ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದ ಈ ನಟಿ ಈಗ ತನಗಿಂತ 7 ವರ್ಷ ಚಿಕ್ಕವನ ಜೊತೆ ಡೇಟಿಂಗ್!‌

By Bhavani Bhat  |  First Published Dec 4, 2024, 10:06 PM IST

ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತೆಯಾದ ಈಕೆ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬಳು. ಮೊದಲ ಗಂಡನಿಗೆ ವಿಚ್ಛೇದನ ನೀಡಿರುವ ಈಕೆ ಈಗ ತನಗಿಂತ 7 ವರ್ಷ ಸಣ್ಣವನ ಜೊತೆ ಡೇಟಿಂಗ್‌ ಮಾಡ್ತಿದಾಳೆ  ಎಂಬ ಸುದ್ದಿ. 


ಆಕೆ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ಮತ್ತು ಬಹುಮುಖ ಪ್ರತಿಭೆಯ ನಟಿಯರಲ್ಲಿ ಒಬ್ಬಳು. ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತೆ. ತನ್ನ ವೃತ್ತಿಜೀವನವನ್ನು ಬಾಲ್ಯದಲ್ಲಿ 4ನೇ ವಯಸ್ಸಿನಲ್ಲಿ ಬಂಗಾಳಿ ಚಲನಚಿತ್ರ ಇಂದಿರಾ (1983) ದೊಂದಿಗೆ ಬಾಲ ಕಲಾವಿದೆಯಾಗಿ ಪ್ರಾರಂಭಿಸಿದಳು. ವಯಸ್ಕಳಾದ ಬಳಿಕ ತನ್ನ ಪ್ರಭಾವಶಾಲಿ ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದರು. ಆಕೆಯ ವೃತ್ತಿ ಜೀವನ ಮಾತ್ರವಲ್ಲ, ಅವಳ ವೈಯಕ್ತಿಕ ಜೀವನವೂ ಹಲವಾರು ಬಾರಿ ಸುದ್ದಿಯಾಗಿದೆ. ನಾವು ಹೇಳುತ್ತಿರುವುದು ಬೇರಾರ ಬಗ್ಗೆಯೂ ಅಲ್ಲ, ಬಂಗಾಳಿ ಸುಂದರಿ ಕೊಂಕಣ ಸೇನ್ ಶರ್ಮಾ ಬಗ್ಗೆ.

1979ರ ಡಿಸೆಂಬರ್‌ನಲ್ಲಿ ಜನಿಸಿದ ಆಕೆಯ ತಂದೆ ಮುಕುಲ್ ಶರ್ಮಾ ಅವರು ವಿಜ್ಞಾನ ಬರಹಗಾರರಾಗಿದ್ದರು. ತಾಯಿ ಅಪರ್ಣಾ ಸೇನ್ ನಟಿ ಮತ್ತು ಚಲನಚಿತ್ರ ನಿರ್ದೇಶಕಿ. 2001ರಲ್ಲಿ, ಕೊಂಕಣಾ ಸೇನ್‌ ಬಂಗಾಳಿ ಚಲನಚಿತ್ರ ಏಕ್ ಜೆ ಆಚೆ ಕನ್ಯಾದಲ್ಲಿ ತನ್ನ ಮೊದಲ ನಟನೆ ಮಾಡಿದಳು. ಇದರಲ್ಲಿ ಆಕೆ ನೆಗಟಿವ್‌ ಶೇಡ್‌ನ ಪಾತ್ರವನ್ನು ನಿರ್ವಹಿಸಿದಳು. ಅದೇ ವರ್ಷದಲ್ಲಿ ಆಕೆ ರಾಹುಲ್ ಬೋಸ್ ಎದುರು ಅಪರ್ಣಾ ಸೇನ್ ಅವರು ನಿರ್ದೇಶಿಸಿದ ಮಿಸ್ಟರ್ ಅಂಡ್ ಮಿಸೆಸ್ ಐಯರ್‌ ಎಂಬ ಇಂಗ್ಲಿಷ್-ಭಾಷೆಯ ಡ್ರಾಮಾ ಫಿಲಂನಲ್ಲಿ ನಟಿಸಿದಳು. ಅದು ಸೂಕ್ಷ್ಮ ನೋಡುಗರ ಹಾಗೂ ವಿಮರ್ಶಕರ ವಲಯದಲ್ಲಿ ಹಿಟ್‌ ಆಯಿತು. ಆ ಮೂಲಕ ಭಾರತೀಯ ಚಿತ್ರರಂಗದಲ್ಲಿ ಆಕೆ ಪ್ರಗತಿಸಾಧಿಸಿದಳು. 2002ರಲ್ಲಿ ಅದೇ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಳು.

