ಈಗ ಶೋಭಿತಾ, ಆದ್ರೆ ಮೊದ್ಲು ನಾಗಚೈತನ್ಯ ಆಟ ಆಡಿದ್ದು ಎಷ್ಟೊಂದು ನಟಿಯರ ಜೊತೆ?

Published : Dec 05, 2024, 12:13 PM ISTUpdated : Dec 05, 2024, 12:16 PM IST
ಈಗ ಶೋಭಿತಾ, ಆದ್ರೆ ಮೊದ್ಲು ನಾಗಚೈತನ್ಯ ಆಟ ಆಡಿದ್ದು ಎಷ್ಟೊಂದು ನಟಿಯರ ಜೊತೆ?

ಸಾರಾಂಶ

ಅವರಿಬ್ಬರೂ ಅದೆಷ್ಟು ಕ್ಲೋಸ್ ಆಗಿ ಓಡಾಡುತ್ತಿದ್ದರು ಎಂದರೆ, ಎಲ್ಲರಿಗೂ ಅವರಿಬ್ಬರ ಮಧ್ಯೆ ಲವ್ ಇದೆ, ಡೇಟಿಂಗ್ ಇದ್ದಿರಬಹುದು ಎಂದು ಸಂಶಯ ಬರುವಷ್ಟು ಹತ್ತಿರವಾಗಿದ್ದರು. ಒಟ್ಟೊಟ್ಟಿಗೇ ಅವರಿಬ್ಬರೂ ಈವೆಂಟ್‌ಗಳಿಗೆ, ಫಂಕ್ಷನ್‌ಗಳಿಗೆ ಹೋಗುತ್ತಿದ್ದರು. ಇನ್ನೇನು..

ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಕುಟುಂಬದ ಹಿರಿಯ ಕುಡಿಯೇ ನಟ ನಾಗ ಚೈತನ್ಯ. ತೆಲುಗು ಸಿನಿಮಾ 'ಜೋಶ್' ಮೂಲಕ ಟಾಲಿವುಡ್‌ಗೆ ಕಾಲಿಟ್ಟ ನಟ ನಾಗ ಚೈತನ್ಯ (Naga Chaitanya) ಅವರು ಹೆಸರು ಮಾಡಿದ್ದು 'ಯೇ ಮಾಯಾ ಚೇಸಾವೆ' ಚಿತ್ರದಿಂದ. ಬಳಿಕ ಅವರು ಹೆಚ್ಚುಹೆಚ್ಚಾಗಿ ಪ್ರೇಮಮಯ ಆಧಾರಿತ ಚಿತ್ರಗಳ ಮೂಲಕವೇ ತಮ್ಮ ಪ್ರಸಿದ್ಧಿಯನ್ನು ಬೆಳೆಸಿಕೊಂಡರು. ಜೊತೆಜೊತೆಗೆ ಹಲವು ನಟಿಯರ ಜೊತೆ ಅವರ ಅಫೇರ್ ಸುದ್ದಿ ಕೂಡ ಸುದ್ದಿಯಾಗುತ್ತ ಬಂತು. 

2011ರಲ್ಲಿ 'ಧಾಡಾ' ಚಿತ್ರದ ಸಮಯದಲ್ಲಿ ನಟ ನಾಗಚೈತನ್ಯ ಹಾಗೂ ನಟಿ ಕಾಜಲ್ ಅಗರವಾಲ್ (Kajal Aggarwal) ಒಟ್ಟಿಗೇ ಕೆಲಸ ಮಾಡುತ್ತಿದ್ದರು. ಆಗ ಅವರಿಬ್ಬರೂ ಅದೆಷ್ಟು ಕ್ಲೋಸ್ ಆಗಿ ಓಡಾಡುತ್ತಿದ್ದರು ಎಂದರೆ, ಎಲ್ಲರಿಗೂ ಅವರಿಬ್ಬರ ಮಧ್ಯೆ ಲವ್ ಇದೆ, ಡೇಟಿಂಗ್ ಇದ್ದಿರಬಹುದು ಎಂದು ಸಂಶಯ ಬರುವಷ್ಟು ಹತ್ತಿರವಾಗಿದ್ದರು. ಒಟ್ಟೊಟ್ಟಿಗೇ ಅವರಿಬ್ಬರೂ ಈವೆಂಟ್‌ಗಳಿಗೆ, ಫಂಕ್ಷನ್‌ಗಳಿಗೆ ಹೋಗುತ್ತಿದ್ದರು. ಇನ್ನೇನು ಅವರಿಬ್ಬರೂ ಮದುವೆ ಆಗಬಹುದೇನೋ ಅಂತ ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಅವರಿಬ್ಬರೂ ಒಟ್ಟಿಗೇ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿಬಿಟ್ಟರು. ಹರಿದಾಡುತ್ತಿದ್ದ ಸುದ್ದಿಯೂ ನಿಂತುಹೋಯ್ತು!

ಪವಿತ್ರಾ ಬಚಾವ್ ಮಾಡೋ ಭರದಲ್ಲಿ ದರ್ಶನ್‌ಗೆ ಖೆಡ್ಡಾ ರೆಡಿಯಾಯ್ತಾ?

