ಎಂತಹ ಅದ್ಭುತ ಸಿನಿಮಾ; ಶಾಕುಂತಲಂ ನೋಡಿ ಭಾವುಕ ಸಾಲು ಹಂಚಿಕೊಂಡ ನಟಿ ಸಮಂತಾ

Published : Mar 14, 2023, 03:49 PM IST
ಎಂತಹ ಅದ್ಭುತ ಸಿನಿಮಾ; ಶಾಕುಂತಲಂ ನೋಡಿ ಭಾವುಕ ಸಾಲು ಹಂಚಿಕೊಂಡ ನಟಿ ಸಮಂತಾ

ಸಾರಾಂಶ

 ನಟಿ ಸಮಂತಾ ಶಾಕುಂತಲಂ ಸಿನಿಮಾ ವೀಕ್ಷಿಸಿ ಭಾವುಕ ಸಾಲು ಹಂಚಿಕೊಂಡಿದ್ದಾರೆ. ತನ್ನ ತಂಡದ ಜೊತೆ ಸಮಂತಾ ಸಿನಿಮಾ ವೀಕ್ಷಿಸಿದ್ದಾರೆ. 

ಖ್ಯಾತ ನಟಿ ಸಮಂತಾ ಸದ್ಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ಸಿದ್ಧವಾಗಿರುವ ಶಾಕುಂತಲಂ, ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದೆ. ನಿರ್ದೇಶಕ ಗುಣಶೇಖರ್ ಸಾರಥ್ಯದಲ್ಲಿ ಶಾಕುಂತಲಂ ಸಿನಿಮಾ ಮೂಡಿ ಬಂದಿದ್ದು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಇದೀಗ ಸಮಂತಾ ತನ್ನದೇ ಸಿನಿಮಾವನ್ನು ವೀಕ್ಷಿಸಿ ಭಾವುಕ ಸಾಲು ಹಂಚಿಕೊಂಡಿದ್ದಾರೆ. 

ಸಮಂತಾ ತನ್ನ ಸಿನಿಮಾತಂಡದ ಜೊತೆ ಕುಳಿತು ಶಾಕುಂತಲಂ ಸಿನಿಮಾ ವೀಕ್ಷಿಸಿದ್ದಾರೆ. ಇಷ್ಟು ದಿನವಾಗಿದ್ದರೂ ಸಿನಿಮಾ ವೀಕ್ಷಿಸದ ಸಮಂತಾ ಕೊನೆಗೂ ಶಾಕುಂತಲಂ ನೋಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಿರ್ದೇಶಕ ಗುಣಶೇಖರ್ ಮತ್ತು ದಿಲ್ ರಾಜು ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಈ ಬಗ್ಗೆ  ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಸಮಂತಾ ನಿರ್ದೇಶಕ ಗುಣಶೇಖಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 

ಶಾಕುಂತಲಂನಲ್ಲಿ ಸಮಂತಾ ಮೇನಕಾ ಮತ್ತು ವಿಶ್ವಾಮಿತ್ರರ ಪುತ್ರಿ ಶಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಸಿನಿಮಾ ವೀಕ್ಷಿಸಿದ ಬಳಿಕ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂತಸ ಹೊರಹಾಕಿದ್ದಾರೆ. 

ಅಯ್ಯೋ..! ಮತ್ತೇ ಏನಾಯ್ತು; ರಕ್ತ ಸೋರುತ್ತಿರುವ ಸಮಂತಾ ಕೈ ನೋಡಿ ಫ್ಯಾನ್ಸ್ ಶಾಕ್

'ಕೊನೆಗೂ ನಾನು ಸಿನಿಮಾ ವೀಕ್ಷಿಸಿದೆ. ಗುಣಶೇಖರ್ ಅವರೇ ನೀವು ನನ್ನ ಹೃದಯ ಗೆದ್ದಿದ್ದೀರಿ. ಎಂತಹ ಅದ್ಭುತ ಸಿನಿಮಾ. ನಮ್ಮ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದನ್ನು ತುಂಬಾ ಪ್ರೀತಿಯಿಂದ ಜೀವಂತಗೊಳಿಸಲಾಗಿದೆ. ನಮ್ಮ ಕುಟುಂಬ ಪ್ರೇಕ್ಷಕರು ಶಕ್ತಿಯುತ ಭಾವನೆಗಳಿಂದ ದೂರವಾಗುವುದನ್ನು ನಾನು ಕಾಯಲು ಸಾಧ್ಯವಿಲ್ಲ. ದಿಲ್ ರಾಜು ಮತ್ತು ನೀಲಿಮಾ ಅವರೇ ಈ ಅದ್ಭುತ ಪ್ರಯಾಣಕ್ಕೆ ಧನ್ಯವಾದಗಳು. ಶಾಕುಂತಲಂ ನನಗೆ ಯಾವಾಗಲೂ ತುಂಬಾ ಹತ್ತಿರವಾದ ಸಿನಿಮಾವಾಗಿರಲಿದೆ' ಎಂದು ಬರೆದುಕೊಂಡಿದ್ದಾರೆ.

ನೋವು ನಷ್ಟ ಸಂಕಟ; ಕಷ್ಟ ದಿನಗಳಿಂದ ಹೊರ ಬಂದಿದ್ದು ಹೇಗೆಂದು ಹಂಚಿಕೊಂಡ ಸಮಂತಾ

ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದೆ. ಸಮಂತಾ ಕೊನೆಯದಾಗಿ ಯಶೋದಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಶಾಕುಂತಲಂ ಮೂಲಕ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸಮಂತಾ ಸದ್ಯ ಸಿಟಾಡೆಲ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಹಾಲಿವುಡ್‌ ಸಿಟಾಡೆಲ್‌ನ ಭಾರತದ ಅವತರಣಿಕೆಯಾಗಿದೆ. ಈ ಸೀರಿಸ್ ನಲ್ಲಿ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸೀರಿಸ್‌ಗೆ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!