Tap to resize

Latest Videos

2005ರಲ್ಲಿ ಮಧುರ್ ಭಂಡಾರ್ಕರ್ ಅವರ ಪೇಜ್‌ 3 ಫಿಲಂನಲ್ಲಿನ ಅದ್ಭುತ ಅಭಿನಯಕ್ಕಾಗಿ ಕೊಂಕಣಾ ಮನ್ನಣೆ ಪಡೆದಳು. ಅದರ ನಂತರ ಓಂಕಾರ, ಟ್ರಾಫಿಕ್ ಸಿಗ್ನಲ್, ಲೈಫ್ ಇನ್ ಎ ಮೆಟ್ರೋ, ವೇಕ್ ಅಪ್ ಸಿಡ್, ಲಕ್ ಬೈ ಚಾನ್ಸ್‌ನಂತಹ ಚಲನಚಿತ್ರಗಳಲ್ಲಿ ತನ್ನ ಪ್ರತಿಭೆ, ಅಭಿನಯದಿಂದ ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಮೆಚ್ಚಿಸಿದಳು. ಅತಿಥಿ ತುಮ್ ಕಬ್ ಜಾವೋಗೆ, 7 ಖೂನ್ ಮಾಫ್, ಏಕ್ ಥಿ ದಾಯನ್, ತಲ್ವಾರ್ ಮತ್ತು ಇತರ ಫಿಲಂಗಳು ಗೆದ್ದವು. ನಟನೆಯ ಹೊರತಾಗಿ ಕೊಂಕಣಾ ನಿರ್ದೇಶನದಲ್ಲಿ ತನ್ನ ಲಕ್‌ ಪ್ರಯತ್ನಿಸಿದಳು. 2017ರ ಚಲನಚಿತ್ರ ಎ ಡೆತ್ ಇನ್ ಗುಂಜ್‌ನೊಂದಿಗೆ ಚಲನಚಿತ್ರ ನಿರ್ಮಾಪಕಿಯಾದಳು. 2024ರಲ್ಲಿ ಲಸ್ಟ್ ಸ್ಟೋರೀಸ್ 2 ಫಿಲಂನಲ್ಲಿ ಒಂದು ಸಣ್ಣ ಕಥೆಯನ್ನು ನಿರ್ದೇಶಿಸಿದಳು.

ಎರಡು ಮದುವೆ ಆಗುವುದಕ್ಕೂ ಮುನ್ನ ನಟ ನಾಗ ಚೈತನ್ಯ ಡೇಟಿಂಗ್ ನಲ್ಲಿದ್ದ ಸ್ಟಾರ್ ನಟಿಯರಿವರು!

ಕೊಂಕಣ ಸೇನ್ ಶರ್ಮಾಳ ಲವ್‌ ಲೈಫ್‌ ಕೂಡ ಸುದ್ದಿಯಾಗಿದೆ. ಸಹ-ನಟ ರಣವೀರ್ ಶೋರೆ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದ ನಂತರ ಆಕೆಯ ವೈಯಕ್ತಿಕ ಜೀವನ ಗಮನವನ್ನು ಸೆಳೆಯಿತು. ಇಬ್ಬರೂ ಲಿವ್‌ ಇನ್‌ ಸಂಬಂಧದಲ್ಲಿದ್ದರು. 2010ರಲ್ಲಿ ಕೊಂಕಣಾ ಗರ್ಭಿಣಿಯಾದಳು. ಅದೇ ವರ್ಷದಲ್ಲಿ ಗೆಳೆಯ ರಣವೀರ್ ಅನ್ನು ವಿವಾಹವಾದಳು. ದುರದೃಷ್ಟವಶಾತ್, ಮದುವೆಯಾದ ಐದು ವರ್ಷಗಳ ನಂತರ, ರಣವೀರ್ ಮತ್ತು ಕೊಂಕಣ ತಮ್ಮ ವಿಚ್ಛೇದನ ಘೋಷಿಸಿದರು. ದಂಪತಿಗಳು ಆಗಸ್ಟ್ 2020ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಈ ದಂಪತಿಗೆ ಹರೂನ್ ಎಂಬ ಮಗ ಇದ್ದಾನೆ. ಆತನಿಗೆ ಅವರು ಸಹ-ಪೋಷಕರಾಗಿ ಮುಂದುವರಿದಿದ್ದಾರೆ.

ಇತ್ತೀಚಿನ ಮೀಡಿಯಾ ವರದಿಗಳ ಪ್ರಕಾರ ಕೊಂಕಣಾ ಪ್ರಸ್ತುತ ನಟ ಅಮೋಲ್ ಪರಾಶರ್ ಎಂಬಾತನೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ. ಟಿವಿಎಫ್ ಟ್ರಿಪ್ಲಿಂಗ್‌ನಲ್ಲಿ ಚಿತ್ವಾನ್ ಪಾತ್ರದಲ್ಲಿ ಅಮೋಲ್‌ ಜನಪ್ರಿಯವಾಗಿದ್ದಾನೆ. ಸರ್ದಾರ್ ಉದ್ಧಮ್ ಸಿಂಗ್ ಚಿತ್ರದಲ್ಲಿ ವಿಕ್ಕಿ ಕೌಶಲ್ ಅವರೊಂದಿಗೆ ನಟಿಸಿದ್ದಾನೆ. ಅಮೋಲ್ ಕೊಂಕಣಾಗಿಂತ 7 ವರ್ಷ ಚಿಕ್ಕವನು. ಡಾಲಿ ಕಿಟ್ಟಿ ಔರ್ ವೋ ಚಮಕ್ತೆ ಸಿತಾರೆಯಲ್ಲಿ ಇವರಿಬ್ಬರೂ ತೆರೆ ಹಂಚಿಕೊಂಡಿದ್ದಾರೆ. ಈ ನಡುವೆ ವೃತ್ತಿ ಜೀವನದಲ್ಲಿ ಕೊಂಕಣ ಸೇನ್ ಶರ್ಮಾ ಕೊನೆಯದಾಗಿ ಕಾಣಿಸಿಕೊಂಡಿರುವುದು ನೆಟ್‌ಫ್ಲಿಕ್ಸ್ ವೆಬ್‌ ಸೀರೀಸ್‌ ʼಕಿಲ್ಲರ್ ಸೂಪ್‌ʼನಲ್ಲಿ.

ಫ್ಲಾಪ್ ನಟನಾದ ಸೂಪರ್‌ಸ್ಟಾರ್ ಮಗ, 12ನೇ ವಯಸ್ಸಿನಲ್ಲಿಯೇ ಡ್ರಗ್ಸ್ ದಾಸ, ಈಗ ಕನ್ನಡದ ನಟಿ ಜೊತೆ ಸ್ಕ್ರೀನ್ ಶೇರ್
 

click me!