ಇನ್ನು, ಮುಂದೆ ನಟ ಶ್ರುತಿ ಹಾಸನ್ (Shruti Haasan) ಜೊತೆ 2013ರಲ್ಲಿ ಲವ್ವಿಡವ್ವಿ ಶುರು ಮಾಡಿಕೊಂಡ್ರು ನಟ ನಾಗಚೈತನ್ಯ. ಅವರಿಬ್ಬರ ಆಟ-ಒಡನಾಟ, ಕಂಡು ಟಾಲಿವುಡ್ ಸೇರಿದಂತೆ ಇಡೀ ಭಾರತದಲ್ಲಿ ಹಲ್‌ಚಲ್ ಎದ್ದಿತ್ತು ಅವರಿಬ್ಬರೂ ಲವರ್ಸ್‌ ಆಗಿದ್ದಾರೆ ಎಂದು. ಆದರೆ, ಈವೆಂಟ್ ಒಂದರಲ್ಲಿ ತಮ್ಮ ಗೈರು ಹಾಜರಿಯಲ್ಲಿ ತಂಗಿ ಅಕ್ಷರಾಗೆ ಕಂಪನಿ ಕೊಡುವಂತೆ ಶ್ರುತಿ ಹಾಸನ್ ನಟ ನಾಗ ಚೈತನ್ಯಗೆ ಹೇಳಿದ್ದರಂತೆ. ಆದರೆ, ನಾಗಚೈತನ್ಯ ಅಕ್ಷರಾ ಪಕ್ಕ ಬಂದು ಕುಳಿತುಕೊಳ್ಳಲೇ ಇದೆ. ಈ ವಿಷಯಕ್ಕೆ ವಾದಮಾಡಿ ವಿವಾದ ಮಾಡಿಕೊಂಡು ನಟಿ ಶ್ರುತಿ ಹಾಸನ್ ನಾಗ ಚೈತನ್ಯರಿಂದ ದೂರ ಆಗಿಬಿಟ್ಟರು ಎನ್ನಲಾಗಿದೆ. 

ಆ ಬಳಿಕ ನಾಗ ಚೈತನ್ಯ ಲೈಫಿನಲ್ಲಿ ಬಂದವರೇ ನಟಿ ಸಮಂತಾ ರುತ್ ಪ್ರಭು. 2017ರಲ್ಲಿ ಶುರುವಾದ ಅವರಿಬ್ಬರ (Samantha Ruth Prabhu) ಲವ್-ಡವ್, ಒಟ್ಟೊಟ್ಟಿಗೇ ಓಡಾಟ, ಒಡನಾಟಗಳು ಅವರಬ್ಬರೂ ಹಸೆಮಣೆ ಏರಿ ಸಂಸಾರ ಮಾಡಿ, ಬಳಿಕ 2021ರಲ್ಲಿ ಡಿವೋರ್ಸ್‌ ಆಗುವಲ್ಲಿಗೆ ಕೊನೆಗೊಂಡಿತು. ಈಗ ನಟಿ ಶೋಭಿತಾ ಜತೆ ಎರಡನೇ ಬಾರಿ ಹಸೆಮಣೆ ಏರುತ್ತಿದ್ದಾರೆ. ಈ ಲವ್ವಡವ್ವಿ ಆಟಗಳೆರಲ್ಲವೂ ನಟ ನಾಗಚೈತ್ನ್ಯರಿಗೆ ಅವರಪ್ಪ ನಾಗಾರ್ಜುನರಿಂದ ಬಳುವಳಿ ಎಂದು ಇಡೀ ಟಾಲಿವುಡ್ ಮಾತನಾಡಿಕೊಳ್ಳುತ್ತಿದೆ. ಈ ಸಂಗತಿಯೇನೂ ಗುಟ್ಟಾಗಿ ಉಳಿದಿಲ್ಲ ಎಂಬುದು ಹಲವರಿಗೆ ಗೊತ್ತು!

ಸುದೀಪ್‌ಗೆ ಪ್ರಿನ್ಸಿಪಾಲರ ಪತ್ರ, ಕಿಚ್ಚನ ಬಗ್ಗೆ ಹೀಗೆಲ್ಲಾ ಬರೆದು ಪೋಸ್ಟ್ ಮಾಡಿದ್ರಾ?

ಸದ್ಯ ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ದುಲಿಪಾಲ (Shobhita Dhulipala) ಅವರಿಬ್ಬರೂ ಹಸೆಮಣೆ ಏರಿ ಸಂಸಾರ ಸಾಗಿಸಲು ಸಿದ್ಧರಾಗಿದ್ದಾರೆ. ಮುಂದಿನ ಕಥೆ ಏನೋ ಯಾರಿಗೆ ಗೊತ್ತು. ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ನಟ ನಾಗ ಚೈತನ್ಯ ವಿಷಯದಲ್ಲಂತೂ ನಾಳೆ ಯಾಕೆ ಇವತ್ತೇ ಏನಾಗಬಹುದು ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಪ್ರೀತಿ ಹಾಗೂ ಸಂಸಾರ ಸಾಗಿಸುವ ವಿಷಯದಲ್ಲಿ ನಾಗ ಚೈತನ್ಯ ಚಂಚಲ ಮನಸ್ಸು ಹೊಂದಿದ್ದಾರೆ ಎನ್ನಲಾಗುತ್ತದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!