನಿಮಾದ ಉತ್ತಮ ಅಭಿನಯಕ್ಕೆ ಈ ಪ್ರಶಸ್ತಿ ಗೆದಿದ್ದಾರೆ. ಉತ್ತ್ಯುತ್ತಮ ನಟಿ ಪ್ರಶಸ್ತಿಯನ್ನು ನಟಿ ಅಪರ್ಣಾ ಬಲಾಮುರಳಿ ಗೆದ್ದಿದ್ದಾರೆ.  

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ ಒಟ್ಟು 400 ಸಿನಿಮಾಗಳು ಸ್ಪರ್ಧೆ ಮಾಡಿದ್ದವು. 30 ವಿವಿಧ ಭಾಷೆಯ ಸಿನಿಮಾಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಒಟ್ಟು 50 ವಿಭಾಗದಲ್ಲಿ ಸಿನಿಮಾಗಳು ಸ್ಪರ್ಧೆ ಮಾಡಿದ್ದವು. ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರು ಹಂಚಿಕೊಂಡಿದ್ದಾರೆ. ಸೂರರೈ ಪೊಟ್ರು ಸಿನಿಮಾದ ಉತ್ತಮ ಅಭಿನಯಕ್ಕೆ ನಟ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ನಜ ಅಜಯ್ ದೇವಗನ್ ಸಹ ಅತ್ತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ.

ತಾನ್ಹಾಜಿ ಸಿನಿಮಾದ ಉತ್ತಮ ಅಭಿನಯಕ್ಕೆ ಈ ಪ್ರಶಸ್ತಿ ಗೆದಿದ್ದಾರೆ. ಉತ್ತ್ಯುತ್ತಮ ನಟಿ ಪ್ರಶಸ್ತಿಯನ್ನು ನಟಿ ಅಪರ್ಣಾ ಬಲಾಮುರಳಿ ಗೆದ್ದಿದ್ದಾರೆ.  ಸೂರರೈ ಪೊಟ್ರು ಸಿನಿಮಾದಲ್ಲಿ ಅತ್ಯುತ್ತಮ ನಟನೆಗೆ ಅಪರ್ಣಾ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದಾರೆ. 

ಇನ್ನು ಉತ್ತಮ ಪೋಷಕ ನಟ ಪ್ರಶಸ್ತಿಯನ್ನು ಮಲಯಾಳಂನ ಖ್ಯಾತ ನಟ ಬಿಜು ಮೆನನ್ ಗೆದ್ದಿದ್ದಾರೆ.  ಅಯ್ಯಪ್ಪನುಂ ಕೊಶಿಯುಂ ಚಿತ್ರಕ್ಕಾಗಿ ಬಿಜು ಮೆನನ್ ಅವರಿಗೆ ಅತ್ಯುತ್ತಮ ಪೋಷಕ ಪ್ರಶಸ್ತಿ ಲಭಿಸಿದೆ. 

ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಕ್ಷ್ಮಿ ಪ್ರಿಯಾ ಚಂದ್ರಮೌಳಿ ಅವರಿಗೆ ಲಭಿಸಿದೆ. ತಮಿಳಿನ ಶಿವರಂಜಿನಿಯುಂ ಇನ್ನುಂ ಸಿಲಾ ಪೆಂಗಲುಂ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

ಪ್ರಶಸ್ತಿ ಗೆದ್ದವರ ಸಂಪೂರ್ಣ ಲಿಸ್ಟ್ 

  • ಅತ್ತ್ಯುತ್ತಮ ನಿರ್ದೇಶಕ- ಸಚ್ಚಿದಾನಂದ ಕೆಆರ್ (ಅಯ್ಯಪ್ಪನುಮ್ ಕೋಶಿಯನ್, ಮಲಯಾಳಂ)
  • ಅತ್ಯುತ್ತಮ ಸಂಗೀತ ನಿರ್ದೇಶಕ-  ತಮನ್ (ಅಲಾ ವೈಕುಂಠಪುರಲೋ ಸಿನಿಮಾ ಹಾಡಿಗೆ, ತೆಲುಗು) 
  • ಅತ್ಯುತ್ತಮ ಬ್ಯಾಗ್ರೌಡ್ ಸ್ಕೋರ್ -  ಜಿವಿ ಪ್ರಕಾಶ್ ಕುಮಾರ್ (ಸೂರರೈ ಪಟ್ರು, ತಮಿಳು)
  • ಅತ್ಯುತ್ತಮ ಮೇಕಪ್ ಆರ್ಟಿಸ್ಟ್- ಟಿ ವಿ ರಾಮಬಾಬು (ನಾಟ್ಯಂ, ತೆಲುಗು ಸಿನಿಮಾ)
  • ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ - ನಚಿಕೇತ್ ಬಾರ್ವೆ ಮತ್ತು ಮಹೇಶ್ ಶೆರ್ಲಾ (ತನ್ಹಾಜಿ ಸಿನಿಮಾ ಹಿಂದಿ)
  • ಅತ್ತ್ಯುತ್ತಮ ಆಡಿಯೋಗ್ರಫಿ-  ಜೋಬಿನ್ ಜಯನ್, ಲೋಕೇಶನ್ ಸೌಂಡ್ ರೆಕಾರ್ಡಿಸ್ಟ್ (ಡೊಳ್ಳು ಕನ್ನಡ ಸಿನಿಮಾ)
  • ಅತ್ಯುತ್ತಮ ಸ್ಕ್ರೀನ್ ಪ್ಲೇ -ಸೂರರೈ ಪೊಟ್ರು (ಸ್ಕ್ರೀನ್ ಪ್ಲೇ ರೈಟರ್- ಶಾಲಿನಿ ಉಷಾ ನಾಯರ್, ಸುಧಾ ಕಂಗಾರಾ)
  • ಅತ್ತ್ಯುತ್ತಮ ಗಾಯಕಿ- ನಂಚಮ್ಮ (ಮಲಯಾಳಂ, ಅಯ್ಯಪ್ಪನುಮ್ ಕೋಶಿಯುಮ್)
  • ಅತ್ತ್ಯುತ್ತಮ ಗಾಯಕ - ರಾಹುಲ್ ದೇಶಪಾಂಡೆ ( ಮರಾಠಿ, ಮಿ. ವಸಂತರಾವ್)
  • ಅತ್ತ್ಯುತ್ತಮ ಬಾಲಕಲಾವಿದ- ಅನೀಶ್ ಮಂಗೇಶ್ (ಮರಾಠಿ, ತಕ್ ತಕ್)


 

click me!